ಜೀ ಕನ್ನಡ ವಾಹಿನಿಯಿಂದ ಅಭಿಮಾನದ ‘ಅಪ್ಪು’ ಪುತ್ಥಳಿ

Public TV
2 Min Read

ಪುನೀತ್ ರಾಜ್ ಕುಮಾರ್  (Puneeth), ಇದು ಕನ್ನಡಿಗರ ಹೃದಯದಲ್ಲಿ ಶಾಶ್ವತವಾಗಿ ಉಳಿದುಕೊಳ್ಳುವ ಹೆಸರು. ನಟನೆ , ವ್ಯಕ್ತಿತ್ವ ಮತ್ತು ನಿಸ್ವಾರ್ಥ ಸಮಾಜಮುಖಿ ಸೇವೆಗಳಿಂದ ಜನಮಾನಸದಲ್ಲಿ ಅಚ್ಚಳಿಯದೆ ನೆಲೆಸಿರುವ ಈ ಹಸನ್ಮುಖಿ ನಮ್ಮಲ್ಲೆರನ್ನು ಅಗಲಿ ಇಂದಿಗೆ ಒಂದು ವರ್ಷವೇ ಆಗಿದೆ. ಇಡೀ ಭಾರತೀಯ ಚಿತ್ರರಂಗಕ್ಕೆ ಮರೆಯಲಾಗದಂತ ದುಃಖವಾಗಿ ಪರಿಣಮಿಸಿ ಕಣ್ಣೀರಾಗಿಸಿರುವ ಈ ದೊಡ್ಮನೆ ಕಂದ ಇಂದಿಗೂ ಎಲ್ಲರ ಮನಸಿನಲ್ಲಿ ಮುದ್ದಿನ ಮಗುವಾಗಿದ್ದಾರೆ.

ಜೀ ಕನ್ನಡ ವಾಹಿನಿಯೊಟ್ಟಿಗೆ ವಿಶೇಷ ನಂಟು ಹೊಂದಿದ್ದ ಅಪ್ಪು ಅವರು ಎಲ್ಲಾ ಕಾರ್ಯಕ್ರಮಗಳಿಗೂ ಪ್ರೀತಿಯಿಂದ ಆಗಮಿಸಿ ಬೆಂಬಲ ಸೂಚಿಸುತ್ತಿದ್ದರು ಮತ್ತು ಮನಸಾರೆ ಪ್ರತಿಭೆಗಳನ್ನು ಪ್ರೋತ್ಸಾಹಿಸುತ್ತಿದ್ದರು. ಅದಕ್ಕೆ ಸಾಕ್ಷಿ ಎನ್ನುವಂತೆ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ , ಸರಿಗಮಪ  ಕಾರ್ಯಕ್ರಮದ ವಿಶೇಷ ಸ್ಪರ್ಧಿಗಳ ಕೋರಿಕೆಯನ್ನು ಈಡೇರಿಸಲು ಖುದ್ದು ಅವರೇ ವೇದಿಕೆಗೆ ಆಗಮಿಸಿ ಅವರ ಬೆನ್ನು ತಟ್ಟಿ ಪ್ರೀತಿಯಿಂದ ಪ್ರೋತ್ಸಾಹ ನೀಡಿದ್ದು ಇತರರಿಗೆ ಮಾದರಿಯಾಗಿತ್ತು. ಇದನ್ನೂ ಓದಿ: ಯಾರ ಹೊಟ್ಟೆಯಲ್ಲಾದ್ರೂ ಮತ್ತೊಮ್ಮೆ ಹುಟ್ಟಿ ಬಾರಪ್ಪ- ವೃದ್ಧೆ ಕಣ್ಣೀರು

ಪುನೀತ್ (Puneeth Rajkumar) ಅವರ ಮೇಲೆ ವಿಶೇಷ ಅಭಿಮಾನ ಹೊಂದಿರುವ ಜೀ ಕನ್ನಡ ವಾಹಿನಿ ಅವರ ಪುಣ್ಯ ಸ್ಮರಣೆಯಂದು ಸಿನಿಮಾ ಮತ್ತು ಧಾರಾವಾಹಿಗಳ ಚಿತ್ರೀಕರಣಗಳಿಗೆಂದೇ ಹೆಸರುವಾಸಿಯಾಗಿರುವ ಅಬ್ಬಯ್ಯ ನಾಯ್ಡು ಸ್ಟುಡಿಯೋ ನಲ್ಲಿ ಪುತ್ಥಳಿಯೊಂದನ್ನು (statue) ಅನಾವರಣಗೊಳಿಸುತ್ತಿದೆ. ಈ ಮೂಲಕ ಹೆಜ್ಜೆ ಹಾಕಿದ ಸ್ಥಳವನ್ನು ನೆನಪುಗಳಿಂದ ಪುಣ್ಯ ಭೂಮಿಯಾಗಿಸುವ ಆಶಯ ಇದಾಗಿದೆ. ಈ ಮೂಲಕ ಮುಂದಿನ ಪೀಳಿಗೆಯ ಪ್ರತಿಭೆಗಳಿಗೆ ಅಪ್ಪು ಅವರ ಆಶೀರ್ವಾದ ಸಿಗಲಿದೆ ಎನ್ನುತ್ತದೆ ಜೀ ವಾಹಿನಿ.

ತನ್ನ ಇಡೀ ಬದುಕನ್ನು ಸಿನಿಮಾಗೆಂದೇ ಮೀಸಲಿಟ್ಟಿದ್ದ ಅಪ್ಪು ಅವರ ವಿಶೇಷ ಪುತ್ಥಳಿ ಹಿರಿತೆರೆ ಮತ್ತು ಕಿರುತೆರೆಗೆ ಜೊತೆಗೆ ಅಪರೂಪದ ಸಂಬಂಧ ಹೊಂದಿರುವಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ ಅನಾವರಣಗೊಳಿಸುತ್ತಿರುವ ಜೀ ಕನ್ನಡ ವಾಹಿನಿಯ ಕಾರ್ಯಕ್ಕೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಮತ್ತೊಂದು ವಿಶೇಷವೆಂದರೆ , ಅಬ್ಬಯ್ಯ ನಾಯ್ಡು ಸ್ಟುಡಿಯೋ ಜೀ ಕನ್ನಡ ವಾಹಿನಿ ಕಾರ್ಯಕ್ರಮಗಳ ಭಾಗವಾಗಿದೆ.  ಈ ಒಂದು ಅಭಿಮಾನದ ಅಪರೂಪದ ಕಾರ್ಯಕ್ಕೆ ಅಪ್ಪು ಅವರ ಅಭಿಮಾನಿಗಳೆಲ್ಲರೂ ಭಾಗಿಯಾಗಬೇಕೆಂದು ವಾಹಿನಿ ಈ ಮೂಲಕ ವಿನಯಪೂರ್ವಕವಾಗಿ ಮನವಿ ಮಾಡಿಕೊಳ್ಳುತ್ತಿದೆ.ಅಷ್ಟೇ ಅಲ್ಲದೆ ವಾಹಿನಿ ಇಡೀ ದಿನವನ್ನು ಅಪ್ಪು ಅವರಿಗೆ ಅರ್ಪಿಸಿ ವಿಶೇಷ ಕಾರ್ಯಕ್ರಮಗಳನ್ನು ಪ್ರಸಾರಮಾಡುತ್ತಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *