ಸಂಧಾನದ ಮೂಲಕವೇ 1.23 ಕೋಟಿ ರೂ. ಹಣ ಸಂದಾಯ ಮಾಡಲು ಒಪ್ಪಿದ ವಿಮೆ ಕಂಪೆನಿ!

Public TV
1 Min Read

– ಸಂಧಾನದ ಮೂಲಕವೇ ಬಗೆಹರಿದ ಜಿಲ್ಲೆಯ ಮೊದಲ ಪ್ರಕರಣ

ಮಂಡ್ಯ: ಅಪಘಾತದಲ್ಲಿ ಮೃತಪಟ್ಟ ಕುಟುಂಬದವರಿಗೆ ಸಂಧಾನದ ಮೂಲಕವೇ ವಿಮೆ ಕಂಪೆನಿ 1 ಕೋಟಿ 23 ಲಕ್ಷ ರೂ. ಪರಿಹಾರ ಹಣ ಕೊಡಲು ಒಪ್ಪಿದ ವಿಶೇಷ ಪ್ರಕರಣ ಜಿಲ್ಲೆಯ ನಾಗಮಂಗಲದಲ್ಲಿ ನಡೆದಿದೆ.

ನಾಗಮಂಗಲ ಜೆಎಂಎಫ್‍ಸಿ ನ್ಯಾಯಾಲಯದಲ್ಲಿ ಇಂದು ಲೋಕಾ ಅದಾಲತ್ ನಡೆಯುತ್ತಿದ್ದು, ಸಂಧಾನದ ಮೂಲಕ ಪ್ರಕರಣ ಇತ್ಯರ್ಥ ಪಡಿಸಿಕೊಳ್ಳುವವರಿಗೆ ಅವಕಾಶವನ್ನು ಕಲ್ಪಿಸಿಕೊಡಲಾಗಿತ್ತು. 2016 ರಲ್ಲಿ ನಾಗಮಂಗಲ ತಾಲೂಕಿನ ಕೆಂಪನಕೊಪ್ಪಲು ಬಳಿ ಕಾರುಗಳ ನಡುವೆ ನಡೆದಿದ್ದ ಅಪಘಾತದಲ್ಲಿ ಮಂಡ್ಯ ವಿಸಿ ಫಾರಂನಲ್ಲಿ ಕೆಲಸ ಮಾಡುತ್ತಿದ್ದ ಪ್ರೊಫೆಸರ್ ಡಿ.ಕೆ. ಸಿದ್ದೇಗೌಡ ಮರಣ ಹೊಂದಿದ್ದರು. ಅಪಘಾತಕ್ಕೆ ಸಂಬಂಧಿಸಿದಂತೆ ಮೃತರ ಪತ್ನಿ ವೀಣಾ 1.26 ಕೋಟಿ ರೂ. ಪರಿಹಾರ ನೀಡುವಂತೆ ಬೇಡಿಕೆ ಇಟ್ಟು ಪ್ರಕರಣ ದಾಖಲಿಸಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಚ್‍ಡಿಎಫ್‍ಸಿ ಇನ್ಶೂರೆನ್ಸ್ ಕಂಪೆನಿ ಪರ ವಕೀಲ ಸತೀಶ್ ಮತ್ತು ಮೃತರ ಪತ್ನಿ ವೀಣಾ ಅವರ ಪರ ವಕೀಲರಾದ ಹರೀಶ್ ನೇತೃತ್ವದಲ್ಲಿ ರಾಜಿ ಸಂಧಾನ ನಡೆದಿತ್ತು. ಅಂತಿಮವಾಗಿ ಇನ್ಶೂರೆನ್ಸ್ ಕಂಪೆನಿ 1 ಕೋಟಿ 23 ಲಕ್ಷ ರೂ. ಪರಿಹಾರ ಕೊಡಲು ಒಪ್ಪಿದ್ದರಿಂದ ಸಂಧಾನದ ಮೂಲಕವೇ ಪ್ರಕರಣ ಇತ್ಯರ್ಥವಾದಂತಾಗಿದೆ.

ಅಪಘಾತದ ಇನ್ಶೂರೆನ್ಸ್ ಗೆ ಸಂಬಂಧಿಸಿದಂತೆ 1 ಕೋಟಿ 23 ಲಕ್ಷದಷ್ಟು ಬೃಹತ್ ಮೊತ್ತವಾಗಿದ್ದು, ಕೇವಲ ಸಂಧಾನದ ಮೂಲಕವೇ ಬಗೆಹರಿದ ಜಿಲ್ಲೆಯ ಮೊದಲ ಪ್ರಕರಣವಾಗಿದೆ. ಪ್ರಕರಣ ಸಂಧಾನದ ಮೂಲಕವೇ ಬಗೆಹರಿದಿದ್ದರಿಂದ ಮೃತ ಸಿದ್ದೇಗೌಡರ ಪತ್ನಿ ವೀಣಾ ನ್ಯಾಯಾಲಯಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *