ಚಳ್ಳಕೆರೆಯಲ್ಲಿ ಪಡಿತರ ಅಕ್ಕಿ ಖರೀದಿಸಿ ಸಂಗ್ರಹ ಆರೋಪ – ಗೋದಾಮಿನ ಮೇಲೆ ದಾಳಿ

1 Min Read

ಚಿತ್ರದುರ್ಗ: ಪಡಿತರ ಅಕ್ಕಿಯನ್ನು (Ration Rice) ಖರೀದಿಸಿ ಅಕ್ರಮವಾಗಿ ಸಂಗ್ರಹಿಸಿದ್ದ ಗೋದಾಮಿನ ಮೇಲೆ ಅಧಿಕಾರಿಗಳು ದಾಳಿ ನಡೆಸಿರುವ ಘಟನೆ ಚಿತ್ರದುರ್ಗ (Chitradurga) ಜಿಲ್ಲೆ ಚಳ್ಳಕೆರೆ (Challakere) ಪಟ್ಟಣದಲ್ಲಿ ನಡೆದಿದೆ.

ಖಚಿತ ಮಾಹಿತಿ ಮೇರೆಗೆ ಚಳ್ಳಕೆರೆ ನಗರದ ಪಾವಗಡ ರಸ್ತೆಯ ಗೋದಾಮಿನ ಮೇಲೆ ಚಳ್ಳಕೆರೆ ತಹಶೀಲ್ದಾರ್ ರೆಹನ್ ಪಾಷಾ ಹಾಗೂ ಪಿಎಸ್‌ಐ ಈರೇಶ್ ನೇತೃತ್ವದಲ್ಲಿ ದಾಳಿ ನಡೆಸಿದ್ದು, ಕಡಿಮೆ ದರಕ್ಕೆ ಬಡವರಿಂದ ಪಡಿತರ ಅಕ್ಕಿ ಖರೀದಿ ಆರೋಪ ಕೇಳಿಬಂದಿದೆ. ಇದನ್ನೂ ಓದಿ: ಆದಷ್ಟು ಬೇಗ ಈ ಕೆಟ್ಟ ಮನಸ್ಸಿನ, ಸ್ವಾರ್ಥ ಮಹಿಳೆಗೆ ಡಿವೋರ್ಸ್‌ ಕೊಡ್ತೀನಿ – ಪತ್ನಿ ವಿರುದ್ಧವೇ ಸಿಡಿದ ಪ್ರತೀಕ್ ಯಾದವ್!

ಅಲ್ಲದೇ, ಪಡಿತರ ಅಕ್ಕಿಗೆ ಪಾಲಿಶ್ ಮಾಡಿ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪವಿದ್ದು, ತಹಸೀಲ್ದಾರ್, ಪೊಲೀಸರು ಹಾಗೂ ಆಹಾರ ಇಲಾಖೆ ಅಧಿಕಾರಿಗಳು ಗೋದಾಮಿನಲ್ಲಿದ್ದ ಅಕ್ಕಿಯನ್ನು ವಶಪಡಿಸಿಕೊಂಡು ಪರಿಶೀಲನೆ ಕಾರ್ಯ ಮುಂದುವರೆಸಿದ್ದಾರೆ. ಇದನ್ನೂ ಓದಿ: ಪೋಕ್ಸೋ ಕೇಸ್‌ನ ಸಂತ್ರಸ್ತೆಯ ಹೆಸರು, ವಿಳಾಸ ಬಹಿರಂಗ – ಮಾಜಿ ಸಚಿವ ಶ್ರೀರಾಮುಲು ವಿರುದ್ಧ FIR

Share This Article