ಆರೋಪಿ ದರ್ಶನ್‌ಗೆ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ – ಫೋಟೋ ವೈರಲ್‌

Public TV
1 Min Read

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್‌ (Darshan) ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ದರ್ಶನ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಫೋಟೋ ಸಹ ʻಪಬ್ಲಿಕ್ ಟಿವಿʼಗೆ (Public TV) ಲಭ್ಯವಾಗಿದೆ.

6 ವಾರಗಳ ಕಾಲ ಮಧ್ಯಂತರ ಜಾಮೀನು ಪಡೆದಿರುವ ದರ್ಶನ್‌ ಕಳೆದ 4 ವಾರಗಳಿಂದ ಬಿಜಿಎಸ್‌ ಆಸ್ಪತ್ರೆಯಲ್ಲಿ (BGS Hospital) ಪಿಸಿಯೋಥೆರಪಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ. ಮತ್ತೊಂದೆಡೆ ರೆಗ್ಯೂಲರ್‌ ಬೇಲ್‌ಗೆ ಅರ್ಜಿ ಸಲ್ಲಿಸಿದ್ದು, ಅದರ ವಿಚಾರಣೆ ಕೋರ್ಟ್‌ನಲ್ಲಿ ನಡೆಯುತ್ತಿದೆ. ಸೋಮವಾರ (ಡಿ.3) ವಿಚಾರಣೆ ಮುಂದುವರಿಯಲಿದೆ, ಈ ನಡುವೆ ದರ್ಶನ್‌ ಅವರು ಚಿಕಿತ್ಸೆ ಪಡೆಯುತ್ತಿರುವ ಫೋಟೋ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ಕರುನಾಡಿಗೂ ತಟ್ಟಿದ ಚಂಡಮಾರುತದ ಬಿಸಿ – ಈ ಜಿಲ್ಲೆಗಳಲ್ಲಿಂದು ಶಾಲಾ, ಕಾಲೇಜುಗಳಿಗೆ ರಜೆ

ತುರ್ತು ಚಿಕಿತ್ಸೆಗಾಗಿಯೇ ಹೈಕೋರ್ಟ್ ನಟ ದರ್ಶನ್‌ಗೆ 6 ವಾರಗಳ ಕಾಲ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ಚಿಕಿತ್ಸೆಗಾಗಿಯೇ ದರ್ಶನ್ ಬೆಂಗಳೂರಿಗೆ ಬಂದು 32 ದಿನಗಳು ಮುಗಿದು ಹೋಗಿವೆ. ಇನ್ನೂ 9 ದಿನಗಳು ಕಳೆದರೆ ಮತ್ತೆ ದರ್ಶನ್ ಜೈಲಿಗೆ ವಾಪಸ್ಸಾಗಬೇಕು. ಅಷ್ಟರಲ್ಲಿ ರೆಗ್ಯೂಲರ್‌ ಬೇಲ್‌ ಸಿಕ್ಕರೆ ದರ್ಶನ್‌ ಸೇಫ್‌ ಅಂತ ಹೇಳಲಾಗ್ತಿದೆ.

ಸದ್ಯಕ್ಕೆ ದರ್ಶನ್‌ಗೆ ಇನ್ನೂ ಶಸ್ತ್ರಚಿಕಿತ್ಸೆ ಆಗಿಲ್ಲ. ಕಾರಣ, ಅವರು ರಕ್ತದೊತ್ತಡದಿಂದ ಬಳಲ್ತಾ ಇದ್ದಾರಂತೆ. ಬಿಪಿ ಕಂಟ್ರೋಲ್‌ಗೆ ಬಾರದೇ ಇರೋ ಕಾರಣದಿಂದಾಗಿ ಇನ್ನೂ ಸರ್ಜರಿ ಮಾಡಲಾಗಿಲ್ಲವಂತೆ. ಹಾಗಂತ ಸರ್ಜರಿ ಆಗೋದೇ ಇಲ್ಲವಾ? ಈವರೆಗೂ ಅದು ಕಷ್ಟ ಕಷ್ಟ ಅಂತ ನಂಬಲಾಗಿತ್ತು. ಸರ್ಜರಿಗೆ ದರ್ಶನ್ ಮನಸು ಮಾಡದೇ ಇರೋ ಕಾರಣದಿಂದಾಗಿ, ಈ ಬಗ್ಗೆ ಅನುಮಾನ ವ್ಯಕ್ತವಾಗಿತ್ತು. ಈಗ ದರ್ಶನ್ ಸರ್ಜರಿಗೆ ಒಪ್ಪಿಕೊಂಡಿದ್ದಾರೆ ಅನ್ನೋ ಸುದ್ದಿ ಹರಿದಾಡ್ತಾ ಇದೆ. ಸರ್ಜರಿ ಆಗದೇ ಇದ್ದರೆ, ಡಬಲ್ ಸಂಕಷ್ಟ ಎದುರಾಗೋ ಕಾರಣದಿಂದಾಗಿ ಸರ್ಜರಿ ಮಾಡಿಸಿಕೊಳ್ಳೋಕೆ ಒಪ್ಪಿದ್ದಾರೆ ಎಂದು ಹೇಳಲಾಗ್ತಿದೆ. ಇದನ್ನೂ ಓದಿ: ದರ್ಶನ್ ಸರ್ಜರಿಗೆ ತರಾತುರಿಯಲ್ಲಿ ಪ್ಲ್ಯಾನ್‌ – ಜಾಮೀನು ಅವಧಿ ಉಳಿದಿರೋದು 11 ದಿನ ಮಾತ್ರ

Share This Article