ಸೆಲ್ಫಿ ತೆಗೆದುಕೊಳ್ಳುವಾಗ ಬಂಡೆಯಿಂದ‌ ಜಾರಿ‌ ನದಿಗೆ ಬಿದ್ದ ಯುವಕ ಕಣ್ಮರೆ!

By
1 Min Read

ದಕ್ಷಿಣ ಕನ್ನಡ: ನದಿಯ ಬಂಡೆಯಲ್ಲಿ ಸೆಲ್ಫಿ ತೆಗೆಯಲು ಮುಂದಾದ ಯುವಕನೊಬ್ಬ ನದಿಯಲ್ಲಿ ಮುಳುಗಿ ಕಣ್ಮರೆಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಗುಂಡ್ಯ ಸಮೀಪದಲ್ಲಿ ನಡೆದಿದೆ.

ನೀರಲ್ಲಿ ಮುಳುಗಿದ ಯುವಕನನ್ನು ರಾಜಸ್ಥಾನ ಮೂಲದ ಸೀತಾರಾಮ್ ಎಂದು ತಿಳಿದುಬಂದಿದೆ. ಇಬ್ಬರು ಯುವಕರು ತಮ್ಮ ಆಟೋಮೊಬೈಲ್ ಸ್ಪೇರ್‌ಪಾಡ್ಸ್ ಪಾರ್ಸಲ್ ಸಾಗಾಟದ ಟೆಂಪೋ ವಾಹನವನ್ನು ರಾಷ್ಟ್ರೀಯ ಹೆದ್ದಾರಿ ಬಳಿ ನಿಲ್ಲಿಸಿ ಗುಂಡ್ಯ ಹೊಳೆಯ ಬಂಡೆಯೊಂದರ ಮೇಲೆ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಈ ವೇಳೆ ಯುವಕನೊಬ್ಬ ಕಾಲು ಜಾರಿ ನದಿಗೆ ಬಿದ್ದು ಕಣ್ಮರೆಯಾಗಿದ್ದಾನೆ. ಇದನ್ನೂ ಓದಿ: ಇಂಗ್ಲೆಂಡ್ ವಿರುದ್ಧ ಮಿಂಚಿದ ಡೇರಿಲ್ ಮಿಚೆಲ್ – ಕಿವೀಸ್ ಫೈನಲ್‍ಗೆ

ಸ್ಥಳೀಯರು ನದಿಯಲ್ಲಿ ಹುಡುಕಾಟ ನಡೆಸಿದರೂ ಯುವಕ ಪತ್ತೆಯಾಗಿಲ್ಲ. ಈ ಪ್ರದೇಶದಲ್ಲಿ ಅತಿಯಾಗಿ ಕತ್ತಲು ಆವರಿಸಿರುವ ಕಾರಣ ಹಾಗೂ ಈ ಸ್ಥಳವು ಅತ್ಯಂತ ಅಪಾಯಕಾರಿ ಆಗಿರುವ ಹಿನ್ನೆಲೆಯಲ್ಲಿ ನದಿಯಲ್ಲಿ ಯುವಕನ ಹುಡುಕಾಟವನ್ನು ಸದ್ಯ ನಿಲ್ಲಿಸಲಾಗಿದೆ. ನಾಳೆ ಬೆಳಗ್ಗೆ ಮುಳುಗು ತಜ್ಞರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿಯಿಂದ ಹುಡುಕಾಟ ನಡೆಸಲಾಗುವುದು ಎಂದು ತಿಳಿದು ಬಂದಿದೆ. ಇದನ್ನೂ ಓದಿ: ವಿವಾಹವಾಗಲು ನಿರಾಕರಿಸಿದ್ದಕ್ಕೆ ಪ್ರೇಯಸಿಗೆ ಚಾಕುವಿನಿಂದ 18 ಬಾರಿ ಇರಿದ ಪ್ರಿಯಕರ!

ಘಟನಾ ಸ್ಥಳಕ್ಕೆ ಉಪ್ಪಿನಂಗಡಿ ಠಾಣಾಧಿಕಾರಿ ಕುಮಾರ್ ಕಾಂಬ್ಲೇ ನೇತೃತ್ವದಲ್ಲಿ ಪೊಲೀಸರ ತಂಡವು ಆಗಮಿಸಿ ಪರಿಶೀಲನೆ ನಡೆಸಿದೆ.

Share This Article
Leave a Comment

Leave a Reply

Your email address will not be published. Required fields are marked *