ನವದೆಹಲಿ: ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ (AAP) ರಾಜ್ಯಸಭೆಯಲ್ಲಿ ಪಕ್ಷದ ಉಪನಾಯಕ ರಾಘವ್ ಚಡ್ಡಾ (Raghav Chadha) ಅವರನ್ನು ತೆಗೆದುಹಾಕಿದೆ. ಆ ಸ್ಥಾನಕ್ಕೆ ಪಂಜಾಬ್ ಸಂಸದ ಅಶೋಕ್ ಮಿತ್ತಲ್ ಅವರನ್ನು ಬದಲಿಯಾಗಿ ನೇಮಿಸಿದೆ.
ರಾಘವ್ ಚಡ್ಡಾ ಅವರಿಗೆ ಸಂಸತ್ತಿನಲ್ಲಿ ಮಾತನಾಡಲು ಸಮಯ ನೀಡಬಾರದು ಎಂದು ಎಎಪಿ ರಾಜ್ಯಸಭಾ ಸಚಿವಾಲಯಕ್ಕೆ ತಿಳಿಸಿದೆ. ಸಂಸತ್ತಿನ ಮೇಲ್ಮನೆಯಲ್ಲಿ ಎಎಪಿಯ ಉಪ ನಾಯಕ ಸ್ಥಾನ ಅಲಂಕರಿಸಿರುವ ಮಿತ್ತಲ್, ಲವ್ಲಿ ಪ್ರೊಫೆಷನಲ್ ವಿಶ್ವವಿದ್ಯಾಲಯದ ಕುಲಪತಿಯಾಗಿದ್ದಾರೆ. ಎಎಪಿ ಸಂಸದ ಸಂಜಯ್ ಸಿಂಗ್ ಸದನದಲ್ಲಿ ಪಕ್ಷದ ನಾಯಕರಾಗಿದ್ದಾರೆ. ಎಎಪಿ ಈಗ ರಾಜ್ಯಸಭೆಯಲ್ಲಿ 10 ಸದಸ್ಯರನ್ನು ಹೊಂದಿದೆ. ಪಂಜಾಬ್ನಿಂದ ಏಳು ಮತ್ತು ದೆಹಲಿಯಿಂದ ಮೂವರು ಸದಸ್ಯರಿದ್ದಾರೆ. ಬಿಜೆಪಿ, ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್ ನಂತರ ಇದು ಸದನದಲ್ಲಿ ನಾಲ್ಕನೇ ಅತಿದೊಡ್ಡ ಪಕ್ಷವಾಗಿದೆ. ಇದನ್ನೂ ಓದಿ: ನೇತಾಜಿ ಗೌರವಾರ್ಥ ಆಜಾದ್ ಭಾರತ್ ಚಿತ್ರ ಪ್ರದರ್ಶನಕ್ಕೆ ಸಂಸತ್ ಭವನ ಸಾಕ್ಷಿ
ಇಂದಿನ ಬೆಳವಣಿಗೆ ಮಹತ್ವದ್ದಾಗಿದ್ದು, ಒಂದು ಕಾಲದಲ್ಲಿ ಎಎಪಿಯ ಉನ್ನತ ನಾಯಕ ಮತ್ತು ಕೇಜ್ರಿವಾಲ್ ಅವರ ಆಪ್ತ ವಲಯದ ಭಾಗವೆಂದು ಪರಿಗಣಿಸಲ್ಪಟ್ಟಿದ್ದ ಛಡ್ಡಾ ಅವರ ಭವಿಷ್ಯದ ಬಗ್ಗೆ ಪ್ರಶ್ನೆಗಳನ್ನು ಎದ್ದಿವೆ.
37 ವರ್ಷದ ಚಾಡ್ಡಾ ಅವರು ಎಎಪಿ ಸ್ಥಾಪನೆಯಾದಾಗಿನಿಂದಲೂ ಅದರ ಭಾಗವಾಗಿದ್ದಾರೆ. ದೆಹಲಿಯ ಮಾಡರ್ನ್ ಸ್ಕೂಲ್ನ ಹಳೆಯ ವಿದ್ಯಾರ್ಥಿಯಾಗಿರುವ ಅವರು ಚಾರ್ಟರ್ಡ್ ಅಕೌಂಟೆಂಟ್. ಭ್ರಷ್ಟಾಚಾರ ವಿರೋಧಿ ಭಾರತ ಚಳವಳಿಯ ಕೊನೆಯ ಹಂತದಲ್ಲಿ ಕೇಜ್ರಿವಾಲ್ ಮತ್ತು ಇತರರು ಪಕ್ಷವನ್ನು ಪ್ರಾರಂಭಿಸಬೇಕೆ ಅಥವಾ ಬೇಡವೇ ಎಂದು ಚರ್ಚಿಸುತ್ತಿದ್ದ ಸಂದರ್ಭದಲ್ಲಿ ಚಡ್ಡಾ ಅವರು ಕೇಜ್ರಿವಾಲ್ ಅವರನ್ನು ಭೇಟಿಯಾಗಿದ್ದರು. ಇದನ್ನೂ ಓದಿ: ರಾಜಮುಡಿ ಅಕ್ಕಿಗೆ ಶೀಘ್ರ GI ಟ್ಯಾಗ್ ನೀಡಿ: ಹಾಸನ ಸಂಸದ ಶ್ರೇಯಸ್ ಪಟೇಲ್ ಕೇಂದ್ರಕ್ಕೆ ಮನವಿ

