ಬೆಂಗಳೂರು: ಕಾಲೇಜು ಉಪನ್ಯಾಸಕರಿಂದ ವಿದ್ಯಾರ್ಥಿಗೆ (Student) ಭಯೋತ್ಪಾದಕ ಪಟ್ಟ ಕಟ್ಟಿದ ಆರೋಪ, ತರಗತಿಯಲ್ಲಿ ಧರ್ಮದ ಹೆಸರಿನಲ್ಲಿ ನಿಂದನೆ ಆರೋಪ ಕೇಳಿ ಬಂದಿದೆ. ಪ್ರತಿಷ್ಠಿತ ಪಿಇಎಸ್ ವಿಶ್ವವಿದ್ಯಾಲಯದಲ್ಲಿ (PES University) ಈ ಆರೋಪ ಕೇಳಿ ಬಂದಿದೆ.
ವಿದ್ಯಾರ್ಥಿಯೊಬ್ಬನನ್ನು ಗುರಿಯಾಗಿಸಿಕೊಂಡು ʻಭಯೋತ್ಪಾದಕ’ (Terrorist) ಎಂದು ಕರೆದಿರುವ ಆಘಾತಕಾರಿ ಘಟನೆ ನಡೆದಿದೆ ಅಂತ ಆರೋಪ ಮಾಡಲಾಗಿದೆ. ಇದನ್ನೂ ಓದಿ: ಬೆಂಗಳೂರಿಂದ ತಿರುಪತಿಗೆ ಹೊರಟಿದ್ದ ಕಾರು ಅಪಘಾತ; ಅಪ್ಪ-ಅಮ್ಮ, 4 ವರ್ಷದ ಮಗು ಸ್ಥಳದಲ್ಲೇ ಸಾವು
ವಿದ್ಯಾರ್ಥಿ ಹೇಳುವಂತೆ, ಸುಮಾರು 60 ವಿದ್ಯಾರ್ಥಿಗಳ ಸಮ್ಮುಖದಲ್ಲೇ ಈ ಘಟನೆ. ಉಪನ್ಯಾಸಕ (Lecturer) ಧಾರ್ಮಿಕ ಮತ್ತು ಪ್ರಚೋದನಾಕಾರಿ ಪದಗಳನ್ನು ಬಳಸಿ ಅವಮಾನಿಸಿದ್ದಾರೆ. ಉಪನ್ಯಾಸಕರು ತರಗತಿಯಲ್ಲಿ ವಿದ್ಯಾರ್ಥಿಯನ್ನು ಕನಿಷ್ಠ 13 ಬಾರಿ ʻಭಯೋತ್ಪಾದಕʼ ಎಂದು ಕರೆದಿದ್ದಾರೆ. ಅಂತಾರಾಷ್ಟ್ರೀಯ ಸಂಘರ್ಷಗಳು ಮತ್ತು ರಾಜಕೀಯ ವ್ಯಕ್ತಿಗಳ ಹೆಸರನ್ನ ಎಳೆದು ತಂದು ವಿದ್ಯಾರ್ಥಿಯ ಧರ್ಮವನ್ನು ನಿಂದಿಸಿದ್ದಾರೆ. HOD ಅವರ ಸಮ್ಮುಖದಲ್ಲೂ ಉಪನ್ಯಾಸಕರು ಇದೇ ರೀತಿಯ ಅವಹೇಳನಕಾರಿ ಪದಗಳನ್ನು ಮುಂದುವರಿಸಿದ್ದಾರೆ. ಪ್ರತಿಭಟಿಸಿದ ವಿದ್ಯಾರ್ಥಿಗಳನ್ನು ಅಮಾನತು ಮಾಡಲಾಗಿದೆ. ಸಂತ್ರಸ್ತ ವಿದ್ಯಾರ್ಥಿಯ ಪರವಾಗಿ ಧ್ವನಿ ಎತ್ತಿದ 3 ರಿಂದ 4 ವಿದ್ಯಾರ್ಥಿಗಳನ್ನು ಕೂಡ ಕಾಲೇಜು ಆಡಳಿತ ಮಂಡಳಿಯು ಅಮಾನತು ಮಾಡಿದೆ. ತಪ್ಪು ಮಾಡಿದ ಉಪನ್ಯಾಸಕರ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಸಾಕ್ಷಿ ನುಡಿದ ವಿದ್ಯಾರ್ಥಿಗಳ ವಿರುದ್ಧ ಕ್ರಮ ಕೈಗೊಂಡಿದೆ ಎಂದು ಆರೋಪ ಮಾಡಲಾಗಿದೆ.
ಇನ್ನೂ ಘಟನೆ ಕುರಿತು ಪಿಇಎಸ್ ವಿವಿ ಉಪನ್ಯಾಸ ಡಾ. ಮುರುಳೀಧರ್ ದೇಶಪಾಂಡೆರನ್ನ ಅಮಾನತು ಮಾಡಿ PES ವಿಶ್ವವಿದ್ಯಾಲಯದ ಕುಲಪತಿಗಳಿಂದ ಆದೇಶ ಮಾಡಲಾಗಿದೆ. ಪ್ರಕರಣದ ಬಗ್ಗೆ ತನಿಖೆಗೆ ಆದೇಶ ನೀಡಿ ತನಿಖೆ ಮುಗಿಯೋವರೆಗೂ ಉಪನ್ಯಾಸ ಮುರಳೀಧರ್ ದೇಶಪಾಂಡೆರನ್ನ ವಿವಿ ಅಮಾನತು ಮಾಡಿದೆ. ಇದನ್ನೂ ಓದಿ: ಮೀನುಗಾರಿಕೆಗೂ ತಟ್ಟಿದ ಮಧ್ಯಪ್ರಾಚ್ಯ ಯುದ್ಧದ ಬಿಸಿ; ಇಂಧನ ಸಂಕಷ್ಟ, ಆಳ ಸಮುದ್ರ ಮೀನುಗಾರಿಕೆಗೆ ಆತಂಕ
ಪೊಲೀಸರಿಂದ ಮಾಹಿತಿ ಸಂಗ್ರಹ
ಇನ್ನೂ ಪಿಇಎಸ್ ಕಾಲೇಜು ಉಪನ್ಯಾಸಕರು ವಿದ್ಯಾರ್ಥಿಯನ್ನ ಉಗ್ರ ಎಂದಿರುವ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಗಿರಿನಗರ ಪೊಲೀಸರು ಮಾಹಿತಿ ಕಲೆಹಾಕಲು ಮುಂದಾಗಿದ್ದಾರೆ. ಆದ್ರೆ ಈ ಬಗ್ಗೆ ಯಾವುದೇ ದೂರು ಬಂದಿಲ್ಲ, ದೂರು ಬಂದ ಕೂಡಲೇ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಪೆಟ್ರೋಲ್ ಅಭಾವ ವದಂತಿ – ಬಾಟಲ್, ಕ್ಯಾನ್ ಹಿಡಿದು ಬಂಕ್ಗಳಿಗೆ ಮುಗಿಬಿದ್ದ ಜನ


