ನಾನು ಉಪೇಂದ್ರ ಅಭಿಮಾನಿ – ‘ಯುಐ’ ಸಿನಿಮಾಗೆ ಶುಭ ಹಾರೈಸಿದ ಆಮೀರ್‌ ಖಾನ್‌

Public TV
1 Min Read

ದೇ ಡಿಸೆಂಬರ್‌ 20 ರಂದು ತೆರೆ ಕಾಣಲಿರುವ ಸೂಪರ್‌ ಸ್ಟಾರ್‌ ಉಪೇಂದ್ರ (Upendra) ನಟಿಸಿ ನಿರ್ದೇಶಿಸಿರುವ ‘ಯುಐ’ (UI) ಸಿನಿಮಾಗೆ ಬಾಲಿವುಡ್‌ ನಟ ಆಮೀರ್‌ ಖಾನ್‌ (Aamir Khan) ಶುಭ ಹಾರೈಸಿದ್ದಾರೆ.

ಈ ಕುರಿತ ವೀಡಿಯೋವನ್ನು ಆಮೀರ್‌ ಖಾನ್‌ ಹಂಚಿಕೊಂಡಿದ್ದಾರೆ. ವೀಡಿಯೋದಲ್ಲಿ ನಟ ಉಪೇಂದ್ರ ಕೂಡ ಕಾಣಿಸಿಕೊಂಡಿದ್ದಾರೆ.

ನಾನು ಉಪೇಂದ್ರ ಅವರ ಅಭಿಮಾನಿ. ಅವರ ಯುಐ ಸಿನಿಮಾ ಇದೇ ಡಿ.20 ರಂದು ರಿಲೀಸ್‌ ಆಗಲಿದೆ. ಟ್ರೈಲರ್‌ ನೋಡಿದೆ. ನಿಜಕ್ಕೂ ಮನಸ್ಸಿಗೆ ಮುದ ನೀಡಿತು. ಟ್ರೈಲರ್‌ ನಿಜಕ್ಕೂ ಊಹಿಸಲು ಅಸಾಧ್ಯ. ಟ್ರೈಲರ್‌ ಶಾಕ್‌ ಕೂಡ ಆಯಿತು. ಹಿಂದಿ ಅಭಿಮಾನಿಗಳು ಇದನ್ನು ಇಷ್ಟ ಪಟ್ಟಿದ್ದಾರೆ. ಸಿನಿಮಾ ಮತ್ತು ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎಂದು ಆಮೀರ್‌ ಖಾನ್‌ ಶುಭಾಶಯ ತಿಳಿಸಿದ್ದಾರೆ.

ಆಮೀರ್‌ ಖಾನ್‌ ಅವರ ಮೆಚ್ಚುಗೆ ಮತ್ತು ಹಾರೈಕೆಗೆ ನಟ ಉಪೇಂದ್ರ ಕೃತಜ್ಞತೆ ತಿಳಿಸಿದ್ದಾರೆ.

Share This Article