ಬೆಳ್ಳಂಬೆಳಗ್ಗೆ 18 ಸರ್ಕಾರಿ ಅಧಿಕಾರಿಗಳ ವಿರುದ್ಧ ದಾಳಿ- ಎಸಿಬಿಯಿಂದ ಪ್ರಾಥಮಿಕ ಮಾಹಿತಿ ರಿಲೀಸ್‌

Public TV
2 Min Read

ಬೆಂಗಳೂರು: ಭ್ರಷ್ಟಾಚಾರ ಆರೋಪಿತ 18 ಅಧಿಕಾರಿಗಳ ವಿರುದ್ಧ ಇಂದು ಬೆಳಗ್ಗೆ ಎಸಿಬಿ ದಾಳಿ ನಡೆಸಿದ್ದು, ದಾಳಿಗೆ ಸಂಬಂಧಿಸಿದಂತೆ ಪ್ರಾಥಮಿಕ ಮಾಹಿತಿ ಬಿಡುಗಡೆ ಮಾಡಿದ್ದಾರೆ.

ಇಂದು ಕರ್ನಾಟಕ ರಾಜ್ಯದಾದ್ಯಂತ 77 ಸ್ಥಳಗಳಲ್ಲಿ ವಿವಿಧ ಎಸಿಐ ತಂಡಗಳಿಂದ ಕಾರ್ಯಾಚರಣೆ ನಡೆಸಲಾಗಿದೆ. ಅಸಮತೋಲನ ಆಸ್ತಿಪಾಸ್ತಿಗಳನ್ನು ಹೊಂದಿರುವ ಆರೋಪದ ಮೇಲೆ ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಕಡೆ ಏಕಕಾಲದಲ್ಲಿ ಎಸಿಬಿ ದಾಳಿ

ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಖನಿಜ ಭವನ ಹೆಚ್ಚುವರಿ ನಿರ್ದೇಶಕರು ಚಿ.ಕೆ.ಶಿವಕುಮಾರ್ ಅವರ ಮನೆ ಮೇಲೆ ಅಸಮತೋಲನ ಆಸ್ತಿ ಹೊಂದಿರುವ ಆರೋಪದ ಮೇಲೆ ಬೆಂಗಳೂರು ನಗರ ವಿಭಾಗದವರ ನೇತೃತ್ವದಲ್ಲಿ ಎಸಿಟಿ ದಾಳಿ ನಡೆಸಿದೆ. ಒಟ್ಟು 36 ಅಧಿಕಾರಿ ಹಾಗೂ ಸಿಬ್ಬಂದಿ, 5 ತಂಡಗಳೊಂದಿಗೆ ಸರ್ಕಾರಿ ನೌಕರನಿಗೆ ಸೇರಿದ ಕಿರ್ಲ್ಲೊಸ್ಕರ್ ಕಾಲೋನಿ ಬಸವೇಶ್ವರ ನಗರದಲ್ಲಿನ ವಾಸದ ಮನೆ, ಇವರ ಸಂಬಂಧಿಕರ ಭೀಮ ಜ್ಯೋತಿ ಬಡಾವಣಿ, ಶಂಕರ ಮಠ, ಬೆಂಗಳೂರು ನಗರದಲ್ಲಿನ ವಾಸದ ಮನೆ, ಮಹಾಲಕ್ಷ್ಮೀಮರಂ, ವೆಸ್ಟ್ ಆಫ್ ಕಾರ್ಡ್ ರೋಡ್‌ನಲ್ಲಿನ ವಾಸದ ಮನೆ, ಆಪಾದಿತರ ತುಮಕೂರು ಅತ್ತಿಹಳ್ಳಿಯಲ್ಲಿನ ಫಾರಂಹೌಸ್ ಮತ್ತು ಇವರು ಕರ್ತವ್ಯ ನಿರ್ವಹಿಸುತ್ತಿರುವ ಹೆಚ್ಚುವರಿ ನಿರ್ದೇಶಕರು, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ, ಖನಿಜ ಭವನದಲ್ಲಿನ ಕಛೇರಿ ಸೇರಿದಂತೆ ಒಟ್ಟು 5 ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಲಾಗಿದ್ದು, ಶೋಧ ಕಾರ್ಯ ಮುಂದುವರಿದಿದೆ.

ರಸ್ತೆ ಸುರಕ್ಷತೆ, ಸಾರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ ಜೆ.ಜ್ಞಾನೇಂದ್ರ ಕುಮಾರ್ ಅವರ ಮನೆ ಮೇಲೆ ಬೆಂಗಳೂರು ನಗರ ವಿಭಾಗದವರ ನೇತೃತ್ವದಲ್ಲಿ ಎಸಿಬಿ ದಾಳಿ ನಡೆಸಿದೆ. ಒಟ್ಟು 36 ಅಧಿಕಾರಿ ಹಾಗೂ ಸಿಬ್ಬಂದಿ 4 ತಂಡಗಳೊಂದಿಗೆ ಸರ್ಕಾರಿ ನೌಕರನಿಗೆ ಸೇರಿದ ಬೆಂಗಳೂರು ನಗರ, ಬಸವೇಶ್ವರ ನಗರದಲ್ಲಿನ ವಾಸದ ಮನೆ, ಇವರ ಸಂಬಂಧಿಕರ ಆರೋಗ್ಯ ಬಡಾವಣೆ, ಶ್ರೀಗಂಧ ಕಾವಲುನಲ್ಲಿ ವಾಸದ ಮನೆ, ಪರಿಚಿತರ ಮಾನ್ಯತಾ ಟೆಕ್ ಪಾರ್ಕ್ ಹತ್ತಿರದ ಝನಿತ್ ಅಪಾರ್ಟ್‌ಮೆಂಟ್‌ನಲ್ಲಿನ ಫ್ಲಾಟ್ ಹಾಗೂ ಇವರು ಕಾರ್ಯನಿರ್ವಹಿಸುತ್ತಿರುವ ರಸ್ತೆ ಮತ್ತು ಸುರಕ್ಷತೆ ಸಾರಿಗೆ ಇಲಾಖೆಯಲ್ಲಿನ ಕಛೇರಿ ಸೇರಿ ಒಟ್ಟು 4 ಸ್ಥಳಗಳಲ್ಲಿ ಏಕ ಕಾಲದಲ್ಲಿ ದಾಳಿ ನಡೆಸಲಾಗಿದೆ. ಇದನ್ನೂ ಓದಿ: ಹಿರಿಯ ವಕೀಲರು ಕಾಂಗ್ರೆಸ್ ಸಂಸ್ಕೃತಿಯ ವ್ಯಕ್ತಿಯಲ್ಲ: ಕಪಿಲ್ ಸಿಬಲ್ ವಿರುದ್ಧ ಗೆಹ್ಲೋಟ್ ಕಿಡಿ

ನಗರಯೋಜನೆ ಉಪ ನಿರ್ದೇಶಕ ವಿ.ರಾಕೇಶ್ ಕುಮಾರ್ ಮನೆ ಮೇಲೆ ಬೆಂಗಳೂರು ನಗರ ವಿಭಾಗದವರ ನೇತೃತ್ವದಲ್ಲಿ ಒಟ್ಟು 27 ಅಧಿಕಾರಿ ತಂಡ ದಾಳಿ ನಡೆಸಿದೆ. ನಾಗರಭಾವಿಯ ಎರಡು ವಾಸದ ಮನೆಗಳು, ಸಂಬಂಧಿಕರ ಕಲ್ಯಾಣ ನಗರದ ವಾಸದ ಮನೆ, ಸ್ವಂತ ಊರು ತುಮಕೂರು, ಮಧುಗಿರಿ ತಾಲ್ಲೂಕಿನ ವಾಸದ ಮನೆ, ಬಿಡಿಎ ನಗರ ಯೋಜನೆಯ ಕಛೇರಿ ಸೇರಿ ಒಟ್ಟು 5 ಸ್ಥಳಗಳಲ್ಲಿ ಶೋಧ ಕಾರ್ಯ ಮುಂದುವರಿದಿದೆ.

Share This Article
Leave a Comment

Leave a Reply

Your email address will not be published. Required fields are marked *