ಗಂಡು ಮಗನೇ ಆಗಿದ್ರೆ ಟ್ವೀಟ್ ಡಿಲೀಟ್ ಮಾಡ್ಬೇಡ: ಆಪ್‍ಗೆ ಬಿಜೆಪಿ ಮುಖಂಡ ಸವಾಲ್

Public TV
2 Min Read

ನವದೆಹಲಿ: ಗಂಡು ಮಗನೇ ಆಗಿದ್ದರೆ ಟ್ವೀಟ್ ಡಿಲೀಟ್ ಮಾಡಬೇಡ ಎಂದು ಬಿಜೆಪಿ ಮುಖಂಡ ತಜೀಂದ್ರ ಪಾಲ್ ಸಿಂಗ್ ಬಗ್ಗಾ ಬಹಿರಂಗವಾಗಿಯೇ ಆಪ್ ಪಕ್ಷಕ್ಕೆ ಸವಾಲು ಹಾಕಿದ್ದಾರೆ.

ಬುಧವಾರ ಬೆಳಗ್ಗೆ 10.20ಕ್ಕೆ ಆಪ್ ತನ್ನ ಅಧಿಕೃತ ಟ್ವಟ್ಟರ್ ಖಾತೆಯಲ್ಲಿ ಫೋಟೋ ಜೊತೆಗೆ ಕೆಲವು ಪದಗಳನ್ನು ಬರೆದುಕೊಂಡು ಟ್ವೀಟ್ ಮಾಡಿತ್ತು. ಟ್ವೀಟ್ ನೋಡಿದ ತಜೀಂದ್ರ ನೀವು ಹೇಳುತ್ತಿರೋದು ಸರಿಯಾಗಿದೆ. ಹಾಗಾಗಿ ಗಂಡು ಮಗನೇ ಆಗಿದ್ರೆ ಟ್ವೀಟ್ ಡಿಲೀಟ್ ಮಾಡಕೂಡದು ಎಂದು ಪ್ರತಿಕ್ರಿಯೆ ನೀಡಿದ್ದರು. ಇತ್ತ ತನ್ನ ತಪ್ಪಿನ ಅರಿವಾಗುತ್ತಲೇ ಆಪ್ ಟ್ವೀಟ್ ಡಿಲೀಟ್ ಮಾಡಿತ್ತು.

ಏನದು ಟ್ವೀಟ್?: ಕೇವಲ ಗಲಾಟೆ ಮಾಡೋದು ನಮ್ಮ ಉದ್ದೇಶವಲ್ಲ. ಬದಲಾಗಿ ನಮ್ಮ ಸಮಾಜದಲ್ಲಿ ಬದಲಾವಣೆಯನ್ನು ತರುವುದು ನಮ್ಮ ಧ್ಯೇಯ ಅಂತಾ ಸಾಲುಗಳನ್ನು ಬರೆಯಲಾಗಿತ್ತು. ಇದರ ಜೊತೆಗೆ ಕೆಲವು ಬರಹವುಳ್ಳ ಫೋಟೋ ಸಹ ಅಪ್ಲೋಡ್ ಮಾಡಿಕೊಂಡಿತ್ತು. 2011ರಲ್ಲಿ ಭ್ರಷ್ಟಾಚಾರರ ವಿರುದ್ಧ ಹೋರಾಟ. 2018ರಲ್ಲಿ ಪ್ರಜಾಪ್ರಭುತ್ವದ ಉಳಿವಿಗಾಗಿ ಅಂತಾ ಬರೆಯಲಾಗಿತ್ತು.

ಆಪ್ ಖಾತೆಯಿಂದ ಟ್ವೀಟ್ ಪ್ರಕಟವಾಗುತ್ತಿದ್ದಂತೆ ತಜೀಂದ್ರ ಸ್ಕ್ರೀನ್ ಶಾಟ್ ತೆಗೆದುಕೊಂಡಿದ್ದಾರೆ. 2011ರಲ್ಲಿ ಭ್ರಷ್ಟಾಚಾರದ (ಕಾಂಗ್ರೆಸ್) ವಿರುದ್ಧ ಹೋರಾಟ ಮಾಡಿದ್ದವರು ಇಂದು ಅದೇ ರಾಹುಲ್ ಗಾಂಧಿ ಜೊತೆ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದೀರಿ. 2018ರಲ್ಲಿ ಪ್ರಜಾಪ್ರಭುತ್ವದ ಉಳಿವಿಗಾಗಿ ಮಾಡುವ ಹೋರಾಟಕ್ಕೆ ಕಾಂಗ್ರೆಸ್‍ನೊಂದಿಕೆ ಕೈ ಕೈ ಮಿಲಾಯಿಸುತ್ತಿದ್ದೀರಿ. ನೀವು ಸತ್ಯವಾದದನ್ನು ಹೇಳಿದ್ದು ಟ್ವೀಟ್ ಡಿಲೀಟ್ ಮಾಡಕೂಡದು ಎಂದು ಅರವಿಂದ್ ಕೇಜ್ರಿವಾಲರಿಗೆ ಟ್ಯಾಗ್ ಮಾಡಿದ್ದರು.

ಇತ್ತ ಟ್ವೀಟ್ ಡಿಲೀಟ್ ಆಗುತ್ತಿದ್ದಂತೆ ನೀವು ತಪ್ಪು ಮಾಡಿದ್ದೀರಿ ಎಂದು ತಜೀಂದ್ರ ಮತ್ತೊಮ್ಮೆ ತಮ್ಮ ಟ್ವಿಟ್ಟರ್‍ನಲ್ಲಿ ಬರೆದುಕೊಂಡಿದ್ದಾರೆ. ಆಪ್ ತನ್ನ ಟ್ವೀಟ್ ಡಿಲೀಟ್ ಮಾಡುತ್ತಿದ್ದಂತೆ ಸ್ಕ್ರೀನ್ ಶಾಟ್‍ನ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಟ್ರೋಲ್‍ಗೆ ಒಳಪಡುತ್ತಿದೆ.

ಕರ್ನಾಟಕದಲ್ಲಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪ್ರಮಾಣವಚನದ ಕಾರ್ಯಕ್ರಮಕ್ಕೆ ದೆಹಲಿ ಸಿಎಂ ಮತ್ತು ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಭಾಗಿಯಾಗಿದ್ದರು. ಅರವಿಂದ್ ಕೇಜ್ರಿವಾಲ್ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಂತೆ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‍ನೊಂದಿಗೆ ಆಪ್ ಕೈ ಜೋಡಿಸಲಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಬರತೊಡಗಿದವು.

ಇತ್ತ ಮೈತ್ರಿಯ ಮಾತುಗಳಿಗೆ ಪೂರಕ ಎಂಬಂತೆ ಕಾಂಗ್ರೆಸ್‍ನ ಹಿರಿಯ ನಾಯಕರು ನಮ್ಮನ್ನ ಸಂಪರ್ಕಿಸಿದ್ದಾರೆ ಎಂಬ ಟ್ವೀಟ್ ಆಪ್ ಮುಖಂಡರೊಬ್ಬರು ಟ್ವಿಟ್ಟರ್‍ನಲ್ಲಿ ಬರೆದುಕೊಂಡಿದ್ದಾರೆ. ಕೊನೆಗೆ ನಾವು ಯಾರನ್ನು ಸಂಪರ್ಕಿಸಿಲ್ಲ, ಲೋಕಸಭಾ ಚುನಾವಣೆಯ ಮೈತ್ರಿ ಬಗ್ಗೆ ಕಾಂಗ್ರೆಸ್‍ನೊಂದಿಗೆ ಚರ್ಚೆ ನಡೆಸಿಲ್ಲ ಎಂದು ಆಪ್ ಸ್ಪಷ್ಟೀಕರಣ ನೀಡಿತ್ತು.

Share This Article
Leave a Comment

Leave a Reply

Your email address will not be published. Required fields are marked *