ಹೊಸ ವರ್ಷಕ್ಕೆ ಶುಭ ಕೋರಿದ ಬಿಟೌನ್- ಕ್ಷಮೆ ಕೇಳಿದ ಅಮೀರ್ ಖಾನ್

Public TV
2 Min Read

ಮುಂಬೈ: 2018ಗೆ ಟಾಟಾ ಹೇಳಿ ಹೊಸ ವರ್ಷ 2019 ಅನ್ನು ಬಾಲಿವುಡ್ ಕಲಾವಿದರು ಸ್ವಾಗತಿಸಿ ತಮ್ಮ ಅಭಿಮಾನಿಗಳಿಗೆ ಶುಭಾಶಯ ತಿಳಿಸಿದ್ದಾರೆ.

ಬಾಲಿವುಡ್ ಮಿ. ಪರ್ಫೆಕ್ಟ್ ತಮ್ಮ ಟ್ವಿಟ್ಟರಿನಲ್ಲಿ ಈ ವರ್ಷದ ಹೊಸ ರೆಸಲ್ಯೂಶನ್‍ನನ್ನು ಬರೆದು ಎಲ್ಲರಿಗೂ ಹೊಸ ವರ್ಷದ ಶುಭಾಶಯ ತಿಳಿಸಿ ಕ್ಷಮೆ ಕೇಳಿದ್ದಾರೆ. ಅಮೀರ್ ಖಾನ್ ತಮ್ಮ ಟ್ವಿಟ್ಟರಿನಲ್ಲಿ, “ಹಾಯ್ ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ಎಲ್ಲರಿಗೂ ನೆಮ್ಮದಿ ಹಾಗೂ ಖುಷಿ ಸಿಗಲಿ. ನನ್ನ ಹೊಸ ವರ್ಷದ ರೆಸಲ್ಯೂಶನ್ ಏನೆಂದರೆ ನಾನು ಮೊದಲಿನಂತೆ ಟಾಪ್ ಶೇಪ್‍ಗೆ ಬರಬೇಕು. 2018ರಲ್ಲಿ ತಪ್ಪುಗಳಿಂದ ಕಲಿತಿರುವುದನ್ನು ದಿನನಿತ್ಯ ಅಭ್ಯಾಸ ಮಾಡುವೆ. ಅತ್ಯುತ್ತಮ ಚಿತ್ರ ಮಾಡುವುದು. ಹೊಸ ವಿಷಯಗಳನ್ನು ಕಲಿಯುವುದು ಹಾಗೂ ನನ್ನ ತಾಯಿ, ಪತ್ನಿ ಹಾಗು ಮಕ್ಕಳ ಜೊತೆ ಹೆಚ್ಚು ಸಮಯ ಕಳೆಯುವುದು. ನಾನು ಗೊತ್ತಿದ್ದೋ, ಗೊತ್ತಿಲ್ಲದೆಯೋ ಯಾರಿಗಾದರೂ ನೋವು ಮಾಡಿದ್ದರೆ, ನನ್ನನ್ನು ಕ್ಷಮಿಸಿ” ಎಂದು ಟ್ವೀಟ್ ಮಾಡಿದ್ದಾರೆ.

https://twitter.com/aamir_khan/status/1079751736317755392

ಅಮಿತಾಬ್ ಬಚ್ಚನ್ ಹಾಗೂ ಅಭಿಷೇಕ್ ಬಚ್ಚನ್ ಇಬ್ಬರು ಟ್ವೀಟ್ ಮಾಡಿ ಹೊಸ ವರ್ಷಕ್ಕೆ ಶುಭಾಶಯ ತಿಳಿಸಿದ್ದಾರೆ. ಅಮಿತಾಬ್ ತಮ್ಮ ಟ್ವಿಟ್ಟರಿನಲ್ಲಿ, “ಹೊಸ ವರ್ಷದ ಗ್ರೀಟಿಂಗ್ಸ್ ಹಾಗೂ ಖುಷಿ ನಿರಂತವಾಗಿರಲಿ. ಹೊಸ ವರ್ಷ, ಹೊಸ ಹರ್ಷ, ಹೊಸ ಜೀವನ ಉತ್ಕರ್ಷ, ಹೊಸ ದಾರಿ, ಹೊಸ ಗುರಿ, ಜೀವನದ ಹೊಸ ಪ್ರವಾಹ” ಎಂದು ಟ್ವೀಟ್ ಮಾಡಿದ್ದಾರೆ. ಇತ್ತ ಮಗ ಅಭಿಷೇಕ್ ಬಚ್ಚನ್ “ಎಲ್ಲರಿಗೂ ಹೊಸ ವರ್ಷದ ಶುಭಾಶಯ” ಎಂದು ಟ್ವೀಟ್ ಮಾಡಿದ್ದಾರೆ.

ನಟ ಸಿದ್ಧಾರ್ಥ್ ಮಲ್ಹೋತ್ರ ಕೂಡ ಟ್ವಿಟ್ಟರಿನಲ್ಲಿ, “ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಈ ದಿನ ರಾತ್ರಿ ಯಾವುದೇ ಪಾರ್ಟಿ ಮಾಡುವುದಿಲ್ಲ. ನಾನು ಇತರರಿಗೆ ಕೆಲಸ ಮಾಡದೇ ಇರುವ ಕೆಲಸಗಳನ್ನು ನಂಬುತ್ತೇನೆ. ನೀವು ನಿಮ್ಮ ದಾರಿಯಲ್ಲಿ ನಡೆಯಿರಿ. ನಿಮ್ಮನ್ನು ನೀವು ನಂಬಿ. ನಿಮ್ಮ ಈ ಪ್ರಯಾಣವನ್ನು ಎಂಜಾಯ್ ಮಾಡಿ. ಎಲ್ಲರಿಗೂ ಗುಡ್ ಲಕ್” ಎಂದು ಟ್ವೀಟ್ ಮಾಡಿ ಶುಭಾಶಯ ತಿಳಿಸಿದ್ದಾರೆ.

ನಟಿ ಅನುಷ್ಕಾ ಶರ್ಮಾ ತಮ್ಮ ಟ್ವಿಟ್ಟರಿನಲ್ಲಿ ಪತಿ, ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಜೊತೆಯಿರುವ ಫೋಟೋವನ್ನು ಪೋಸ್ಟ್ ಮಾಡಿ ಅಭಿಮಾನಿಗಳಿಗೆ ಶುಭಾಶಯ ತಿಳಿಸಿದ್ದಾರೆ. ಅನುಷ್ಕಾ ತಮ್ಮ ಟ್ವಿಟ್ಟರಿನಲ್ಲಿ, “ಶಾಂತಿ, ಭರವಸೆ ತುಂಬಿರುವ ಈ ಹೊಸ ವರ್ಷಕ್ಕೆ ನೀವು ಎಲ್ಲರೂ ಎಚ್ಚರಗೊಂಡಿದ್ದೀರಿ ಎಂದುಕೊಳ್ಳುತ್ತೇನೆ. ಒಬ್ಬರಿಗೊಬ್ಬರು ಸ್ವಲ್ಪ ದಯೆ ತೋರಿಸಿ ನಕ್ಷತ್ರದಂತೆ ಒಬ್ಬರ ಬಾಳಲ್ಲಿ ಬೆಳಕು ಹಾಗೂ ಸೌಂದರ್ಯವನ್ನು ಬೆಳೆಗಿಸೋಣ. ನಮ್ಮ ಕಡೆಯಿಂದ ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು” ಎಂದು ಟ್ವೀಟ್ ಮಾಡಿದ್ದಾರೆ.

ನಟಿ ಶ್ರದ್ಧಾ ಕಪೂರ್ ಕೂಡ ತಮ್ಮ ಅಭಿಮಾನಿಗಳಿಗೆ ಹೊಸ ವರ್ಷದ ಶುಭಾಶಯ ತಿಳಿಸಿದ್ದಾರೆ. ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಎಲ್ಲರಿಗೂ ಖುಷಿ, ನೆಮ್ಮದಿ, ಪ್ರೀತಿ ಹಾಗೂ ಎಲ್ಲಾ ಕೆಲಸ ಅದ್ಭುತವಾಗಲಿ ಎಂದು ಶುಭ ಕೋರುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ. ಇತ್ತ ನಟಿ ಶಿಲ್ಪಾ ಶೆಟ್ಟಿ ಕೂಡ ತಮ್ಮ ಫೋಟೋವನ್ನು ಹಾಕಿ ಅದಕ್ಕೆ, “ಬಾಯ್ ಬಾಯ್ 2018. ಈಗ ಮಿನುಗುವ ಸಮಯ. ಎಲ್ಲರೂ ಸ್ಪಾರ್ಕಿ 2019ಕ್ಕೆ ರೆಡಿಯಾಗಿದ್ದೀರಿ ಅಂದುಕೊಂಡಿದ್ದೇನೆ” ಎಂದು ಟ್ವೀಟ್ ಮಾಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *