ಮಾಜಿ ಪತ್ನಿಯಿಂದ ಅಮೀರ್ ಖಾನ್ ಗೆ ಸಿಕ್ತು ಭರ್ಜರಿ ಗಿಫ್ಟ್

Public TV
2 Min Read

ಬಾಲಿವುಡ್ ಮಿಸ್ಟರ್ ಪರ್ಫೆಕ್ಟ್ ಅಮೀರ್ ಖಾನ್‍ಗೆ ಇಂದು ಹುಟ್ಟುಹಬ್ಬದ ಸಂಭ್ರಮ. 57ನೇ ವಸಂತಕ್ಕೆ ಕಾಲಿಟ್ಟಿರುವ ಅಮೀರ್ ಖಾನ್‍ಗೆ ಈ ವಿಶೇಷ ದಿನದಂದು ಮಾಜಿ ಪತ್ನಿ ಕಿರಣ್ ರಾವ್ ಬೆಸ್ಟ್ ಗಿಫ್ಟ್ ನೀಡಿರುವುದಾಗಿ ಸ್ವತಃ ಅವರೇ ಬಹಿರಂಗ ಪಡಿಸಿದ್ದಾರೆ. ಆ ಗಿಫ್ಟ್ ಈವರೆಗೂ ಸಿಗದೇ ಇರದಂತಹ ದುಬಾರಿ ಉಡುಗೊರೆಯಾಗಿದೆಯಂತೆ.

ನನ್ನನ್ನು ಕಿರಣ್‍ಗಿಂತ ಚೆನ್ನಾಗಿ ಯಾರು ತಿಳಿದಿಲ್ಲ. ಹಾಗಾಗಿ ಈ ವರ್ಷ ಸ್ವಯಂ ಆಗಿ ಕೆಲಸ ಮಾಡಲು ಬಯಸುತ್ತಿರುವ ನನಗೆ ನನ್ನಲ್ಲಿರುವ ಒಂದಷ್ಟು ವೀಕ್‍ನೆಸ್‍ಗಳ ಬಗ್ಗೆ ಲಿಸ್ಟ್ ಮಾಡಿ ತಿಳಿಸುವಂತೆ ಕೇಳಿದ್ದೆ. ಅದಕ್ಕೆ ಕಿರಣ್ 10 ರಿಂದ 12 ಸಲಹೆಗಳನ್ನು ನೀಡಿದರು. ನಾನು ಅದೆಲ್ಲವನ್ನು ಬರೆದುಕೊಂಡೆ. ಇದು ನನ್ನ ಜೀವನದ ಅತ್ಯುತ್ತಮ ಗಿಫ್ಟ್ ಆಗಿದೆ ಎಂದರು. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ : ಬಾಲಿವುಡ್ ಮೇಲೆ ಕಿಡಿಕಾರಿದ ಕಂಗನಾ ರಣಾವತ್

 

View this post on Instagram

 

A post shared by Aamir Khan (@amirkhanactor_)

ಇದೇ ವೇಳೆ ವಿಚ್ಚೇದನ ಕುರಿತಂತೆ ಮಾತನಾಡಿದ ಅವರು, ಕಿರಣ್ ಮತ್ತು ನಾನು ಒಬ್ಬರನ್ನೊಬ್ಬರು ತುಂಬಾ ಪ್ರೀತಿಸುತ್ತೇವೆ. ನಾವು ಪರಸ್ಪರ ತುಂಬಾ ಗೌರವ ಮತ್ತು ಪ್ರೀತಿಯನ್ನು ಹೊಂದಿದ್ದೇವೆ. ಆದರೆ ಜನರಿಗೆ ಇದು ಅರ್ಥವಾಗುವುದಿಲ್ಲ. ಇದನ್ನು ನಾನು ಒಪ್ಪಿಕೊಳ್ಳುತ್ತೇನೆ. ಏಕೆಂದರೆ ಸಾಮಾನ್ಯ ವಿಚಾರವಾಗಿ ಇದನ್ನು ನೋಡಲು ಸಾಧ್ಯವಾಗುವುದಿಲ್ಲ. ನಿಜ ಹೇಳಬೇಕೆಂದರೆ ನಾವು ಒಬ್ಬರನ್ನೊಬ್ಬರು ತುಂಬಾ ಇಷ್ಟಪಡುತ್ತೇವೆ ಮತ್ತು ಪರಸ್ಪರ ಕುಟುಂಬದವರನ್ನು ಅರ್ಥ ಮಾಡಿಕೊಂಡಿದ್ದೇವೆ. ವಾಸ್ತವವಾಗಿ ಕಿರಣ್ ಮತ್ತು ನನ್ನದು ಒಂದೇ ಕುಟುಂಬ. ಆದರೆ ನಮ್ಮ ಗಂಡ ಮತ್ತು ಹೆಂಡತಿಯ ಸಂಬಂಧದಲ್ಲಿ ಬದಲಾವಣೆಯಾಗಿದೆ. ನಾವು ಮದುವೆಯನ್ನು ಗೌರವಿಸುತ್ತೇವೆ. ನಾವು ಒಟ್ಟಿಗೆ ಕೆಲಸ ಮಾಡುತ್ತಿದ್ದೇವೆ. ಆದರೆ ನಾವು ಗಂಡ ಮತ್ತು ಹೆಂಡತಿಯಾಗಿ ದೀರ್ಘಕಾಲ ಮುಂದುವರಿಯಲು ಆಗಲಿಲ್ಲ. ಹಾಗಾಗಿ ವಿಚ್ಛೇದನ ಪಡೆಯಲು ನಿರ್ಧರಿಸಿದೆವು ಎಂದಿದ್ದಾರೆ.

 

View this post on Instagram

 

A post shared by Aamir Khan (@amirkhanactor_)

18 ವರ್ಷದ ದಾಂಪತ್ಯ ಜೀವನಕ್ಕೆ ಅಮೀರ್ ಮತ್ತು ಕಿರಣ್ 2021ರಲ್ಲಿ ವಿಚ್ಛೇದನ ಪಡೆದರು. ಆದರೆ ಇಬ್ಬರು ಸ್ನೇಹಿತರು ಮತ್ತು ಪೋಷಕರಾಗಿ ಮುಂದುವರಿಯುವುದಾಗಿ ತಿಳಿಸಿದ್ದರು. ಅದರಂತೆ ನಡೆದುಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಉಪೇಂದ್ರ ಅವರ ಹೊಸ ಸಿನಿಮಾದ ಪೋಸ್ಟರ್: ಅಸಲಿನಾ..? ನಕಲಿನಾ..?

Share This Article
Leave a Comment

Leave a Reply

Your email address will not be published. Required fields are marked *