ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಆರೋಪ – ಬಿಜೆಪಿ ನಾಯಕರ ವಿರುದ್ಧ ನಲಪಾಡ್ ದೂರು

Public TV
1 Min Read

ಬೆಂಗಳೂರು: ವಿಧಾನಸೌಧದಲ್ಲಿ ಪಾಕಿಸ್ತಾನ (Pakistan) ಪರ ಘೋಷಣೆ ಆರೋಪ ಹೊರಿಸಿದ ಹಿನ್ನೆಲೆ ಬಿಜೆಪಿ ನಾಯಕರ ವಿರುದ್ಧ ಕಾಂಗ್ರೆಸ್ (Congress) ಯುವ ಅಧ್ಯಕ್ಷ ಮೊಹಮ್ಮದ್ ನಲಪಾಡ್ (Mohammed Haris Nalapad) ದೂರು ನೀಡಿದ್ದಾರೆ.

ಪ್ರಚೋದನಾಕಾರಿ ಹೇಳಿಕೆ ಕೊಟ್ಟು ಸಮಾಜ ಒಡೆಯಲು ಯತ್ನಿಸುತ್ತಿರುವ ಬಿಜೆಪಿ (BJP) ನಾಯಕರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ನಲಪಾಡ್ ಕಮೀಷನರ್ ಕಚೇರಿಯಲ್ಲಿ ದೂರು ನೀಡಿದ್ದಾರೆ. ವಕೀಲ ಶತಬೀಷ್ ಶಿವಣ್ಣ ಜೊತೆ ಆಗಮಿಸಿ ಸತ್ಯಾಂಶ ಹೊರಬರುವ ಮುನ್ನವೇ ಸುಳ್ಳು ಹಬ್ಬಿಸಿದ್ದಾರೆ ಎಂದು ನಲಪಾಡ್ ದೂರು ಕೊಟ್ಟಿದ್ದಾರೆ. ಇದನ್ನೂ ಓದಿ:  ರೈತನಿಗೆ ಅವಮಾನ – ಕ್ಷಮೆಯಾಚಿಸಿ ಉಲ್ಟಾ ಹೊಡೆದ ಬಿಎಂಆರ್‌ಸಿಎಲ್

ಆರ್ ಅಶೋಕ್, ಅಶ್ವಥ್ ನಾರಾಯಣ್, ವಿಜಯೇಂದ್ರ, ಯಡಿಯೂರಪ್ಪ ವಿರುದ್ಧ ದೂರು ಕೊಡಲು ಬಂದಿದ್ದೇವೆ. ನಾಸೀರ್ ಹುಸೇನ್ ಜಿಂದಾಬಾದ್ ಎಂಬುದನ್ನು ತಿರುಚಿ ಹೇಳಲಾಗುತ್ತಿದೆ. ಅದನ್ನು ಪಾಕಿಸ್ತಾನ ಜಿಂದಾಬಾದ್ ಎಂದು ತಿರುಚಿ ಹೇಳಿ ಸಮಾಜ ಒಡೆದುಹಾಕುವ ಹೇಳಿಕೆ ನೀಡಿದ್ದಾರೆ. ಕಮ್ಯೂನಲ್ ವಿಚಾರದ ಬಗ್ಗೆ ದಂಗೆ ಹಚ್ಚಲು ಈ ರೀತಿ ಮಾಡಲಾಗುತ್ತಿದೆ. ರಾಜಕೀಯ ಮಾಡಿ ಈ ರೀತಿ ಹಬ್ಬಿಸಲಾಗುತ್ತಿದೆ. ಒಂದೇ ಒಂದು ಸಮಾಜವನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನ ಜಿಂದಾಬಾದ್‌ ಘೋಷಣೆ – ಎಡಿಟ್‌ ಮಾಡದ ಮೂಲ ವಿಡಿಯೋ ನೀಡಿದ ಪಬ್ಲಿಕ್‌ ಟಿವಿ

ನಾವೆಲ್ಲಾ ಭಾರತೀಯರು, ಕನ್ನಡಿಗರು. ಒಂದು ಸಮಾಜವನ್ನು ಟಾರ್ಗೆಟ್ ಮಾಡಿ ಅವನನ್ನು ಜೀವನ ಮಾಡಲು ಬಿಡುತ್ತಿಲ್ಲ. ಒಬ್ಬ ಸಂಸದ ಗೆದ್ದಾಗ ಜಿಂದಾಬಾದ್ ಹಾಕೋಕು ಬಿಟ್ಟಿಲ್ಲ. ಪ್ರಚೋದನಕಾರಿ ಹೇಳಿಕೆ ಕೊಟ್ಟವರ ವಿರುದ್ಧ ಎಫ್‌ಐಆರ್ ದಾಖಲಿಸಲು ಮನವಿ ಮಾಡಿದ್ದೇವೆ. ಮೂರು ಸೀಟ್ ಗೆದ್ದಿರುವುದನ್ನು ಅವರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಅದಕ್ಕೆ ಉರ್ಕೊಂಡು ಈ ರೀತಿ ಮಾಡುತ್ತಿದ್ದಾರೆ. ಕಾಂಗ್ರೆಸ್ ಶಾಸಕರನ್ನು ಖರೀದಿ ಮಾಡೋಕೆ ಆಗಲ್ಲ. ಸಿದ್ದರಾಮಯ್ಯ, ಡಿಕೆಶಿ ಇರೋವರೆಗೂ ನಮ್ಮ ಶಾಸಕರನ್ನು ಖರೀದಿ ಮಾಡಲು ಆಗಲ್ಲ. ಎಷ್ಟೇ ಕೋಟಿ ಕೊಡುತ್ತೇನೆ ಅಂದರೂ ನಮ್ಮ ಶಾಸಕರು ಸೋತಿಲ್ಲ ಎಂದು ಹರಿಹಾಯ್ದರು. ಇದನ್ನೂ ಓದಿ: ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳಿಗೆ ನೀರಿನ ಕೊರತೆ – ಲೋಡ್ ಶೆ‌ಡ್ಡಿಂಗ್ ಭೀತಿ

Share This Article