100 ಕೋಟಿ ವೆಚ್ಚದಲ್ಲಿ ಆಲಿಯಾ – ರಣ್‌ಬೀರ್ ಮ್ಯಾರೇಜ್ : ಅಂಥದ್ದೇನಿದೆ ಆ ಮದುವೇಲಿ..?

Public TV
2 Min Read

ತತ ಐದು ವರ್ಷಗಳ ಕಾಲ ಅಭಿಮಾನಿಗಳನ್ನು ಕಾಯಿಸಿ, ಕೊನೆಗೂ ಮದುವೆಯಾಗುತ್ತಿದ್ದಾರೆ ಬಾಲಿವುಡ್ ಲವ್ ಬರ್ಡ್ಸ್ ಆಲಿಯಾ ಭಟ್ ಮತ್ತು ರಣ್ಬೀರ್ ಕಪೂರ್ ಮದುವೆ ಆಗುತ್ತಿದ್ದಾರೆ. ಐದು ವರ್ಷಗಳಿಂದಲೂ ಜತೆಯಾಗಿಯೇ ಓಡಾಡುತ್ತಿದ್ದ ಈ ಜೋಡಿ ಮದುವೆಯನ್ನು ನಿರಾಕರಿಸುತ್ತಲೇ ಬಂದರು. ಕನಿಷ್ಠ ಹದಿನೈದು ಬಾರಿಯಾದರೂ ಇವರ ಮದುವೆಯ ಬಗ್ಗೆ ಬಾಲಿವುಡ್ ಮಾತಾಡಿಕೊಂಡಿದೆ. ಮಾಧ್ಯಮಗಳು ಬರೆದಿವೆ. ಇನ್ನೇನು ಇವರು ಮದುವೆ ಆಗೇ ಬಿಡುತ್ತಾರೆ ಎನ್ನುವಲ್ಲಿಗೂ ಸುದ್ದಿ ಆಗಿದೆ. ಈ ಬಾರಿಯಂತೂ ಸುದ್ದಿ ಸುಳ್ಳಾಗಲಿಲ್ಲ. ಏಪ್ರಿಲ್ 15ಕ್ಕೆ ಈ ಜೋಡಿ ಹಸೆಮಣೆ ಏರುತ್ತಿದ್ದರೂ, ಮದುವೆಯ ಕಾರ್ಯಗಳು ಏಪ್ರಿಲ್ 13 ರಿಂದಲೇ ಶುರುವಾಗಲಿದೆ. ಇದನ್ನೂ ಓದಿ: ಹೌದು, ನಾನು ತಪ್ಪು ಮಾಡಿದೆ ಕ್ಷಮಿಸಿ : ವಿಲ್ ಸ್ಮಿತ್

ಒಟ್ಟು ನಾಲ್ಕು ದಿನಗಳ ಕಾಲ ಮದುವೆಯ ಕಾರ್ಯಕ್ರಮವನ್ನು ಈ ಇಬ್ಬರು ಕುಟುಂಬ ಹಮ್ಮಿಕೊಂಡಿದೆ ಎನ್ನಲಾಗುತ್ತಿದೆ. ಏ.13 ರಂದು ಮೆಹೆಂದಿ ಕಾರ್ಯಕ್ರವನ್ನು ಆಯೋಜನೆ ಮಾಡಿದ್ದರೆ, ಏ.14ಕ್ಕೆ ಸಂಗೀತ್ ಕಾರ್ಯಕ್ರಮ ನಡೆಯಲಿದೆ. ಏ. 15ರಂದು ವಿವಾಹ ಮಹೋತ್ಸವ. ಏ.16 ಮತ್ತು 17ರಂದು ವಿವಿಧ ಶಾಸ್ತ್ರಗಳನ್ನು ಆಲಿಯಾ ಭಟ್ ಮತ್ತು ರಣ್ಬೀರ್ ಕುಟುಂಬ ನಿಗದಿ ಮಾಡಿದೆ ಎನ್ನುತ್ತಿವೆ ಕುಟುಂಬದ ಮೂಲಗಳು. ಇದನ್ನೂ ಓದಿ: RK ಹೌಸ್‌ನಲ್ಲಿ ರಣಬೀರ್-ಆಲಿಯಾ ಮದುವೆ : ಆ ಸ್ಥಳದ ಹಿಂದಿದೆ ಇಂಟ್ರಸ್ಟಿಂಗ್ ಕಹಾನಿ

ranbir alia

ಈ ಜೋಡಿಯ ಮದುವೆಗಾಗಿ ಮುಂಬೈನ ಆರ್.ಕೆ ಸ್ಟುಡಿಯೋ ಮದುವಣಗಿತ್ತಿಯಂತೆಯೇ ಸಿಂಗಾರಗೊಂಡಿದೆ. ಈಗಾಗಲೇ ಆಲಿಯಾ ಭಟ್ ಮತ್ತು ರಣ್ಬೀರ್ ಬಾಚ್ಯುಲರ್ ಪಾರ್ಟಿಯ ಮೂಡಿನಲ್ಲಿದ್ದಾರೆ. ಇಬ್ಬರೂ ತಮ್ಮ ಸ್ನೇಹಿತರ ಜತೆಗೆ ಬಾಚ್ಯುಲರ್ ಪಾರ್ಟಿಯಲ್ಲಿ ಭಾಗಿಯಾಗಿದ್ದಾರೆ. ಈ ಪಾರ್ಟಿ ಕೂಡ ಅದ್ಧೂರಿಯಾಗಿ ಆಯೋಜನೆಗೊಂಡಿತ್ತು. ಬಾಲಿವುಡ್ ನ ಅನೇಕ ತಾರೆಯರು ಇದರಲ್ಲಿ ಹಾಜರಿದ್ದರು. ಇದನ್ನು ಓದಿ: ಶಾರುಖ್ ಖಾನ್- ರಾಜ್‌ಕುಮಾರ್ ಹಿರಾನಿ ಕಾಂಬಿನೇಷನ್‌ನ ಚಿತ್ರದ ಶೂಟಿಂಗ್ ಸ್ಟಾರ್ಟ್!

ಆರ್.ಕೆ ಸ್ಟುಡಿಯೋವನ್ನು ಸಿಂಗರಿಸಲು ದೇಶದ ನಾನಾ ಭಾಗಗಳಿಂದ ಹೂಗಳು ಖರೀದಿಸಲಾಗಿದ್ದು, ಅದರಿಂದಲೇ ಸ್ಟುಡಿಯೋವನ್ನು ಸಿಂಗರಿಸಲಾಗುತ್ತದೆ ಅಂತೆ.  ಅಲ್ಲದೇ ನೂರಾರು ಬಗೆ ವಿಶೇಷ ಭಕ್ಷ್ಯಗಳ ತಯಾರಿಕೆಗೂ ಆರ್ಡರ್ ಕೊಡಲಾಗಿದೆ. ಬಾಲಿವುಡ್ ಮತ್ತು ದಕ್ಷಿಣದ ಅನೇಕ ಸ್ಟಾರ್ ನಟರು ಈ ಮದುವೆಗೆ ಸಾಕ್ಷಿಯಾಗಲಿದ್ದಾರಂತೆ. ಹೀಗಾಗಿ ಈ ಮದುವೆಗೆ ಅಂದಾಜು 100 ಕೋಟಿ ಖರ್ಚಾಗಲಿದೆ ಎನ್ನುವ ಮಾಹಿತಿ ಇದೆ.

Share This Article
Leave a Comment

Leave a Reply

Your email address will not be published. Required fields are marked *