ಬಾಗಲಕೋಟೆಯಲ್ಲಿ ಅಪಘಾತ – ಕೊಡಗಿನ ಯುವಕ ಬಲಿ

Public TV
1 Min Read

ಮಡಿಕೇರಿ: ಕಾರು (Car) ಮತ್ತು ಲಾರಿ (Lorry) ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ (Accident) ಕೊಡಗು (Kodagu) ಜಿಲ್ಲೆಯ ಯುವಕನೋರ್ವ ಮೃತಪಟ್ಟ ಘಟನೆ ಚಿತ್ರದುರ್ಗದಲ್ಲಿ (Chitradurga) ನಡೆದಿದೆ.

ರಂಜನ್ (35) ಮೃತ ದುರ್ದೈವಿ. ಕುಶಾಲನಗರ (Kuashalnagar) ತಾಲೂಕಿನ ಸುಂಟಿಕೊಪ್ಪ ಸಮೀಪದ ಗರಗಂದೂರು ಗ್ರಾಮದ ನಿವೃತ್ತ ಬಿಎಸ್‌ಎನ್‌ಎಲ್ ಉದ್ಯೋಗಿ ಹಾಗೂ ಶ್ರೀ ಕುರುಂಬ ಭಗವತಿ ಕೊಡಂಗಲೂರಮ್ಮ ದೇವಸ್ಥಾನದ ಮುಖ್ಯಸ್ಥರಾದ ರಾಜಣ್ಣ ಅವರ ಪುತ್ರ ರಂಜನ್ ಅಮೇಜಾನ್ ಕಂಪನಿಯ ಉದ್ಯೋಗಿಯಾಗಿದ್ದು, ಒಂದು ವಾರದ ಹಿಂದೆಯಷ್ಟೇ ಮ್ಯಾನೇಜರ್ ಹುದ್ದೆಗೆ ಬಡ್ತಿ ನೀಡಲಾಗಿತ್ತು. ಇದನ್ನೂ ಓದಿ: ಕೊಲೆಗೈದು ತಲೆಮರೆಸಿಕೊಂಡಿದ್ದ ಆರೋಪಿ 31 ವರ್ಷಗಳ ಬಳಿಕ ಅರೆಸ್ಟ್

ಶನಿವಾರ ಮಧ್ಯಾಹ್ನ ಬಾಗಲಕೋಟೆಯಲ್ಲಿ ಸ್ನೇಹಿತರೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭ ರಂಜನ್ ಇದ್ದ ಕಾರಿಗೆ ಲಾರಿಯೊಂದು ಡಿಕ್ಕಿಯಾಗಿದೆ. ಕಾರಿನಲ್ಲಿದ್ದವರ ಪೈಕಿ ಓರ್ವ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಗಂಭೀರ ಗಾಯವಾಗಿದ್ದ ರಂಜನ್ ಮತ್ತು ಇನ್ನಿಬ್ಬರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಯಿತು. ಆದರೆ ಇವರ ಪೈಕಿ ಚಿಕಿತ್ಸೆ ಫಲಕಾರಿಯಾಗದೇ ರಂಜನ್ ಶನಿವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ. ಮೃತ ರಂಜನ್, ಪತ್ನಿ ಹಾಗೂ 8 ತಿಂಗಳ ಅವಳಿಜವಳಿ ಮಕ್ಕಳನ್ನು ಅಗಲಿದ್ದಾರೆ. ಇದನ್ನೂ ಓದಿ: ಮುಂಬೈನಲ್ಲಿ ಬೆಳ್ಳಂಬೆಳಗ್ಗೆ ಅಗ್ನಿ ಅವಘಡ – 6 ಮಂದಿ ಸಜೀವ ದಹನ

Share This Article