ಅಬ್ಬಾಬ್ಬಾ ಐಶ್ ಮಗಳ ನಯಾ ಲುಕ್ ನೋಡಿದ್ರೆ ಬೆರಗಾಗುತ್ತೀರಾ

Public TV
1 Min Read

ಬಾಲಿವುಡ್ ನಟಿ ಐಶ್ವರ್ಯ ರೈ ಬಚ್ಚನ್ (Aishwarya Rai) ಪುತ್ರಿ ಆರಾಧ್ಯ (Aradhya Bachchan) ನಯಾ ಲುಕ್ ನೋಡಿದ್ರೆ ನಿಜಕ್ಕೂ ನೀವು ಬೆರಗಾಗುತ್ತೀರಾ. ಅಷ್ಟರ ಮಟ್ಟಿಗೆ ಆರಾಧ್ಯ ಬದಲಾಗಿದ್ದಾರೆ. ಅಮ್ಮನಂತೆಯೇ ಮಗಳು ಮುದ್ದಾಗಿದ್ದಾರೆ. ಸದ್ಯ ಬಚ್ಚನ್ ಕುಟುಂಬದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ಮುಖೇಶ್ ಅಂಬಾನಿ ಮಗ ಅನಂತ್ ಪ್ರೀ-ವೆಡ್ಡಿಂಗ್ ಕಾರ್ಯಕ್ರಮದಲ್ಲಿ ಅಭಿಷೇಕ್ ಬಚ್ಚನ್- ಐಶ್ವರ್ಯ ರೈ ಜೊತೆ ಮಗಳು ಆರಾಧ್ಯ ಕೂಡ ಹಾಜರಿ ಹಾಕಿದ್ದು, ಕಾರ್ಯಕ್ರಮದಲ್ಲಿ ಎಂಜಾಯ್ ಮಾಡಿದ್ದಾರೆ.

ಸದಾ ಹಣೆಯ ಮೇಲೆ ಕೂದಲು ಇಳಿಸಿ ಇರುತ್ತಿದ್ದ ಆರಾಧ್ಯ ಈಗ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.‌ ಇದನ್ನೂ ಓದಿ:ವೈವಾಹಿಕ ಜೀವನಕ್ಕೆ ಕಾಲಿಟ್ಟ ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಚಿದಂಬರ

12 ವರ್ಷದ ಆರಾಧ್ಯ ಬೇಬಿ ಪಿಂಕ್ ಡ್ರೆಸ್‌ನಲ್ಲಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಕೂದಲನ್ನು ಇಳಿ ಬಿಟ್ಟು ಅಮ್ಮನ ಜೊತೆ ಬರುವಾಗ ಎಲ್ಲರ ಕಣ್ಣುಗಳು ಮಾಜಿ ವಿಶ್ವಸುಂದರಿಗಿಂತ ಆರಾಧ್ಯ ಮೇಲೆಯೇ ಇತ್ತು.

ಬಹಳ ಖುಷಿಯಿಂದ ನಗುತ್ತ ಪಾಪಾರಾಜಿಗಳತ್ತ ನೋಡುತ್ತ ಕ್ಯಾಮೆರಾ ಸ್ಮೈಲ್ ಮಾಡಿ ಮುಂದೆ ಹೋಗಿದ್ದಾರೆ. ಅಂಬಾನಿ ಮನೆ ಮಗನ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಜಾಮ್‌ನಗರಕ್ಕೆ ಗುಡ್ ಬೈ ಹೇಳಿದ್ದಾರೆ.

ಅನಂತ್- ರಾಧಿಕಾ ಹಲವು ವರ್ಷಗಳಿಂದ ಪರಿಚಿತರು. ಆ ಪರಿಚಯವೇ ಪ್ರೀತಿಗೆ ತಿರುಗಿ ಇದೀಗ ಮದುವೆಯ ಮುದ್ರೆ ಒತ್ತಲು ಈ ಜೋಡಿ ಸಜ್ಜಾಗಿದ್ದಾರೆ. ಗುರುಹಿರಿಯರ ಸಮ್ಮತಿಯ ಮೇರೆಗೆ ಈ ಜೋಡಿ ಮದುವೆಯಾಗುತ್ತಿದ್ದಾರೆ.

ಅನಂತ್ ಮತ್ತು ರಾಧಿಕಾ ಮದುವೆ ಇದೇ ಜೂನ್ 12ಕ್ಕೆ ಫಿಕ್ಸ್ ಆಗಿದೆ. ಮಾರ್ಚ್ 1ರಿಂದ 3ರವರೆಗೆ ಅದ್ಧೂರಿಯಾಗಿ ತೆರೆಬಿದ್ದಿದೆ. ಅನಂತ್ ಪ್ರೀ-ವೆಡ್ಡಿಂಗ್ ಕಾರ್ಯಕ್ರಮದಲ್ಲಿ ಸಂಗೀತ, ನೃತ್ಯ ಹೀಗೆ ವಿವಿಧ ರೀತಿಯ ಪ್ರದರ್ಶನಗಳು ರಂಗೇರಿದ್ದು, ದೇಶ-ವಿದೇಶದ ಸೆಲೆಬ್ರಿಟಿಗಳು ಭಾಗಿಯಾಗಿದ್ದರು.

Share This Article