ಭದ್ರಾ ಮೇಲ್ದಂಡೆ ಯೋಜನೆ ಸೂಪ್ರವೈಸರ್‌ ನಾಲೆಗೆ ಹಾರಿ ಆತ್ಮಹತ್ಯೆ

1 Min Read

ಚಿಕ್ಕಮಗಳೂರು: ಯುವಕನೊಬ್ಬ ಭದ್ರಾ ಬಲದಂಡೆ ನಾಲೆ ಸೇತುವೆಯಿಂದ ಹಾರಿ ಆತ್ಮಹತ್ಯೆಗೆ ಶರಣಾದ ಘಟನೆ ತರೀಕೆರೆ (Tarikere) ತಾಲೂಕಿನ ಬಾವಿಕೆರೆ ಗ್ರಾಮದಲ್ಲಿ ನಡೆದಿದೆ.

ಆತ್ಮಹತ್ಯೆಗೆ ಶರಣಾದ ಯುವಕನನ್ನು ಆಂಧ್ರ ಪ್ರದೇಶ ಮೂಲದ ವಿನಯ್ ರೆಡ್ಡಿ (26) ಎಂದು ಗುರುತಿಸಲಾಗಿದೆ. ಆತ್ಮಹತ್ಯೆಗೆ ಕೌಟುಂಬಿಕ ಕಲಹ ಕಾರಣ ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಭದ್ರಾ ಡ್ಯಾಂನಿಂದ ಚಿತ್ರದುರ್ಗಕ್ಕೆ ನೀರು ಸರಬರಾಜು ಮಾಡುವ ಭೋಪಾಲ್ ಕಂಪನಿಯಲ್ಲಿ ಮೇಲ್ವಿಚಾರಕನಾಗಿ ಅವರು ಕೆಲಸ ಮಾಡುತ್ತಿದ್ದರು. ಇದನ್ನೂ ಓದಿ: ಗೃಹಿಣಿ ಅನುಮಾನಾಸ್ಪದ ಸಾವು – ಪತಿ ಕುಟುಂಬಸ್ಥರ ವಿರುದ್ಧ ಕೊಲೆ ಆರೋಪ

ಅಗ್ನಿಶಾಮಕ ಸಿಬ್ಬಂದಿ, ಮುಳುಗು ತಜ್ಞ ಮಲ್ಪೆ ಈಶ್ವರ್, ಯುವಕನ ಶವ ಪತ್ತೆ ಮಾಡಿದ್ದಾರೆ. ಈ ಸಂಬಂಧ ಲಕ್ಕವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಜೈಲಿನಿಂದ್ಲೇ ವಿಡಿಯೋ ಕಾಲ್, ಅಪ್ರಾಪ್ತೆಗೆ ಟಾರ್ಚರ್ – ವಿಷಯ ಗೊತ್ತಿದ್ರೂ ಸುಮ್ನಿದ್ದಾರಾ ಧಾರವಾಡ ಜೈಲಾಧಿಕಾರಿಗಳು?‌

Share This Article