ಪ್ರಶಾಂತ್ ನೀಲ್ ಸಿನಿಮಾದಲ್ಲಿ ಆಮೀರ್ ಖಾನ್: ಗಾಂಧಿನಗರ ಗುಸು ಗುಸು

Public TV
1 Min Read

ಕೆಜಿಎಫ್ ಸಿನಿಮಾದ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿರುವ ನಿರ್ದೇಶಕ ಪ್ರಶಾಂತ್ ನೀಲ್ ಬಗ್ಗೆ ಗಾಂಧಿನಗರದಲ್ಲಿ ಒಂದು ಸುದ್ದಿ ಹರಿದಾಡುತ್ತಿದೆ. ಪ್ರಶಾಂತ್ ನೀಲ್ ಅವರ ಮುಂದಿನ ಸಿನಿಮಾದಲ್ಲಿ ಆಮೀರ್ ಖಾನ್ ನಟಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದ್ದು, ಈ ಚಿತ್ರಕ್ಕಾಗಿ ಪ್ರಶಾಂತ್, ಬಾಲಿವುಡ್ ನಟನನ್ನು ತೆಲುಗು ಸಿನಿಮಾ ರಂಗಕ್ಕೆ ಕರೆತರುತ್ತಿದ್ದಾರೆ ಎನ್ನುವುದು ವರ್ತಮಾನ.

ಸದ್ಯ ಪ್ರಭಾಸ್ ನಟನೆಯ ‘ಸಲಾರ್’ ಸಿನಿಮಾದ ಚಿತ್ರೀಕರಣದಲ್ಲಿ ಪ್ರಶಾಂತ್ ನೀಲ್ ಬ್ಯುಸಿಯಾಗಿದ್ದಾರೆ. ಈ ಸಿನಿಮಾದ ಶೂಟಿಂಗ್ ಮುಗಿಸಿ, ತೆರೆಗೆ ಕಳುಹಿಸುತ್ತಿದ್ದಂತೆಯೇ ಜ್ಯೂನಿಯರ್ ಎನ್.ಟಿ.ಆರ್ ಸಿನಿಮಾವನ್ನು ಅವರು ಕೈಗೆತ್ತಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ಆಮೀರ್ ಖಾನ್ ನಟಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ಸಿನಿಮಾ ಸೆಟ್ಟೇರಲು ಇನ್ನೂ ಒಂದು ವರ್ಷವೇ ಬೇಕಾಗಬಹುದು. ಆದರೂ, ಸುದ್ದಿ ಈಗಲೇ ಹುಟ್ಟಿಕೊಂಡಿದೆ. ಇದನ್ನೂ ಓದಿ: ಜನವರಿ 8ಕ್ಕೆ ಯಶ್ ಅಭಿಮಾನಿಗಳಿಗೆ ಕಾದಿದೆ ಗುಡ್ ನ್ಯೂಸ್

ಈ ಕುರಿತು ಪ್ರಶಾಂತ್ ನೀಲ್ ಮಾತನಾಡದೇ ಇದ್ದರೂ, ಅವರದ್ದೇ ಪಡಸಾಲೆಯಿಂದ ಈ ವಿಷಯ ಬಹಿರಂಗವಾಗಿ ಎಂದು ಹೇಳಲಾಗುತ್ತಿದೆ. ಜ್ಯೂನಿಯರ್ ಎನ್.ಟಿ.ಆರ್ ಜೊತೆ ಆಮೀರ್ ಖಾನ್ ನಟಿಸುತ್ತಾರಾ? ಅಥವಾ ಪ್ರಶಾಂತ್ ಈಗಾಗಲೇ ಒಂದು ಹಂತದಲ್ಲಿ ಮಾತುಕತೆ ಏನಾದರೂ ನಡೆಸಿದ್ದಾರೆ. ಈ ಯಾವುದಕ್ಕೂ ಸ್ಪಷ್ಟ ಉತ್ತರವಿಲ್ಲ. ಆದರು ಈ ವಿಷಯ ದೊಟ್ಟಮಟ್ಟದಲ್ಲೇ ಸದ್ದು ಮಾಡುತ್ತಿರುವುದಂತು ಸತ್ಯ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *