ಸ್ನೇಹಿತರ ಜೊತೆ ಪಾರ್ಟಿ ವೇಳೆ ಗಲಾಟೆ – ಬೆಂಗಳೂರಲ್ಲಿ ಯುವಕನ ಬರ್ಬರ ಹತ್ಯೆ

Public TV
1 Min Read

ಬೆಂಗಳೂರು: ಸ್ನೇಹಿತರ ಜೊತೆ ಸೇರಿ ಪಾರ್ಟಿ ಮಾಡುತ್ತಿದ್ದ ವೇಳೆ ಗಲಾಟೆಯಾಗಿ ಯುವಕನ ಬರ್ಬರ ಹತ್ಯೆಯಾಗಿರುವ ಘಟನೆ ರಾಜಧಾನಿ ಬೆಂಗಳೂರಿನಲ್ಲಿ (Bengaluru Murder) ನಡೆದಿದೆ.

ನೇಪಾಳ ಮೂಲದ ಡೇವಿಡ್ (20) ಕೊಲೆಯಾದ ಯುವಕ. ಬೆಳ್ಳಂದೂರು ಬಳಿಯ ಹರಳೂರಿನಲ್ಲಿ ಸ್ನೇಹಿತರ ಜೊತೆ ಯುವಕ ಪಾರ್ಟಿ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ. ಇದನ್ನೂ ಓದಿ: ಮನೆಯಲ್ಲೇ ಗಾಂಜಾ ಬೆಳೆದು ಮಾರಾಟ ಮಾಡ್ತಿದ್ದ ಐವರು MBBS ವಿದ್ಯಾರ್ಥಿಗಳು ಅರೆಸ್ಟ್

ನೇಪಾಳದ ಡೇವಿಡ್ ಮತ್ತು ಆತನ ಸ್ನೇಹಿತರು ಪಾರ್ಟಿ ಮಾಡುತ್ತಿದ್ದರು. ಈ ವೇಳೆ ಸ್ನೇಹಿತರ‌ ನಡುವೆ ಗಲಾಟೆ ಶುರುವಾಗಿದೆ. ಗಲಾಟೆಯಲ್ಲಿ ಡೇವಿಡ್ ಎದೆಗೆ ಸ್ನೇಹಿತನೊಬ್ಬ ಚಾಕುವಿನಿಂದ ಇರಿದಿದ್ದಾನೆ. ಡೇವಿಡ್‌ ತೀವ್ರ ರಕ್ತಸ್ರಾವದಿಂದ ಬಿದ್ದು ಒದ್ದಾಡುತ್ತಿದ್ದ.

ಇದರಿಂದ ಆತಂಕಗೊಂಡ ಸ್ನೇಹಿತರು ತಕ್ಷಣ ಡೇವಿಡ್‌ನನ್ನು ಆಸ್ಪತ್ರೆಗೆ ಸೇರಿಸಲು ಮುಂದಾಗಿದ್ದಾರೆ. ಆದರೆ ಮಾರ್ಗ ಮಧ್ಯೆ ಯುವಕ ಕೊನೆಯುಸಿರೆಳೆದಿದ್ದಾನೆ. ಘಟನೆ ಸಂಬಂಧ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ನವಜೋಡಿ ಸೇರಿ ಐವರು ಸಂಬಂಧಿಗಳನ್ನು ಹತ್ಯೆಗೈದು ತಾನೂ ಆತ್ಮಹತ್ಯೆ ಮಾಡಿಕೊಂಡ

Share This Article