ಅಬುದಾಬಿಯ ಲಕ್ಕಿ ಡ್ರಾ- ಉಡುಪಿಯ ಯುವಕನಿಗೆ 49 ಕೋಟಿ ರೂ. ಬಹುಮಾನ

1 Min Read

ಉಡುಪಿ: ಅಬುದಾಬಿಯ ಲಕ್ಕಿ ಡ್ರಾನಲ್ಲಿ (Abu Dhabi Lucky Draw) ಉಡುಪಿಯ (Udupi) ಯುವಕನಿಗೆ 49 ಕೋಟಿ ರೂ. ಬಹುಮಾನ ಸಿಕ್ಕಿದೆ.

ಉಡುಪಿಯ ಕಾಪು ತಾಲೂಕು ಕಟಪಾಡಿ ಮಟ್ಟು ಮೂಲದ ಶಾಂತನು ಶೆಟ್ಟಿಗಾರ್ ಬಹುಮಾನ ವಿಜೇತರಾಗಿದ್ದಾರೆ. ಯುವಕನಿಗೆ 20 ಮಿಲಿಯನ್ ದಿರಾಮ್ ಬಹುಮಾನ ಲಭಿಸಿದೆ. ಇದನ್ನೂ ಓದಿ: ಲಂಚ ನೀಡಲು ಹಣವಿಲ್ಲ, ನಾನು ಬೆಳೆದ ಮೂಲಂಗಿಯನ್ನೇ ಲಂಚವಾಗಿ ನೀಡುತ್ತೇನೆ – ತಾಲೂಕು ಕಚೇರಿ ಮುಂದೆ ಮೈಕ್‌ನಲ್ಲಿ ಅನೌನ್ಸ್ ಮಾಡಿದ ರೈತ

ಅಬುದಾಬಿಯಲ್ಲಿ ಬಿಗ್ ಟಿಕೆಟ್ ಲಕ್ಕಿ ಡ್ರಾ ನಡೆದಿತ್ತು. ಮುಖ್ಯ ಜಾಕ್ಪಾಟ್ ಜೊತೆಗೆ ಹಲವು ಹೆಚ್ಚುವರಿ ಬಹುಮಾನಗಳು ಇದ್ದ ಲಕ್ಕಿ ಡ್ರಾ ಇದಾಗಿತ್ತು. ನೇರ ಪ್ರಸಾರ ಡ್ರಾದಲ್ಲಿ ಬಹುಮಾನ ಘೋಷಣೆ ಮಾಡಲಾಯಿತು.

ಓಮನ್‌ನಲ್ಲಿ ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿ ಸೇಲ್ಸ್ ವಿಭಾಗದಲ್ಲಿ ಶಂತನು ದುಡಿಯುತ್ತಿದ್ದರು. ಸ್ನೇಹಿತನ ಜೊತೆ ಸೇರಿ ಟಿಕೆಟ್ ಖರೀದಿಸಿದ್ದರು. ಬಹುಮಾನವನ್ನು ಸ್ನೇಹಿತನ ಜೊತೆ ಹಂಚಿಕೊಳ್ಳುವುದಾಗಿ ನಿರ್ಧರಿಸಿದ್ದಾರೆ. ಇದನ್ನೂ ಓದಿ: ಇಂದಿನಿಂದ ಮೂರು ದಿನ ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ

ಬಹುಮಾನದ ಹಣವನ್ನು ಏನು ಮಾಡುವುದು ಎಂದು ನಿರ್ಧರಿಸಿಲ್ಲ. ಕುಟುಂಬದ ಜೊತೆ ಶಂತನು ಸಂತೋಷ ಹಂಚಿಕೊಂಡಿದ್ದಾರೆ. ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಮಟ್ಟು ಪರಿಸರದಲ್ಲಿ ಶಂತನು ಕುಟುಂಬ ನೆಲೆಸಿದೆ.

Share This Article