ನಾವಿಬ್ಬರು ಇದೇ ರೀತಿ ಮುಂದುವರಿಯೋಣ., ಹಿನ್ನಡೆಗಳಿಂದ ನಿರಾಶೆಯಾಗಬೇಡ – ನಿಖಿಲ್‍ಗೆ ಅಭಿ ವಿಶ್

Public TV
2 Min Read

ಬೆಂಗಳೂರು: ನಾವಿಬ್ಬರು ಇದೇ ರೀತಿ ಮುಂದುವರಿಯೋಣ. ಒಬ್ಬ ಸ್ನೇಹಿತನಾಗಿ ನಿನ್ನ ಯಶಸ್ಸನ್ನು ಸದಾ ಬಯಸುತ್ತೇನೆ. ಹಿನ್ನಡೆಗಳಿಂದ ನಿರಾಶೆಗೊಳ್ಳಬೇಡ ಎಂದು ಅಭಿಷೇಕ್ ಅಂಬರೀಶ್ ಶುಭ ಕೋರಿದ್ದಾರೆ.

ಲೋಕಸಭಾ ಚುನಾವಣೆ ಫಲಿತಾಂಶ ಬಂದ ಬಳಿಕ ಮೊದಲ ಬಾರಿಗೆ ಮೌನ ಮುರಿದಿರುವ ನಿಖಿಲ್ ಕುಮಾರಸ್ವಾಮಿ ಅವರು ಗೆಳೆಯ ಅಭಿಷೇಕ್ ಅಂಬರೀಶ್ ಅವರ `ಅಮರ್’ ಚಿತ್ರಕ್ಕೆ ಒಳ್ಳೆಯದಾಗಲಿ ಎಂದು ಹಾರೈಸಿ, ಸುಮಲತಾ ಅವರ ಗೆಲುವಿಗೆ ಇನ್‍ಸ್ಟಾಗ್ರಾಮ್‍ನಲ್ಲಿ ಶುಭಕೋರಿದ್ದರು. ನಿಖಿಲ್ ಶುಭಾಶಯಕ್ಕೆ ಅಭಿಷೇಕ್ ಪ್ರತಿಕ್ರಿಯಿಸಿದ್ದಾರೆ.

ಅಭಿಷೇಕ್ ಹೇಳಿದ್ದು ಹೀಗೆ:
ಧನ್ಯವಾದ ಗೆಳೆಯ. ನಿಜಕ್ಕೂ ಇದು ಖುಷಿಯ ವಿಚಾರ. ನಿನಗೂ ಗೊತ್ತಿರುತ್ತೆ. ಮೊದಲ ಸಿನಿಮಾ ಬಿಡುಗಡೆ ಆಗುವ ದಿನ ಹೇಗಿತ್ತು ಅನ್ನೋದು. ನಿನ್ನ ಮಾತುಗಳು ನನ್ನ ಮೇಲಿರುವ ಪ್ರೀತಿಯನ್ನ ತೋರುತ್ತದೆ. ಮತ್ತು ಕನ್ನಡ ಸಿನಿಮಾ ರಂಗದಲ್ಲಿನ ಒಗ್ಗಟ್ಟನ್ನು ಪ್ರದರ್ಶಿಸುತ್ತದೆ. ನಾವಿಬ್ಬರು ಇದೇ ರೀತಿ ಮುಂದುವರಿಯೋಣ. ಒಬ್ಬ ಸ್ನೇಹಿತನಾಗಿ ನಿನ್ನ ಯಶಸ್ಸನ್ನು ಸದಾ ಬಯಸುತ್ತೇನೆ. ಹಿನ್ನಡೆಗಳಿಂದ ನಿರಾಶೆಗೊಳ್ಳಬೇಡ. ಏಕೆಂದರೆ ಅದು ಜೀವನದ ಭಾಗವೆಂದು ನಮಗೆ ತಿಳಿದಿದೆ.

ಮಂಡ್ಯದ ಜಿಲ್ಲೆಯ ಬಗ್ಗೆ ನಿಮ್ಮ ಮಾತುಗಳು ಬಹಳ ಪ್ರೋತ್ಸಾಹದಾಯಕವಾಗಿವೆ. ನೀನು ನನ್ನ ತಾಯಿಯ ಪ್ರಯತ್ನವನ್ನು ಬೆಂಬಲಿಸುತ್ತಾ ಮುಂದುವರಿದರೆ ನಾವು ಎಲ್ಲರೂ ಮಂಡ್ಯದ ಸುಧಾರಣೆಗೆ ಒಟ್ಟಿಗೆ ಕೆಲಸ ಮಾಡಬಹುದು. ಮಂಡ್ಯದ ಬಗ್ಗೆ ನೀವು ಹೇಳಿರುವಂತೆ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಅನ್ವಯವಾಗಲಿ. ನಿಮ್ಮ ಮಾತುಗಳಿಗೆ ಧನ್ಯವಾದಗಳು ಎಂದು ಅಭಿಷೇಕ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.

ನಿಖಿಲ್ ಶುಭಾಶಯ:
ನಾಳೆ(ಶುಕ್ರವಾರ) ಬಿಡುಗಡೆಯಾಗುತ್ತಿರುವ ನನ್ನ ಸಹೋದರ ಅಭಿ ನಟನೆಯ ಚೊಚ್ಚಲ `ಅಮರ್’ ಸಿನಿಮಾ ಯಶಸ್ಸನ್ನು ಕಾಣಲಿ ಎಂದು ಹಾರೈಸುತ್ತಿದ್ದೇನೆ. ಎಲ್ಲರೂ ದಯವಿಟ್ಟು ಥಿಯೇಟರ್ ಗಳಿಗೆ ಹೋಗಿ `ಅಮರ್’ ಚಿತ್ರವನ್ನು ನೋಡಿ. ಅಭಿ ಸಿನಿಮಾದಲ್ಲಿ ಚೆನ್ನಾಗಿ ಅಭಿನಯಿಸಿರುತ್ತಾರೆ ಎಂಬ ನಂಬಿಕೆ ಇದೆ ಎಂದು ಅಭಿಷೇಕ್‍ಗೆ ಶುಭ ಕೋರಿದ್ದಾರೆ.

https://www.instagram.com/p/ByE3AIbHwi7/

ಕೆಲವರು ನಾನು ತೋರ್ಪಡಿಕೆಗಾಗಿ ವಿಶ್ ಮಾಡುತ್ತಿದ್ದೇನೆ ಅಂದುಕೊಳ್ಳುತ್ತಾರೆ. ಅಂತಹವರಿಗೆ ನಾನು ಹೇಳಲು ಇಷ್ಟಪಡುವುದೇನೆಂದರೆ, ಪ್ರಚಾರದ ಸಮಯದಲ್ಲೂ ನಾನು ಸಂಬಂಧಗಳಿಗೆ ಬೆಲೆ ಕೊಡುತ್ತೇನೆ ಎಂದು ಹೇಳಿದ್ದೆ. ಈಗಲೂ ಅದನ್ನೇ ಹೇಳುತ್ತೇನೆ. ಸುಮಕ್ಕ ಮಂಡ್ಯದಲ್ಲಿ ಗೆದ್ದಿದ್ದಾರೆ. ಹೀಗಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಜೊತೆಗೆ ನಾನು ಮಂಡ್ಯದ ಅಭಿವೃದ್ಧಿಗೆ ಯಾರ ಜೊತೆಗೆ ಬೇಕಾದರೂ ಕೈ ಜೋಡಿಸಲು ಸಿದ್ಧನಾಗಿದ್ದೇನೆ ಎಂದು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *