ಅಂಗಡಿ ಬಳಿ ಕುಳಿತವನ ಮೇಲೆ ಡೆಡ್ಲಿ ಅಟ್ಯಾಕ್ – ಚಿಕಿತ್ಸೆ ಫಲಿಸದೇ ಯುವಕ ಸಾವು

Public TV
1 Min Read

– ದಾಳಿಗೆ ಕಾರಣವಾಯ್ತಾ ಲವ್ ಬ್ರೇಕಪ್?

ಆನೇಕಲ್: ಸ್ನೇಹಿತರ ಜೊತೆ ಮಾತನಾಡುತ್ತಾ ಅಂಗಡಿ ಬಳಿ ಕುಳಿತ್ತಿದ್ದ ಯುವಕನ ಮೇಲೆ ಅಪರಿಚಿತ ಗ್ಯಾಂಗೊಂದು ಹಲ್ಲೆ ಮಾಡಿದ ಪರಿಣಾಮ ಚಿಕಿತ್ಸೆ ಫಲಿಸದೇ ಯುವಕ ಮೃತಪಟ್ಟಿರುವ ಘಟನೆ ಆನೇಕಲ್‌ನಲ್ಲಿ (Anekal) ನಡೆದಿದೆ.

ಆನೇಕಲ್ ಪಟ್ಟಣದ ವಾರ್ಡ್ 9ರ ನಿವಾಸಿ ರವಿಕುಮಾರ್ ಮೃತ ಯುವಕ. ರವಿಕುಮಾರ್ ರಾತ್ರಿ 9:30ರ ಸುಮಾರಿಗೆ ಸ್ನೇಹಿತರ ಜೊತೆ ವಿನಾಯಕ ನಗರ ಸುಂದರ್ ರಾಜ್ ಬಡಾವಣೆಯ ಅಂಗಡಿ ಬಳಿ ಕುಳಿತಿದ್ದ. ಈ ವೇಳೆ ಬೈಕ್‌ನಲ್ಲಿ ಬಂದ ಮೂವರು ದೊಣ್ಣೆಯಿಂದ ರವಿಕುಮಾರ್ ಮೇಲೆ ಹಲ್ಲೆ ಮಾಡಿ ಎಸ್ಕೇಪ್ ಆಗಿದ್ದಾರೆ. ಇದನ್ನೂ ಓದಿ: ಇನ್ಸ್ಟಾದಲ್ಲಿ ಬೆಂಗಳೂರಿಗರ ಬಗ್ಗೆ ನಾಲಗೆ ಹರಿಬಿಟ್ಟ ಒಡಿಶಾ ಯುವತಿ

ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ರಕ್ತದ ಮಡುವಿನಲ್ಲಿ ಬಿದ್ದಿದ್ದ ಗಾಯಾಳು ರವಿಕುಮಾರ್‌ನನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ರವಿಕುಮಾರ್ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಇದನ್ನೂ ಓದಿ: Mysuru | ಸಿಡಿಮದ್ದು ಸ್ಫೋಟ – ಮಹಿಳೆಗೆ ಗಾಯ

ಅಮೆಜಾನ್‌ನಲ್ಲಿ ಕೆಲಸ ಮಾಡುತ್ತಿದ್ದ ರವಿಕುಮಾರ್ ಯುವತಿಯೊಬ್ಬಳನ್ನು ಪ್ರೀತಿ ಮಾಡುತ್ತಿದ್ದ. ಇತ್ತೀಚೆಗೆ ಅವರಿಬ್ಬರಿಗೂ ಬ್ರೇಕಪ್ (Breakup) ಆಗಿತ್ತು. ಇದೇ ವಿಚಾರಕ್ಕೆ ರವಿಕುಮಾರ್ ಜೊತೆಯಲ್ಲಿ ಕೆಲಸ ಮಾಡುತ್ತಿದ್ದ ಯುವತಿ ತಮ್ಮ ಮತ್ತು ಗ್ಯಾಂಗ್ ದಾಳಿ ನಡೆಸಿ ಸೇಡು ತೀರಿಸಿಕೊಂಡಿದೆ ಎನ್ನಲಾಗಿದೆ. ಇದನ್ನೂ ಓದಿ: Bengaluru | ಬಾಗಿಲು ಮುಚ್ಚುವ ವೇಳೆ ಗನ್ ಹಿಡಿದು ಬಂದು ಚಿನ್ನದಂಗಡಿ ದರೋಡೆ

ಈಗಾಗಲೇ ಘಟನಾ ಸ್ಥಳದಿಂದ ಎಫ್‌ಎಸ್‌ಎಲ್ ತಂಡ ಸಾಕ್ಷ್ಯಾಧಾರಗಳನ್ಮು ಸಂಗ್ರಹಿಸಿದ್ದು, ಸಿಸಿ ಕ್ಯಾಮೆರಾ ದೃಶ್ಯಗಳನ್ನು ಆಧರಿಸಿ ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕಲಾಗಿದೆ. ಆರೋಪಿಗಳ ಪತ್ತೆಗೆ ಪೊಲೀಸರ ತಂಡ ರಚನೆ ಮಾಡಲಾಗಿದೆ. ಶೀಘ್ರ ಆರೋಪಿಗಳ ಬಂಧನ ಮಾಡಲಾಗುವುದು ಎಂದು ಬೆಂಗಳೂರು ಗ್ರಾಮಾಂತರ ಅಡಿಷನಲ್ ಎಸ್ಪಿ ವೆಂಕಟೇಶ್ ಪ್ರಸನ್ನ ಹೇಳಿಕೆ ನೀಡಿದ್ದಾರೆ.

Share This Article