ಸಿಎಸ್‌ಕೆ ವಿರುದ್ಧ ಭರ್ಜರಿ ಜಯಗಳಿಸಿದ ಆರ್‌ಸಿಬಿ ಹಾಡಿಹೊಗಳಿದ ಡಿವಿಲಿಯರ್ಸ್‌

Public TV
1 Min Read

ಮುಂಬೈ: ಸಾಂಪ್ರದಾಯಿಕ ಎದುರಾಳಿ ಸಿಎಸ್‌ಕೆ (CSK) ವಿರುದ್ಧ ಐತಿಹಾಸಿಕ ಗೆಲುವು ದಾಖಲಿಸಿದ ಆರ್‌ಸಿಬಿ (RCB) ತಂಡವನ್ನು ದಕ್ಷಿಣ ಆಫ್ರಿಕಾ ದಂತಕಥೆ ಕ್ರಿಕೆಟಿಗ ಎಬಿ ಡಿವಿಲಿಯರ್ಸ್‌ (AB de Villiers) ಹಾಡಿಹೊಗಳಿಸಿದ್ದಾರೆ.

ಐಪಿಎಲ್‌ 2025ರ ಋತುವಿನಲ್ಲಿ ಆರ್‌ಸಿಬಿ ಉತ್ತರ ಆರಂಭ ಪಡೆದುಕೊಂಡಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ, ತಂಡವು ಗಮನಾರ್ಹವಾಗಿ ಸುಧಾರಿಸಿದೆ ಎಂದು ಆರ್‌ಸಿಬಿ ಮಾಜಿ ಆಟಗಾರರೂ ಆದ ಡಿವಿಲಿಯರ್ಸ್‌ ಶ್ಲಾಘಿಸಿದ್ದಾರೆ. ಇದನ್ನೂ ಓದಿ: ಸಿಎಸ್‌ಕೆ ಸೋಲಿಸಿ ಬೆಂಗಳೂರಿಗೆ ಆರ್‌ಸಿಬಿ ಟೀಂ ಗ್ರ್ಯಾಂಡ್‌ ಎಂಟ್ರಿ – ಏರ್‌ಪೋರ್ಟ್‌ನಲ್ಲಿ ಫ್ಯಾನ್ಸ್ ಜಯಘೋಷ

ಶುಕ್ರವಾರ ಚೆಪಾಕ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ವಿರುದ್ಧ ಆರ್‌ಸಿಬಿ 50 ರನ್‌ಗಳ ಅಂತರದ ಗೆಲುವು ಸಾಧಿಸಿದೆ. 2008 ರ ನಂತರ ಚೆನ್ನೈ ನೆಲದಲ್ಲಿ ಆರ್‌ಸಿಬಿ ಗೆಲುವು ದಾಖಲಿಸಿದೆ. ಈ ಬಗ್ಗೆ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಎಬಿಡಿ, ಆರ್‌ಸಿಬಿ ತಂಡವನ್ನು ಮೆಚ್ಚಿ ಮಾತನಾಡಿದ್ದಾರೆ.

ಹಿಂದಿನ ಋತುಗಳಿಗೆ ಹೋಲಿಸಿದರೆ ಆರ್‌ಸಿಬಿ ತಂಡದ ಸಮತೋಲನ 10 ಪಟ್ಟು ಉತ್ತಮವಾಗಿದೆ ಎಂದು ಡಿವಿಲಿಯರ್ಸ್ ತಿಳಿಸಿದ್ದಾರೆ. ಒಬ್ಬ ಆಟಗಾರನ ಸಾಧನೆ ಎಂಬುದು ಇಲ್ಲಿ ಕಾಣುತ್ತಿಲ್ಲ. ಒಟ್ಟಾರೆ, ತಂಡದ ಸಾಧನೆಯನ್ನು ಗುರುತಿಸಬಹುದು ಎಂದು ಹೇಳಿದ್ದಾರೆ. ಇದನ್ನೂ ಓದಿ: ತುಂಬಾ ಬೇಗ ಬ್ಯಾಟಿಂಗ್‌ಗೆ ಬಂದ್ರಿ – ಆರ್‌ಸಿಬಿ ವಿರುದ್ಧ 9ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಧೋನಿ ಕಾಲೆಳೆದ ಸೆಹ್ವಾಗ್

ಸಿಎಸ್‌ಕೆ ವಿರುದ್ಧದ ಪಂದ್ಯಕ್ಕೆ ವೇಗಿ ಭುವನೇಶ್ವರ್‌ ಕುಮಾರ್‌ನನ್ನು ಕರೆತಂದ ಬಗ್ಗೆಯೂ ಎಬಿಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೆಕೆಆರ್‌ ವಿರುದ್ಧದ ಪಂದ್ಯಕ್ಕೆ ಭುವಿ ಇರಲಿಲ್ಲ. ಆದರೆ, ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿ ಆತನನ್ನು ಆಡಿಸಿದ್ದಾರೆ. ತಂಡಕ್ಕೆ ಬೇಕಿರುವುದು ಈ ರೀತಿಯ ಸಮತೋಲದ, ಸೂಕ್ಷ್ಮ ಆಲೋಚನೆಯ ನಿರ್ಧಾರ ಎಂದು ತಿಳಿಸಿದ್ದಾರೆ. ಭುವನೇಶ್ವರ್ ಕುಮಾರ್ ಪ್ರಮುಖ ಬ್ಯಾಟರ್‌ ದೀಪಕ್ ಹೂಡಾ ಅವರನ್ನು ಬೇಗನೆ ಔಟ್ ಮಾಡಿದರು. ಪವರ್ ಪ್ಲೇನಲ್ಲಿ CSK ಅನ್ನು 26/3 ಕ್ಕೆ ಇಳಿಸಿದರು. ಇದು ಅಂತಿಮವಾಗಿ 197 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಸಿಎಸ್‌ಕೆಯನ್ನು 146/8 ಕ್ಕೆ ಕಟ್ಟಿಹಾಕಲು ನೆರವಾಯಿತು. ಇದನ್ನೂ ಓದಿ: 17 ವರ್ಷಗಳ ಬಳಿಕ ಚೆನ್ನೈ ಕೋಟೆಗೆ ಆರ್‌ಸಿಬಿ ‘ರಾಯಲ್‌’ ಎಂಟ್ರಿ

Share This Article