ಬುದ್ದಿಮಾಂದ್ಯ ಮಕ್ಕಳ ಶಾಲೆಯಲ್ಲಿ ದೌರ್ಜನ್ಯ – ಶಿಕ್ಷಕರ ವಿರುದ್ಧ ಕ್ರಮಕ್ಕೆ ಹೆಬ್ಬಾಳ್ಕರ್‌ ಸೂಚನೆ

1 Min Read

ಬಾಗಲಕೋಟೆ: ದಿವ್ಯ ಜ್ಯೋತಿ ಬುದ್ದಿಮಾಂದ್ಯ ಮಕ್ಕಳ ವಸತಿ ಶಾಲೆಯಲ್ಲಿ ಮಕ್ಕಳಿಗೆ ಅಮಾನವೀಯವಾಗಿ ಶಿಕ್ಷಕರೊಬ್ಬರು (Teacher) ಹಲ್ಲೆ ನಡೆಸುತ್ತಿರುವ ವಿಡಿಯೋ (Video) ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

ಬಾಗಲಕೋಟೆ(Bagalkote) ನವನಗರದ 54ನೇ ಸೆಕ್ಟರ್‌ನಲ್ಲಿರುವ ವಸತಿ ಶಾಲೆಯಲ್ಲಿ ಶಿಕ್ಷಕ ಅಕ್ಷಯ್‌ ಇಂದೂಲ್ಕರ್‌ ಮಕ್ಕಳ ಮೇಲೇ ಮನಬಂದಂತೆ ಹಲ್ಲೆ ನಡೆಸಿದ್ದಾರೆ.

ಬೆಲ್ಟ್, ಪ್ಲಾಸ್ಟಿಕ್ ಪೈಪ್‌ನಿಂದ ಅಕ್ಷಯ್ ಹಲ್ಲೆ ಮಾಡಿದರೆ ಅಕ್ಷಯ್‌ ಪತ್ನಿ ಮಾಲಿನಿ ಮಕ್ಕಳ ಕಣ್ಣಿಗೆ ಖಾರದ ಪುಡಿ ಎರಚಿದ್ದಾಳೆ. ಇದನ್ನೂ ಓದಿ:  ಪ್ರೀತಿಸಿ ಮದುವೆಯಾದ ಎಂಟೇ ತಿಂಗಳಿಗೆ ಪತ್ನಿಯನ್ನು ಥಳಿಸಿ ಕೊಂದ ಪತಿ – ಸಿಸಿಟಿವಿಯಲ್ಲಿ ಕೃತ್ಯ ಸೆರೆ

 


ನವನಗರ ಪೊಲೀಸರು ಈಗ ಸ್ಥಳಕ್ಕೆ ಆಗಮಿಸಿ ಶಿಕ್ಷಕ ದಂಪತಿಯನ್ನು ವಶಕ್ಕೆ ಪಡೆದಿದ್ದಾರೆ. ಮಕ್ಕಳ ಹಕ್ಕುಗಳ ರಕ್ಷಣೆ ಆಯೋಗದ ಅಧಿಕಾರಿ ಸಹ ಹಾಜರಾಗಿದಾರೆ. ಬಾಗಲಕೋಟೆ ಎಸ್.ಪಿ ಸಿದ್ದಾರ್ಥ ಗೋಯಲ್‌ ಈಗ ವಿಚಾರಣೆ ನಡೆಸುತ್ತಿದ್ದಾರೆ.

ಅವನು ಹೈಪರ್ ಆಗಿದ್ದ ಹೀಗಾಗಿ ಶಿಕ್ಷೆ ಕೊಡಬೇಕಾಯ್ತು. ಆತ ಮತ್ತೊಬ್ಬ ವಿದ್ಯಾರ್ಥಿಯನ್ನು ತಳ್ಳಿದ್ದ. ಇದರಿಂದಾಗಿ ಆ ವಿದ್ಯಾರ್ಥಿಯ ಮೂಳೆ ಮುರಿದಿತ್ತು. ಹೀಗಾಗಿ ಹೆದರಿಸಲು ಈ ರೀತಿ ಶಿಕ್ಷೆ ನೀಡಿದ್ದೇವೆ. ಆದ್ರೆ ನಾವು ಖಾರದ ಪುಡಿ ಹಾಕಿಲ್ಲ ಎಂದು ಶಿಕ್ಷಕ ಅಕ್ಷಯ್‌ ಹೇಳಿದ್ದಾರೆ.

ಈ ವಿಚಾರದ ಬಗ್ಗೆ ಪಬ್ಲಿಕ್‌ ಟಿವಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಪ್ರತಿಕ್ರಿಯಿಸಿ, ತಕ್ಷಣವೇ ಶಿಕ್ಷಕ ದಂಪತಿ ವಿರುದ್ಧ ಕ್ರಮಕ್ಕೆ ಸೂಚನೆ ನೀಡಲಾಗಿದೆ. ಮುಲಾಜಿಲ್ಲದೇ ಇಬ್ಬರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಖಾಯಂ ಆಗಿ ಇಬ್ಬರನ್ನು ಅಮಾನತು ಮಾಡಲಾಗುತದೆ. ಬುದ್ದಿಮಾಂದ್ಯ ಮಕ್ಕಳಿಗೆ ರಕ್ಷಣೆ ಕೊಡಲಾಗುತ್ತದೆ ಎಂದು ತಿಳಿಸಿದ್ದಾರೆ.

Share This Article