ಅಭಿಷೇಕ್ ಅಂಗೈಯಲ್ಲಿ ಅರಳಿದ ಭಾವಿ ಪತ್ನಿ ಅವಿವಾ

Public TV
1 Min Read

ನಿನ್ನೆ  ಅರಿಶಿನ ಶಾಸ್ತ್ರ ಮುಗಿಸಿರುವ ಅಭಿಷೇಕ್ ಅಂಬರೀಶ್  (Abhishek Ambareesh)ಹಾಗೂ ಅವಿವಾ, ಇಂದು ಮೆಹಂದಿ (Mehndi) ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ತಮ್ಮ ಅಂಗೈಯಲ್ಲಿ ರೆಬಲ್, ಸುಮಾ, ಅವಿವಾ ಎಂದು ಮಹೆಂದಿಯಲ್ಲಿ ಅಭಿಷೇಕ್ ಬರೆಯಿಸಿಕೊಂಡಿದ್ದಾರೆ. ಅವಿವಾ ಅಂಗೈಯಲ್ಲಿ ಚಿತ್ತಾರ ಮೂಡಿದ್ದರೆ, ಅಭಿಷೇಕ್ ಕೈಯಲ್ಲಿ ಅಪ್ಪ ಅಮ್ಮ ಮತ್ತು ಭಾವಿ ಪತ್ನಿಯ ಹೆಸರು ಇದೆ.

ಅಭಿಷೇಕ್ ಅಂಬರೀಶ್- ಅವಿವ ಬಿಡಪ (Aviva Bidapa) ಜೋಡಿ ಕಳೆದ ನಾಲ್ಕೈದು ವರ್ಷಗಳಿಂದ ಪ್ರೀತಿಸಿ, ಇದೀಗ ಮದುವೆ ಎಂಬ ಮುದ್ರೆ ಒತ್ತಲು ರೆಡಿಯಾಗಿದ್ದಾರೆ. ಜೂನ್ 5ರಂದು (ಸೋಮವಾರ) ಅದ್ದೂರಿಯಾಗಿ ಮದುವೆ (Wedding) ಕಾರ್ಯಕ್ರಮ ಜರುಗಲಿದೆ. ಜೂನ್ 7ರಂದು ಭರ್ಜರಿಯಾಗಿ ಆರತಕ್ಷತೆ ಸಮಾರಂಭ ನಡೆಯಲಿದೆ. ಅಭಿಷೇಕ್- ಅವಿವ ವಿವಾಹದ ಆಮಂತ್ರಣ ಪತ್ರ ವೈರಲ್ ಆಗಿದೆ. ಸದ್ಯ ವೈಟ್ ಬಣ್ಣದ ಉಡುಗೆಯಲ್ಲಿ ಅಭಿಷೇಕ್ ಅರಿಶಿನ ಶಾಸ್ತ್ರದಲ್ಲಿ (Arishina Shastra) ಮಿಂಚಿದ್ದಾರೆ. ಮನೆ ಕೂಡ ಅದ್ದೂರಿಯಾಗಿ ಅಲಂಕರಿಸಲಾಗಿದೆ. ಇದನ್ನೂ ಓದಿ:ಶಕುನಿ ಪಾತ್ರಧಾರಿ ಗೂಫಿ ಆರೋಗ್ಯ ಸ್ಥಿತಿ ಗಂಭೀರ

ಇನ್ನೂ 2022ರ ಡಿಸೆಂಬರ್ 11ರಂದು ಅಭಿಷೇಕ್ ಹಾಗೂ ಅವಿವ ನಿಶ್ಚಿತಾರ್ಥ ನೆರವೇರಿತು. ಕುಟುಂಬದವರು, ಆಪ್ತರು, ಗಣ್ಯರ ಸಮ್ಮುಖದಲ್ಲಿ ಈ ಶುಭ ಕಾರ್ಯ ನಡೆದಿತ್ತು. ಈಗ ಮದುವೆಗೆ ಸಿದ್ಧತೆ ನಡೆಯುತ್ತಿದೆ. ಜೂನ್ 4ರಂದು ಜೆಪಿ ನಗರದ ಅಂಬಿ ನಿವಾಸದಲ್ಲಿ ಚಪ್ಪರ ಪೂಜೆ ನಡೆಯಲಿದೆ. ಜೂನ್ 5ರಂದು ಮಾಣಿಕ್ಯ-ಚಾಮರ ವಜ್ರದಲ್ಲಿ ಬೆಳಿಗ್ಗೆ ಕರ್ಕಾಟಕ ಲಗ್ನದಲ್ಲಿ (9:30-10:30) ಮದುವೆ ಸಮಾರಂಭ ನಡೆಯಲಿದೆ. ಜೂನ್ 7ಕ್ಕೆ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್‌ನ ತ್ರಿಪುರ ವಾಸಿನಿಯಲ್ಲಿ ಅದ್ದೂರಿಯಾಗಿ ಆರತಕ್ಷತೆ ಕಾರ್ಯಕ್ರಮ ಜರುಗಲಿದೆ.

 

ಸಿನಿಮಾ- ರಾಜಕೀಯ (Politics) ಎರಡೂ ಕ್ಷೇತ್ರದ ಗಣ್ಯರು ಅಭಿಷೇಕ್- ಅವಿವ ಆರತಕ್ಷತೆಗೆ ಬರಲಿದ್ದಾರೆ. ಮದುವೆಗೆ ಆಪ್ತ ಬಳಗದವರಿಗಷ್ಟೇ ಆಹ್ವಾನ ನೀಡಲಾಗಿದೆ. ಜೂನ್ 16ರಂದು ಮಂಡ್ಯದಲ್ಲಿ ಬೀಗರ ಊಟ ನಡೆಯಲಿದೆ. ಹೊಸ ಬಾಳಿಗೆ ಕಾಲಿಡುತ್ತಿರುವ ಹೊಸ ಜೋಡಿಗೆ ಅಭಿಮಾನಿಗಳು ಶುಭಹಾರೈಸುತ್ತಿದ್ದಾರೆ.

Share This Article