Tumakuru | ಚಾಕುವಿನಿಂದ ಚುಚ್ಚಿ ಯುವಕನ ಭೀಕರ ಕೊಲೆ

Public TV
1 Min Read

ತುಮಕೂರು: ಚಾಕುವಿನಿಂದ ಚುಚ್ಚಿ ಯುವಕನನ್ನು (Youth) ಭೀಕರ ಕೊಲೆ ಮಾಡಿರುವ ಘಟನೆ ತುಮಕೂರು (Tumakuru) ನಗರದ ಜಯನಗರ (Jayanagar) ಬಳಿಯ ಮಂಜುನಾಥ ನಗರದಲ್ಲಿ ನಡೆದಿದೆ.

ಅಭಿಷೇಕ್ (26) ಮೃತ ದುರ್ದೈವಿ. ಕ್ಯಾತಸಂದ್ರ ಬಳಿಯ ಸುಭಾಷ್ ನಗರ ನಿವಾಸಿಯಾಗಿರುವ ಅಭಿಷೇಕ್ ಗುರುವಾರ ರಾತ್ರಿ 11 ಗಂಟೆ ಸುಮಾರಿಗೆ ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮಂಜುನಾಥ ನಗರದಲ್ಲಿ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿರುವ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಇದನ್ನೂ ಓದಿ: 170 ಕ್ಷೇತ್ರಗಳಲ್ಲಿ NDA ಗೆ ಮುನ್ನಡೆ – ಕೆಲ ಕ್ಷೇತ್ರಗಳಲ್ಲಿ ಬಿಜೆಪಿ, ಕೆಲ ಕ್ಷೇತ್ರಗಳಲ್ಲಿ ಜೆಡಿಯು ಪ್ರಬಲ!

ಘಟನಾ ಸ್ಥಳಕ್ಕೆ ಜಯನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಸದ್ಯ ಮೃತದೇಹವನ್ನು ತುಮಕೂರು ಜಿಲ್ಲಾಸ್ಪತ್ರೆಯ ಶವಗಾರಕ್ಕೆ ರವಾನಿಸಲಾಗಿದೆ. ಘಟನೆ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳಿಗಾಗಿ ಪೊಲೀಸರು ಶೋಧಕಾರ್ಯ ಮುಂದುವರಿಸಿದೆ. ಇದನ್ನೂ ಓದಿ: Delhi Blast | ಸ್ಫೋಟದ ರೂವಾರಿ ಉಮರ್‌ನ ನಿವಾಸ ಉಡೀಸ್

Share This Article