ಬಳ್ಳಾರಿ: ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ತುಂಗಭದ್ರಾ ನದಿಗೆ (Tungabhadra River) ಹಾರಿ ಯುವಕ ಹುಚ್ಚಾಟ ಮೆರೆದಿರುವ ಘಟನೆ ಬಳ್ಳಾರಿ ಜಿಲ್ಲೆಯ ಕಂಪ್ಲಿ (Kampli) ಬಳಿ ನಡೆದಿದೆ.
ರಿಲ್ಸ್‌ಗಾಗಿ (Reels) ಯುವಕ ಕಂಪ್ಲಿ ಸೇತುವೆಯಿಂದ ತುಂಗಭದ್ರಾ ನದಿಗೆ ಹಾರಿದ್ದಾನೆ. ಹರಿಯುವ ನದಿಯಲ್ಲಿ ಮೊಸಳೆ, ವಿಷ ಜಂತುಗಳು ತೇಲಿ ಬರುತ್ತಿವೆ. ಈಗಾಗಲೇ ಅಧಿಕಾರಿಗಳು ಅಪಾಯದ ಮುನ್ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಡಿ.ಕೆ.ಶಿವಕುಮಾರ್ ಇಂದಲ್ಲ, ನಾಳೆ ಸಿಎಂ ಆಗೇ ಆಗ್ತಾರೆ: ಶಾಸಕ ರಂಗನಾಥ್
ಅಪಾಯದ ಅರಿವಿದ್ದರೂ ಸೇತುವೆ ಮೇಲಿನಿಂದ ಜಿಗಿದಿದ್ದಾನೆ. ರೀಲ್ಸ್‌ಗಾಗಿ ತುಂಗಭದ್ರಾ ನದಿಗೆ ಹಾರಿದ ಯುವಕ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.