ಆಕಸ್ಮಿಕ ಬೆಂಕಿ – ಸುಟ್ಟು ಕರಕಲಾಯ್ತು 200ಕ್ಕೂ ಹೆಚ್ಚು ಗಂಧದ ಮರಗಳು

Public TV
1 Min Read

ಬಳ್ಳಾರಿ: ಆಕಸ್ಮಿಕ ಬೆಂಕಿ (Fire) ತಗುಲಿ 200ಕ್ಕೂ ಹೆಚ್ಚು ಶ್ರೀಗಂಧದ ಮರಗಳು (Sandalwood Trees) ಸುಟ್ಟು ಕರಕಲಾಗಿರುವ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕಾನಹೊಸಹಳ್ಳಿಯಲ್ಲಿ ನಡೆದಿದೆ.

ರೈತ ಚನ್ನಬಸಪ್ಪ ಎನ್ನುವವರಿಗೆ ಸೇರಿದ ಜಮೀನಿನಲ್ಲಿ ಅವಘಡ ಸಂಭವಿಸಿದೆ. ಚನ್ನಬಸಪ್ಪ ತನ್ನ 9 ಎಕರೆ ಜಮೀನಿನಲ್ಲಿ ಶ್ರೀಗಂಧ, ರಕ್ತಚಂದನ, ಪೇರಲೆ ಹಾಗೂ ಬಾಳೆ ಬೆಳೆದ್ದರು. ಇದನ್ನೂ ಓದಿ: ಲವ್ ಜಿಹಾದ್ ಕಲಿಸೋ ಮದರಸಾಗಳಿಗೆ ಸಿದ್ದರಾಮಯ್ಯ ಸರ್ಕಾರ ಹಣ ಕೊಡ್ತಿದೆ: ಯತ್ನಾಳ್ ಕೆಂಡ

 

ಚನ್ನಬಸಪ್ಪ ಅವರು 2018 ರಿಂದಲೇ ಸಸಿಗಳನ್ನ ಹಾಕಿ ಪೋಷಣೆ ಮಾಡುತ್ತಿದ್ದರು. ಇದೀಗ ಬೆಂಕಿ ತಗುಲಿ 200ಕ್ಕೂ ಅಧಿಕ ಮರಗಳು ಸಂಪೂರ್ಣ ಸುಟ್ಟು ಕರಕಲಾಗಿದೆ.

ಮಾಹಿತಿ ತಿಳಿದ ಕೂಡಲೇ ಚನ್ನಬಸಪ್ಪ ಕುಟುಂಬದೊಂದಿಗೆ ಜಮೀನಿಗೆ ಬಂದು ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಹೀಗಾಗಿ ಇನ್ನಷ್ಟು ಪ್ರಮಾಣದ ಹಾನಿ ತಪ್ಪಿದೆ. ಸದ್ಯ 200ಕ್ಕೂ ಹೆಚ್ಚು ಮರಗಳಿಗೆ ಬೆಂಕಿ ತಗುಲಿ ಲಕ್ಷಾಂತರ ರೂ ನಷ್ಟ ಆಗಿದೆ. ಕಾನಾಹೊಸಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Share This Article