ನಿಶ್ಚಿತಾರ್ಥದ ಬಳಿಕ ಮದುವೆಗೆ ನಕಾರ – ವಿಷ ಕುಡಿಸಿ ಯುವತಿಯ ಹತ್ಯೆಗೈದ ಮಾವ

Public TV
1 Min Read

ಹಾವೇರಿ: ನಿಶ್ಚಿತಾರ್ಥದ ಬಳಿಕ ಮದುವೆಯಾಗಲು (Marriage) ನಿರಾಕರಿಸಿದ ಯುವತಿಗೆ ವಿಷ ಕುಡಿಸಿ ಹತ್ಯೆ ಮಾಡಿದ ಘಟನೆ ಹಾನಗಲ್ (Hangal) ತಾಲೂಕಿನ ಬೈಚವಳ್ಳಿ ಗ್ರಾಮದ ಬಳಿ ನಡೆದಿದೆ.

ಹತ್ಯೆಗೀಡಾದ ಯುವತಿಯನ್ನು ದೀಪಾ ಗೊಂದಿ (21) ಎಂದು ಗುರುತಿಸಲಾಗಿದೆ. ಹತ್ಯೆಗೈದ ಆರೋಪಿಯನ್ನು ಮಾಲತೇಶ್ ಬಾರ್ಕಿ (35) ಎಂದು ಗುರುತಿಸಲಾಗಿದೆ. ಕಳೆದ ಕೆಲವು ದಿನಗಳ ಹಿಂದೆ ಆರೋಪಿ ಮಾಲತೇಶ್, ಸೊಸೆ ದೀಪಾಳೊಂದಿಗೆ ಮದುವೆ ನಿಶ್ಚಿತಾರ್ಥ ಮಾಡಿಕೊಂಡಿದ್ದ. ನಿಶ್ಚಿತಾರ್ಥದ ನಂತರ ಮಾವನೊಂದಿಗೆ ಮದುವೆಯಾಗಲು ಯುವತಿ ನಿರಾಕರಿಸಿದ್ದಳು ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಅಪ್ರಾಪ್ತೆ ಎಂದು ಬುದ್ಧಿಮಾತು – ವಿಷ ಸೇವಿಸಿ ರೈಲ್ವೇ ಹಳಿ ಮೇಲೆ ಮಲಗಿದ ಪ್ರೇಮಿಗಳು

ಏ.22 ರಂದು ಮದುವೆ ಫಿಕ್ಸ್ ಆಗಿತ್ತು. ತಕ್ಷಣ ಮದುವೆ ನಿರಾಕರಿಸಿದ್ದಕ್ಕೆ ಸಿಟ್ಟಿಗೆದ್ದ ಮಾಲತೇಶ್ ಯುವತಿಯನ್ನು ಕರೆದೊಯ್ದು ಸಮೀಪದ ತೋಟವೊಂದಕ್ಕೆ ಕರೆದೊಯ್ದು ಆಕೆಗೆ ವಿಷ ಕುಡಿಸಿದ್ದಾನೆ. ಬಳಿಕ ಆಕೆಗೆ ನೇಣು ಬಿಗಿದು ಹತ್ಯೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.

ಈ ಸಂಬಂಧ ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಮಾಲತೇಶ್‍ನನ್ನು ಪೊಲೀಸರು (Police) ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಚಿನ್ನ ಕದಿಯಲು ಹೋದಾಗ ತನ್ನದೇ ಗ್ಯಾಂಗ್‌ನಿಂದ ಗುಂಡೇಟು – ಪರಾರಿಯಾಗಿದ್ದ ಆರೋಪಿ ಮಧ್ಯಪ್ರದೇಶ ಆಸ್ಪತ್ರೆಯಲ್ಲಿ ಸಾವು

Share This Article