ಭಾವಿ ಪತ್ನಿ ಅವಿವಾಗೆ ದುಬಾರಿ ಬೆಲೆಯ ಉಂಗುರ ತೊಡಿಸಿದ ಅಭಿಷೇಕ್‌

Public TV
1 Min Read

ಸುಮಲತಾ ಅಂಬರೀಶ್ (Sumalatha Ambreesh) ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ನಿನ್ನೆಯಷ್ಟೇ ಅಂಬಿ ಪುತ್ರ ಅಭಿಷೇಕ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಫ್ಯಾಷನ್ ಡಿಸೈನರ್ ಪ್ರಸಾದ್ ಬಿದ್ದಪ್ಪ (Prasad Biddappa) ಪುತ್ರಿ ಅವಿವಾ(Aviva) ಜೊತೆ ಅಭಿಷೇಕ್ ಎಂಗೇಜ್ ಆಗಿದ್ದಾರೆ. ಸದ್ಯ ಭಾವಿ ಪತ್ನಿಗೆ ತೊಡಿಸಿರುವ ಉಂಗುರದ ಬೆಲೆಯ ವಿಚಾರವಾಗಿ ಸುದ್ದಿಯಲ್ಲಿದ್ದಾರೆ.

ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಅಭಿಷೇಕ್ (Abhishek) ಮತ್ತು ಅವಿವಾ ನಿಶ್ಚಿತಾರ್ಥ ಅದ್ದೂರಿಯಾಗಿ ನಡೆದಿದೆ. ಈ ಸಂಭ್ರಮಕ್ಕೆ ಯಶ್ ದಂಪತಿ, ಪ್ರಜ್ವಲ್ ದೇವರಾಜ್, ಗುರುಕಿರಣ್, ರಾಕ್‌ಲೈನ್ ವೆಂಕಟೇಶ್, ಸ್ವಪ್ನ ಕೃಷ್ಣ ದಂಪತಿ ಸೇರಿದಂತೆ ಹಲವರು ಸಾಕ್ಷಿಯಾಗಿದ್ದಾರೆ. ಸಾಕಷ್ಟು ವರ್ಷಗಳ ಡೇಟಿಂಗ್ ನಂತರ ಆಪ್ತರ ಸಮ್ಮುಖದಲ್ಲಿ ಎಂಗೇಜ್ ಆಗಿರುವ ಅಭಿಷೇಕ್, ಭಾವಿ ಪತ್ನಿ ಅವಿವಾಗೆ ದುಬಾರಿ ವಜ್ರದ ರಿಂಗ್ ತೊಡಿಸಿದ್ದಾರೆ. ಇದನ್ನೂ ಓದಿ: ಕೊನೆಗೂ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ರು ರಾಮ್ ಚರಣ್ ದಂಪತಿ

ಅಭಿಷೇಕ್, ಅವಿವಾಗೆ ವಜ್ರದ ಉಂಗುರ ತೊಡಿಸಿದ್ದಾರೆ. ಈ ಉಂಗುರವನ್ನು ವಿಶೇಷವಾಗಿ ಪುಣೆಯಲ್ಲಿ ಮಾಡಿಸಿದ್ದಾರೆ. ಈ ವಜ್ರದ ಉಂಗುರದ ಬೆಲೆ 37 ಲಕ್ಷ (37 Lakh) ರೂಪಾಯಿ ಮೌಲ್ಯದಾಗಿದೆ ಎಂದು ಹೇಳಲಾಗುತ್ತಿದೆ.

ಇನ್ನೂ ಈ ಜೋಡಿ ಮುಂದಿನ ವರ್ಷ ಹಸೆಮಣೆ ಏರಲಿದೆ. ಸದ್ಯ ಹೊಸ ಬಾಳಿಗೆ ಕಾಲಿಡುತ್ತಿರುವ ಜೋಡಿಗೆ ಅಭಿಮಾನಿಗಳು ಶುಭ ಹಾರೈಸಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article