ಭ್ರೂಣ ಹತ್ಯೆಯಿಂದ 5 ಕೋಟಿ ಹಣ ಸಂಪಾದನೆ- ಆಲೆಮನೆಯಲ್ಲಿ ನಡೀತಿತ್ತು ಅಬಾರ್ಷನ್!

Public TV
1 Min Read

ಬೆಂಗಳೂರು: ರಾಜ್ಯದಲ್ಲಿ ಭ್ರೂಣ ಹತ್ಯೆ ಪ್ರಕರಣ ಸಂಬಂಧ ಬೈಯಪ್ಪನಹಳ್ಳಿ ಪೊಲೀಸರ ತನಿಖೆಯಲ್ಲಿ ಬಗೆದಷ್ಟು ಬಯಲಾಗುತ್ತಿದೆ.

ಕಳೆದ ಎರಡು ವರ್ಷದಲ್ಲಿ ಆರೋಪಿಗಳು ಭ್ರೂಣ ಹತ್ಯೆ (Abortion) ನಡೆಸಿ 5 ಕೋಟಿ ಹಣ ಸಂಪಾದನೆ ಮಾಡಿದ್ದಾರಂತೆ. ಭ್ರೂಣ ಯಾವುದು ಅಂತಾ ಪತ್ತೆ ಮಾಡೋಕೆ 20 ರಿಂದ 25 ಸಾವಿರ ಚಾರ್ಜ್ ಮಾಡುತ್ತಿದ್ದರು. ಭ್ರೂಣ ಹೊರ ತೆಗೆಯೋಕೆ 20 ರಿಂದ 25 ಸಾವಿರ ಚಾರ್ಜ್ ಮಾಡುತ್ತಿದ್ದರು. 100% ನಿಖರ ರಿಸಲ್ಟ್ ಕೊಡ್ತಾರೆ ಅಂತಾ ಇವರಿಗೆ ಕಸ್ಟಮರ್ಸ್ ಕೂಡ ಹೆಚ್ಚಾಗುತ್ತಿದ್ದರಂತೆ.

ಕಳೆದ ಎರಡು ವರ್ಷಗಳಲ್ಲಿ 5 ಕೋಟಿಗೂ ಹೆಚ್ಚು ವಹಿವಾಟು ನಡೆಸಿದ್ದಾರಂತೆ. ಈ ಬಗ್ಗೆ ಸುಳಿವು ಪಡೆದ ಪೊಲೀಸರು, ನಾನಾ ಸರ್ಕಸ್ ಮಾಡಿ ಹಂತಕರನ್ನು ಬಂಧಿಸಿದ್ದಾರೆ. ಗರ್ಭಿಣಿಯ ಜೊತೆ ಹೋಗಿ ಸ್ಟಿಂಗ್ ಆಪರೇಷನ್ (Sting Operation) ಮಾಡಿದ್ದ ಪೊಲೀಸರು, ಭ್ರೂಣ ಪತ್ತೆ ಮಾಡುತ್ತಿದ್ದ ಜಾಗ ಪತ್ತೆ ಮಾಡಲು ಜಿಪಿಎಸ್ ಸಹ ಬಳಸಿದ್ರು. ಗರ್ಭಿಣಿಯರಿದ್ದ ಕಾರಿಗೆ ಜಿಪಿಎಸ್ ಅಳವಡಿಸಿ ಎಕ್ಸ್ಯಾಕ್ಟ್ ಲೊಕೇಶನ್ ಪತ್ತೆ ಮಾಡಿದರು. ಇದನ್ನೂ ಓದಿ: ನಿರಂತರ ಭ್ರೂಣ ಹತ್ಯೆ – ಐವರು ವೈದ್ಯರು ಸೇರಿ 9 ಮಂದಿ ಅರೆಸ್ಟ್

ಆರೋಪಿ ನವೀನ್ ಪ್ರತೀ ಬಾರಿ ಆಲೆ ಮನೆಗಳು, ತೋಟದ ಮನೆಗಳ ಲೊಕೇಶನ್ ಚೇಂಜ್ ಮಾಡುತ್ತಿದ್ದ. ಹೀಗಾಗಿ ಗರ್ಭಿಣಿಯರಿದ್ದ ಕಾರಿಗೆ ಜಿಪಿಎಸ್ ಅಳವಡಿಸಿ ಆರೋಪಿಗಳ ಹೆಡೆಮುರಿಕಟ್ಟಿದ್ದಾರೆ. ಮಗು ಯಾವುದು ಅಂತಾ ಪತ್ತೆ ಮಾಡಿ ಮೈಸೂರಿನ ಮಾತಾ ಆಸ್ಪತ್ರೆಗೆ ಈ ಗ್ಯಾಂಗ್ ಕಳುಹಿಸುತ್ತಿತ್ತು. ಶಿವನಂಜೇಗೌಡ, ವೀರೇಶ್, ನವೀನ್, ನಯನ್ ಬಂಧನದ ಬಳಿಕ ಮೈಸೂರು ಆಸ್ಪತ್ರೆ ವಿಚಾರ ಬಯಲಿಗೆ ಬಂದಿದೆ. ಸದ್ಯ ಪ್ರಕರಣದ ತನಿಖೆಯನ್ನ ಮೆಡಿಕಲ್ ವಿಭಾಗಕ್ಕೆ ವರ್ಗಾವಣೆ ಮಾಡೋ ಸಾಧ್ಯತೆಯಿದೆ.

Share This Article