ತುಮಕೂರು: ಕಾರು ಮತ್ತು ಕ್ಯಾಂಟರ್ ನಡುವೆ ನಡೆದ ಭೀಕರ ಅಪಘಾತದಲ್ಲಿ (Accident) ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರುವ ಘಟನೆ ಕುಣಿಗಲ್ (Kunigal) ತಾಲ್ಲೂಕಿನ ಬಿದನೆಗೆರೆ ಬಳಿ ನಡೆದಿದೆ.
ಪತ್ನಿ ಶೋಭಾ (41) ಮಗಳು ದುಂಬಿ ಶ್ರೀ, ಮಗ ಭಾನು, ಕಿರಣ್ ಮೃತ ದುರ್ದೈವಿಗಳು. ವಿಷಯ ತಿಳಿಯುತ್ತಿದ್ದಂತೆ ಕುಣಿಗಲ್ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಇದನ್ನೂ ಓದಿ: ಅರ್ಧಶತಕ ಗಳಿಸುವ ಮುನ್ನವೇ ಬಂದ ಜವರಾಯ – ಸಿಕ್ಸರ್ ಹೊಡೆದ ಹತ್ತೇ ಸೆಕೆಂಡ್‌ನಲ್ಲಿ ಹಾರಿತು ಪ್ರಾಣಪಕ್ಷಿ
ಏನಿದು ಘಟನೆ?
ಮೃತರೆಲ್ಲರೂ ಮಾಗಡಿ ತಾಲೂಕಿನ ಯಲಗಲವಾಡಿ ಹ್ಯಾಂಡ್ ಪೊಸ್ಟ್ ನಿವಾಸಿಗಳು. ಕುಣಿಗಲ್ ಬಳಿಯ ಬೆಂಗಳೂರು – ಮಂಗಳೂರು ರಾಷ್ಟ್ರೀಯ ಹೆದ್ದಾರಿ-48 ರಲ್ಲಿ ಬರುವ ಬೈಪಾಸ್‌ನಲ್ಲಿ ಯೂಟರ್ನ್ ತೆಗೆದುಕೊಳ್ಳುವಾಗ ಕ್ಯಾಂಟರ್, ಕಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯಾದ ರಭಸಕ್ಕೆ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಪ್ರಾಧ್ಯಾಪಕಿಯ ಅಶ್ಲೀಲ ವಿಡಿಯೋ ಇಟ್ಟುಕೊಂಡು ಮದುವೆಯಾಗುವಂತೆ ಟಾರ್ಚರ್!
ಸ್ಥಳಕ್ಕೆ ಕುಣಿಗಲ್ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮೃತದೇಹಗಳು ಕುಣಿಗಲ್ ತಾಲ್ಲೂಕು ಆಸ್ಪತ್ರೆಯ ಶವಗಾರಕ್ಕೆ ರವಾನೆ ಮಾಡಲಾಗಿದೆ. ಇದನ್ನೂ ಓದಿ: 3 ರಫೇಲ್ ಸೇರಿ 5 ಯುದ್ಧ ವಿಮಾನಗಳನ್ನ ಪಾಕ್ ಹೊಡೆದಿದೆ – ಐಎಎಫ್ ಅಧಿಕಾರಿ ಹೇಳಿಕೆ ಉಲ್ಲೇಖಿಸಿ ಕಾಂಗ್ರೆಸ್ ವಾಗ್ದಾಳಿ