ನರೇಗಾ ರದ್ದು ರಾಜ್ಯಗಳ ಹಕ್ಕುಗಳ ಮೇಲೆ ನೇರ ದಾಳಿ – ಕೇಂದ್ರದ ವಿರುದ್ಧ ರಾಹುಲ್‌ ನಿಗಿನಿಗಿ

2 Min Read

– ಯೋಜನೆ ರದ್ದು ಪ್ರಧಾನ ಮಂತ್ರಿ ಕಚೇರಿಯ ಏಕಪಕ್ಷೀಯ ನಿರ್ಧಾರ; ಕಿಡಿ

ನವದೆಹಲಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ರದ್ದುಗೊಳಿಸಿರುವುದು ರಾಜ್ಯಗಳ ಹಕ್ಕುಗಳ ಮೇಲಿನ ನೇರ ದಾಳಿಯಾಗಿದೆ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ (Rahul Gandhi) ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ಸಭೆಯ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮನರೇಗಾ ಯೋಜನೆ ರದ್ದುಗೊಳಿಸಿರುವುದರಿಂದ ರಾಜ್ಯಗಳ ಸ್ವಾಯತ್ತತೆ, ಮೂಲಸೌಕರ್ಯಗಳ ಅಭಿವೃದ್ಧಿಗೆ ಹಿನ್ನಡೆಯಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ದಲಿತ ಸಿಎಂ ಕೂಗು; ಜಿ.ಪರಮೇಶ್ವರ್ ಮುಖ್ಯಮಂತ್ರಿ ಸ್ಥಾನ ನೀಡುವಂತೆ ಒತ್ತಾಯ

ಕೇಂದ್ರ ಸರ್ಕಾರದ ಹೊಸ ಕಾನೂನು ರಾಜ್ಯಗಳ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವನ್ನು ಕಸಿದುಕೊಳ್ಳುತ್ತದೆ. ಮೂಲಸೌಕರ್ಯ ಯೋಜನೆಗಳಿಗೆ ಹಣಕಾಸು ಒದಗಿಸಲು ಮತ್ತು ಗ್ರಾಮೀಣ ಉದ್ಯೋಗವನ್ನು ಬೆಂಬಲಿಸಲು ರಾಜ್ಯಗಳು ಐತಿಹಾಸಿಕವಾಗಿ MGNREGA ನಂತಹ ಕಾರ್ಯಕ್ರಮಗಳನ್ನು ಅವಲಂಬಿಸಿವೆ. ಈ ಕಾರ್ಯಕ್ರಮಗಳು ಸ್ಥಳೀಯ ಆಡಳಿತ ಮತ್ತು ಪ್ರಾದೇಶಿಕ ಅಭಿವೃದ್ಧಿಯ ಅವಿಭಾಜ್ಯ ಅಂಗವಾಗಿದೆ. ಆದ್ರೆ ಕೇಂದ್ರ ಸರ್ಕಾರದ ಹಸ್ತಕ್ಷೇಪವು ಈ ಪ್ರಯತ್ನಗಳನ್ನ ದುರ್ಬಲಗೊಳಿಸುತ್ತದೆ ಎಂದು ವಾದಿಸಿದ್ದಾರೆ. ಇದನ್ನೂ ಓದಿ: ಜನವರಿ 9ರ ಬಳಿಕವಷ್ಟೆ ಸಿಎಂ ಬದಲಾವಣೆ, ಸಂಪುಟ ಪುನಾರಚನೆ ಚರ್ಚೆ

ಮನರೇಗಾ ಕೇವಲ ಒಂದು ಕೆಲಸದ ಕಾರ್ಯಕ್ರಮವಲ್ಲ. ಇದು ಒಂದು ಪರಿಕಲ್ಪನಾ ಚೌಕಟ್ಟು, ಅಭಿವೃದ್ಧಿ ಚೌಕಟ್ಟು, ಅಭಿವೃದ್ಧಿಯ ಹಕ್ಕು ಆಧಾರಿತ ವಿಧಾನಕ್ಕಾಗಿ ಈ ಕಾರ್ಯಕ್ರಮವು ಅಂತರರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕವಾಗಿ ಮೆಚ್ಚುಗೆ ಪಡೆದಿದೆ. ಮನರೇಗಾವನ್ನ ರದ್ದುಗೊಳಿಸುವುದು ಪ್ರಧಾನ ಮಂತ್ರಿಗಳ ಕಚೇರಿಯ ಏಕಪಕ್ಷೀಯ ನಿರ್ಧಾರವಾಗಿದೆ ಅವರು ಸಚಿವ ಸಂಪುಟದ ಅಭಿಪ್ರಾಯವನ್ನ ತೆಗೆದುಕೊಂಡಿಲ್ಲ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ನರೇಗಾ ರದ್ದತಿ ವಿರುದ್ಧ ದೇಶದ್ಯಾಂತ ಹೋರಾಟಕ್ಕೆ ಕಾಂಗ್ರೆಸ್‌ ತೀರ್ಮಾನ

Share This Article