ಬೀಗರೂಟದಲ್ಲಿ ರಾಜಕೀಯ ತರಬೇಡಿ : ಅಭಿಷೇಕ್ ಅಂಬರೀಶ್ ಮನವಿ

Public TV
2 Min Read

ಇಂದು ಮಂಡ್ಯದಲ್ಲಿ ನಡೆದ ಅಭಿಷೇಕ್ ಅಂಬರೀಶ್ (Ambarish) ಮತ್ತು ಅವಿವಾ (Aviva) ಮದುವೆಯ ಬೀಗರೂಟದ ಬಗ್ಗೆ ಕೆಲವರು ಅಪಪ್ರಚಾರ ನಡೆಸುತ್ತಿದ್ದಾರೆ. ಇದೊಂದು ರಾಜಕೀಯ ಪ್ರೇರಿತ ಬೀಗರೂಟ (Beegaruta) ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ ಅಭಿಷೇಕ್ (Abhishek) ಅಂಬರೀಶ್ ಪ್ರತಿಕ್ರಿಯೆ ನೀಡಿದ್ದು, ಇದನ್ನು ರಾಜಕೀಯಕ್ಕೆ ತರಬೇಡಿ ಎಂದು ಹೇಳಿದ್ದಾರೆ.

ನಾವು ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚು ಪ್ರೀತಿ ತೋರಿಸಿದ್ದಾರೆ. ಊಟಕ್ಕಿಂತ ನಿಮ್ಮನ್ನು ನೋಡಲು ಬಂದೆ ಅನ್ನೋರು ಇದ್ರು. ಊಟ ಮಿಸ್ ಆಗಿದ್ದಕ್ಕೆ ಬೇಜಾರಾಗಿದೆ. ರಾಜಕೀಯ ವಿರೋಧಿಗಳು ಇದನ್ನು ಬಳಸಿಕೊಂಡರೆ ಅವರಿಗೂ ಒಳ್ಳೆಯದು ಆಗಲಿ. ಊಟ ಶಾರ್ಟೇಜ್ ಅನ್ನೋದು ಸುಳ್ಳು. ಊಟ ಬಿದ್ದಿದೆ. ನಮ್ಮ ತಂದೆಯ ಆಸೆಯಂತೆ ಮದುವೆಯಾಗಿದ್ದೇನೆ. ಇಲ್ಲದಿದ್ದರೆ ಸಿಂಪಲ್ ಆಗಿ ಮದುವೆಯಾಗುತ್ತಿದ್ದೆ ಎಂದಿದ್ದಾರೆ. ಇದನ್ನೂ ಓದಿ: ಮಂಡ್ಯದಲ್ಲಿ ಟೀ ಕುಡಿದ ಅಭಿಷೇಕ್: ಥೇಟ್ ಅಪ್ಪನಂತೆ ಮಗ ಎಂದ ಫ್ಯಾನ್ಸ್

ಲವ್ ಮಾಡುವಾಗ ಎಷ್ಟು ಈಜಿಯಾಗಿ ನಿಭಾಸಬಹುದೋ, ಮದುವೆಯಾದ ಮೇಲೂ ಈಜಿಯಾಗಿ ನಿಭಾಯಿಸಬಹುದು ಅನ್ನೋ ಉದ್ದೇಶದಿಂದ ಮದುವೆಯಾದೆ. ಮುಂದಿನ ದಿನಗಳಲ್ಲಿ ಅವಿವಾ ನನ್ನ ಮೂವಿ ಪ್ರಮೋಷನ್ ಗೂ ಬರಬಹುದು. ನಮ್ಮ ಮಂಡ್ಯ ಜಿಲ್ಲೆಯ ಜನತೆಗೆ ಕೃತಜ್ಞತೆ ಸಲ್ಲಿಸುತ್ತೇನೆ. ಮಂಡ್ಯ ಜನತೆ ಆರ್ಶೀವಾದ ಮಾಡಿದ್ದಾರೆ. ನಮ್ಮ ತಂದೆ-ತಾಯಿ ಆಸೆಯಂತೆ ಮಂಡ್ಯದಲ್ಲಿ ಬೀಗರ ಊಟ ಏರ್ಪಿಡಿಸಿದ್ದೇವೆ. ತುಂಬಾ ಜನ ಕಷ್ಟಪಟ್ಟು ವ್ಯವಸ್ಥೆ ಮಾಡಿದ್ರು. ಬೀಗರ ಊಟದಲ್ಲಿ ಶಾರ್ಟೇಜ್ ಆಗಿಲ್ಲ. ಯಾರಿಗೂ ದುಡ್ಡು ಕೊಟ್ಟು ಕರೆಸಿಲ್ಲ. ಪ್ರೀತಿ,ಅಭಿಮಾನದಿಂದ ಬಂದಿದ್ದಾರೆ. ಕೆಲವರು ಪ್ರವೋಕ್ ಮಾಡಿದಾಗ ಸಣ್ಣ ಪ್ರವೋಕ್ ಆದಾಗ ಅವ್ಯವಸ್ಥೆ ಆಗಿದೆ. ಅಡುಗೆ ಮನೆಗೆ ಕೆಲವರು ನುಗ್ಗಿದಾಗ ಘಟನೆ ಆಗಿದೆ. ಊಟ ಇಲ್ಲದೇ ಹೋಗಬೇಕು ಅಂತಾ ಕರೆಸಿಲ್ಲ. ದಯವಿಟ್ಟು ಕ್ಷಮಿಸಿ ಬಿಡಿ. ಯಾರು ಬೇಜಾರಾಗಬೇಡಿ ಎಂದು ಕ್ಷಮೆ ಕೇಳಿದ್ದಾರೆ ಅಭಿಷೇಕ್.

ತಂದೆ ಮೇಲೆ ಪ್ರೀತಿ ಇಟ್ಟುಕೊಂಡು ಬಂದಿದ್ದರು. ಊಟ ಖಾಲಿಯಾಗತ್ತಾ ಬಂದ ಹಾಗೆ ರೆಡಿ ಮಾಡಿ ಅಂತಾ ಹೇಳಿದ್ದೇನೆ. ತುಂಬಾ ಊಟ ಹಾಳಾಗಿದೆ. ಬೀಗರ ಊಟ ಹಾಳು ಮಾಡಿದ್ದು ಯಾರು ಅಂತಾ ಗೊತ್ತಿಲ್ಲ. ಎಲೆಕ್ಷನ್ ಉದ್ದೇಶ ಇಟ್ಟುಕೊಂಡು ಬೀಗರ ಊಟ ಏರ್ಪಡಿಸಿಲ್ಲ. ಇದು ಅಂಬರೀಶ್ ಅಣ್ಣನ ಮಗನ ಸಮಾರಂಭ. ಇದರಲ್ಲಿ ರಾಜಕೀಯ ತರಬೇಡಿ ಎಂದು ಅಭಿಷೇಕ್ ವಿರೋಧಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.

Share This Article