ಪರಪ್ಪನ ಅಗ್ರಹಾರದಲ್ಲಿ ದರ್ಶನ್ ಭೇಟಿಗೆ ಪವಿತ್ರಗೌಡ ಶತಪ್ರಯತ್ನ – ನಯವಾಗೇ ನಿರಾಕರಿಸಿದ ದರ್ಶನ್!

1 Min Read

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Case) ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್‌ನನ್ನ ಭೇಟಿ ಮಾಡಲು ಸಹ ವಿಚಾರಣಾಧೀನ ಕೈದಿ ಪವಿತ್ರಾಗೌಡ ಶತ ಪ್ರಯತ್ನ ಮಾಡ್ತಿದ್ದಾರೆ ಅನ್ನೋದು ಮೂಲಗಳಿಂದ ತಿಳಿದುಬಂದಿದೆ. ಆದ್ರೆ ಪವಿತ್ರಾ ಗೌಡರ (Pavithra Gowda) ಭೇಟಿಯನ್ನ ದರ್ಶನ್‌ ನಯವಾಗೇ ನಿರಾಕರಿಸಿದ್ದಾರಂತೆ.

ಕಾರಾಗೃಹ ಇಲಾಖೆ ಡಿಜಿಪಿಯಾಗಿ ಅಧಿಕಾರ ಸ್ವೀಕರಿಸಿದ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್‌, ಈಚೆಗೆ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿ ದರ್ಶನ್ (Darshan), ಪವಿತ್ರಾ ಗೌಡರನ್ನ ಮಾತನಾಡಿಸಿದ್ರು. ಈ ವೇಳೆ ಸಹ ಕೈದಿಗಳ ಭೇಟಿಗೆ ಅವಕಾಶ ನೀಡುವಂತೆ ಮನವಿ ಮಾಡಿದ್ರು. ಆದರೆ ಈ ವಿಚಾರ ತಿಳಿದ ದರ್ಶನ್, ಯಾವುದೇ ಕಾರಣಕ್ಕೂ ಪವಿತ್ರಾ ಗೌಡ ಭೇಟಿ ಮಾಡಲ್ಲ ಅಂತಿದ್ದಾರಂತೆ. ಇದನ್ನೂ ಓದಿ: ಶಿರಾ | 3 ಕೋಟಿಯ ಜಾಗಕ್ಕಾಗಿ ಹರಿಯಿತು ನೆತ್ತರು – ರಿಯಲ್ ಎಸ್ಟೇಟ್ ಉದ್ಯಮಿಯಿಂದ ಯುವಕನ ಹತ್ಯೆ

ಮತ್ತೊಂದು ಕಡೆ ರೇಣುಕಾಸ್ವಾಮಿ ಕೊಲೆ ಕೇಸ್‌ನ ಟ್ರಯಲ್ ಶುರುವಾಗಿದೆ. ಕೆಲ ಕಾನೂನು ಪ್ರಕ್ರಿಯೆಗಳ ಬಗ್ಗೆ ಮಾತಾಡಬೇಕು ಅಂತಾ ತಮ್ಮ ವಕೀಲರು, ಅಪ್ತರ ಕಡೆಯಿಂದ ದರ್ಶನ್ ಭೇಟಿಗೆ ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದಾರೆ ಅನ್ನೋ ಮಾಹಿತಿಗಳು ಲಭ್ಯವಾಗಿವೆ. ಇದನ್ನೂ ಓದಿ: ಹೆಂಡ್ತಿ ಮರ್ಯಾದೆ ಕೊಡ್ತಿಲ್ಲ ಅಂತ ಹತ್ಯೆಗೆ 5 ಲಕ್ಷ ಸುಪಾರಿ ಕೊಟ್ಟ ಪತಿ!

Share This Article