ಬೀಗರೂಟ ಕಾರ್ಯಕ್ರಮಕ್ಕೆ ಮಂಡ್ಯಗೆ ಹೊರಟ ಅಭಿಷೇಕ್ ದಂಪತಿ

Public TV
1 Min Read

ಭಿಷೇಕ್ ಅಂಬರೀಶ್- ಅವಿವಾ (Aviva) ಜೋಡಿ ಮದುವೆಯ ಬೀಗರೂಟ ಕಾರ್ಯಕ್ರಮಕ್ಕೆ ಮಂಡ್ಯಗೆ ಹೊರಟಿದ್ದಾರೆ. ಜೂನ್ 5ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವಜೋಡಿ ಇದೀಗ ಮಂಡ್ಯದತ್ತ ಪಯಣ ಬೆಳೆಸಿದ್ದಾರೆ. ಈಗಾಗಲೇ ಮಂಡ್ಯದ ಜನರಿಗೆ ವೀಡಿಯೋ ಮೂಲಕ ಬೀಗರೂಟ ಕಾರ್ಯಕ್ರಮಕ್ಕೆ ಸುಮಲತಾ (Sumalatha), ಅಭಿಷೇಕ್ ಜೋಡಿ ಆಮಂತ್ರಣ ನೀಡಿದ್ದಾರೆ.

ಹಲವು ವರ್ಷಗಳ ಪ್ರೀತಿಗೆ ಜೂನ್ 5ರಂದು ಅಭಿ- ಅವಿವಾ ಜೋಡಿ ಮದುವೆ ಮುದ್ರೆ ಒತ್ತುವ ಮೂಲಕ ಹೊಸ ಬಾಳಿಗೆ ಕಾಲಿಟ್ಟರು. ಜೂನ್ 7ರಂದು ಅಭಿವಾ ಆರತಕ್ಷತೆಯನ್ನ ಮಾಡಲಾಯಿತು. ಈ ಕಾರ್ಯಕ್ರಮಕ್ಕೆ ಕನ್ನಡ ಮಾತ್ರವಲ್ಲದೇ ಸೌತ್, ಬಾಲಿವುಡ್ ಸೂಪರ್ ಸ್ಟಾರ್ಸ್ ಕೂಡ ಆಗಮಿಸಿದ್ದರು. ಅಂಬಿ ಸ್ನೇಹ ವರ್ಗವೇ ಅಭಿಷೇಕ್ ವಿವಾಹ ಸಮಾರಂಭದಲ್ಲಿ ಸಾಕ್ಷಿಯಾದರು.

ಅಂಬಿ ಕುಟುಂಬಕ್ಕೂ ಮಂಡ್ಯಗೂ ನಂಟಿದೆ. ಹಾಗಾಗಿ ಮಂಡ್ಯದ ಜನರಿಗೆ ಅಭಿವಾ ಮದುವೆಯ ಬೀಗರೂಟಕ್ಕೆ ಅದ್ದೂರಿಯಾಗಿ ಸಿದ್ಧತೆ ನಡೆದಿದೆ. ಅಷ್ಟೇ ಅಲ್ಲ, ಮಂಡದತ್ತ ನವಜೋಡಿ ತಮ್ಮ ಖಾಸಗಿ ಕಾರಿನಲ್ಲಿ ಹೊರಟಿದ್ದಾರೆ. ಇನ್ನೂ ಕೆಂಪು ಸೀರೆಯಲ್ಲಿ ಅವಿವಾ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಶರ್ಟ್‌- ಪಂಚೆ ಜೊತೆ ಶಲ್ಯ ಧರಿಸಿ ಅಭಿಷೇಕ್‌(Abhishek Ambareesh) ಮಿಂಚಿದ್ದಾರೆ. ಮಂಡ್ಯದಲ್ಲಿ ವಿಶಾಲವಾದ ಜಾಗದಲ್ಲಿ ಬೃಹತ್ ಜರ್ಮನ್ ಟೆಂಟ್ ಹಾಕಿ ಜನರು ಕುಳಿತು ಊಟ ಮಾಡಲು ವ್ಯವಸ್ಥೆ ಮಾಡಲಾಗಿದ್ದು, ಒಂದೇ ಬಾರಿಗೆ 4500 ಮಂದಿ ಕುಳಿತು ಊಟ ಮಾಡಬಹುದಾಗಿದೆ. ಇಂದು ಬೆಳಗ್ಗೆ 11ರಿಂದ ಔತಣಕೂಟ ಆರಂಭವಾಗಲಿದೆ. ಇದನ್ನೂ ಓದಿ:ಟಾಪ್‌ಲೆಸ್ ಆಗಿ ಕಾಣಿಸಿಕೊಂಡ ತಮನ್ನಾ ಭಾಟಿಯಾ- ಹಾಟ್ ವೀಡಿಯೋ ವೈರಲ್

ಮಂಡ್ಯ ಶೈಲಿಯಲ್ಲಿ ಬಾಡೂಟ ತಯಾರಿಗೊಳ್ಳುತ್ತಿದ್ದು, ಮಂಡ್ಯದ ಪ್ರಖ್ಯಾತ ಬಾಣಸಿಗರ ತಂಡದ 900 ಮಂದಿಯಿಂದ ಅಡುಗೆ ತಯಾರಿ ಕಾರ್ಯಗಳು ಬಿರುಸಿನಿಂದ ನಡೆಯುತ್ತಿದೆ. 7 ಟನ್ ಮಟನ್, 8 ಟನ್ ಚಿಕನ್ ಬಳಸಿ ಭರ್ಜರಿ ಬಾಡೂಟವನ್ನು ಸಿದ್ಧಗೊಳಿಸಲಾಗುತ್ತಿದೆ. ರಾಗಿಮುದ್ದೆ, ಮಟನ್ ಬಿರಿಯಾನಿ, ಬೋಟಿ ಗೊಜ್ಜು, ನಾಟಿಕೋಳಿ ಸಾಂಬಾರ್, ಕಬಾಬ್, ಮೊಟ್ಟೆ, ರೈಸ್, ತಿಳಿ ಸಾಂಬಾರ್, ಬಾದುಶಾ, ಪಾಯಸ, ಬೀಡಾ, ಐಸ್‌ಕ್ರೀಂ, ಬಾಳೆಹಣ್ಣು ಇದು ಬೀಗರೂಟದ ಮೆನು ಆಗಿದೆ.

Share This Article