ತಲೆ ಮೇಲೆ ಕ್ಯಾಂಟರ್‌ ಹರಿದು ಬೈಕ್ ಸವಾರ ಸ್ಥಳದಲ್ಲೇ ದುರ್ಮರಣ

Public TV
1 Min Read

ಚಿಕ್ಕಬಳ್ಳಾಪುರ: ದ್ವಿಚಕ್ರ ವಾಹನ ಸವಾರನ ತಲೆಯ ಮೇಲೆ‌ ಕ್ಯಾಂಟರ್ ಲಾರಿ ಹರಿದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯ ದೊಡ್ಡಬಳ್ಳಾಪುರದ ಪಾಲನಜೋಗಿಹಳ್ಳಿ ಬಳಿ ನಡೆದಿದೆ.

ರಾಜೀವ್ ಗಾಂಧಿ ಬಡವಾಣೆಯ ಪ್ರದೀಪ್ (35) ಮೃತ ದುರ್ದೈವಿ. ಅಂದಹಾಗೆ ದ್ವಿಚಕ್ರ ವಾಹನ ಸವಾರ ಟಿ.ಬಿ ವೃತ್ತದಿಂದ ಪಾಲನಜೋಗಿಹಳ್ಳಿ ಕಡೆಗೆ ರಾಂಗ್ ರೂಟ್ ನಲ್ಲಿ ಹೋಗುತ್ತಿದ್ದಾಗ ಗೌರಿಬಿದನೂರು ಕಡೆಯಿಂದ ದೊಡ್ಡಬಳ್ಳಾಪುರದ ಕಡೆಗೆ ಕಾರೊಂದು ವೇಗವಾಗಿ ಬಂದು ಕ್ಯಾಂಟರ್ ಲಾರಿಯನ್ನು ಓವರ್ ಟೇಕ್ ಮಾಡುವ ವೇಳೆ ಬೈಕ್ ಗೆ ಡಿಕ್ಕಿ ಹೊಡೆದಿದೆ. ಇದನ್ನೂ ಓದಿ: ಚಿನ್ನಯ್ಯನನ್ನು ಬಾಡಿಗಾರ್ಡ್‌ ಎಂದಿದ್ರು, ದೆಹಲಿಗೆ ಅವ್ರು ಕರೆದುಕೊಂಡು ಹೋಗಿದ್ರು: ಸುಜಾತ ಭಟ್‌

ಕಾರಿಗೆ ಟಚ್ ಆಗಿ ಲಾರಿಯ ಚಕ್ರದ ಅಡಿಗೆ ದ್ವಿಚಕ್ರ ವಾಹನ ಸವಾರ ಬಿದ್ದಿದ್ದಾನೆ. ಬಿದ್ದ ಕೂಡಲೇ ಲಾರಿಯ ಚಕ್ರ ಬೈಕ್ ಸವಾರನ (Bike Rider) ತಲೆಯ ಮೇಲೆ ಹರಿದ ಪರಿಣಾಮ‌ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ರಸ್ತೆಯ ತುಂಬೆಲ್ಲಾ ಚೆಲ್ಲಾಪಿಲ್ಲಿಯಾಗಿ ಮೆದುಳು ಬಿದ್ದಿದೆ. ಇದನ್ನೂ ಓದಿ: ನಮ್ಮ ಇಡೀ ಕುಟುಂಬ ಧರ್ಮಸ್ಥಳದಲ್ಲಿ ಹುಟ್ಟಿ ಬಹಳ ಪುಣ್ಯ ಮಾಡಿದೆ: ಡಿ.ವೀರೇಂದ್ರ ಹೆಗ್ಗಡೆ

ದೊಡ್ಡಬಳ್ಳಾಪುರ ಶವಾಗರಕ್ಕೆ ಮೃತ ದೇಹ ರವಾನೆ ಮಾಡಿ, ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಕ್ಯಾಂಟರ್ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಧರ್ಮಾಂಧರು ಮಾತ್ರ ಬಾನು ಮುಷ್ತಾಕ್ ಆಯ್ಕೆಯನ್ನ ವಿರೋಧಿಸುತ್ತಾರೆ: ಸಿದ್ದರಾಮಯ್ಯ

Share This Article