4 ಮಕ್ಕಳ ತಾಯಿಯನ್ನ ಮದ್ವೆಯಾಗಿ ಇಸ್ಲಾಂಗೆ ಮತಾಂತರವಾಗುವಂತೆ ಚಿತ್ರಹಿಂಸೆ; ಪತಿ ಅರೆಸ್ಟ್‌

Public TV
1 Min Read

ಹುಬ್ಬಳ್ಳಿ: ನಾಲ್ಕು ಮಕ್ಕಳ ತಾಯಿಯನ್ನೇ ಮದ್ವೆಯಾಗಿದ್ದ ಭೂಪನೊಬ್ಬ, ಮದುವೆ ಬಳಿಕ ಇಸ್ಲಾಂಗೆ ಮತಾಂತರಗೊಳ್ಳುವಂತೆ ಕಿರುಕುಳ ನೀಡುತ್ತಿದ್ದ ಕಾರಣಕ್ಕೆ ಧಾರವಾಡ ಜಿಲ್ಲೆಯ ಕಲಘಟಗಿ ಪೊಲೀಸರು (Dharwad Kalaghatagi Police) ಪತಿಯನ್ನು ಬಂಧಿಸಿರುವ ಘಟನೆ ನಡೆದಿದೆ.

ಬೆಂಗಳೂರು (Bengaluru) ಮೂಲದ ಮುಜಾಹಿದ್‌ ಖಾನ್‌ ಬಂಧಿತ ಆರೋಪಿ. ಇದನ್ನೂ ಓದಿ: Wayanad Landslides: ತಮಿಳುನಾಡಿನಿಂದ 5 ಕೋಟಿ ನೆರವು – ಅಗತ್ಯ ಸಹಕಾರ ನೀಡೋದಾಗಿ ಕರ್ನಾಟಕ ಸಿಎಂ ಭರವಸೆ

ಆರೋಪಿ ಮುಜಾಹಿದ್‌ ನಾಲ್ಕು ಮಕ್ಕಳ ತಾಯಿಯಾಗಿದ್ದ ಅಶ್ವಿನಿ ಎಂಬಾಕೆಯನ್ನು 2017ರಲ್ಲಿ 2ನೇ ಮದುವೆಯಾಗಿದ್ದ. ಸಂಸಾರದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಸ್ವಲ್ಪ ದಿನ ಕಳೆದಂತೆ ಮುಜಾಹಿದ್‌, ಪತ್ನಿಯನ್ನು ಇಸ್ಲಾಂಗೆ ಮತಾಂತರಗೊಳ್ಳುವಂತೆ ನಿತ್ಯ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಿದ್ದ. ಜೊತೆಗೆ ಜೀವ ಬೆದರಿಕೆ ಒಡ್ಡುತ್ತಿದ್ದ. ಈ ಬಗ್ಗೆ ಕಳೆದ ಶುಕ್ರವಾರ ಅಶ್ವಿನಿ‌, ತನ್ನ ಪತಿ ವಿರುದ್ಧ ಕಲಘಟಗಿ ಪೊಲೀಸರಿಗೆ ದೂರು ನೀಡಿದ್ದರು.

ಅಶ್ವಿನಿಗೆ ಶ್ರೀರಾಮಸೇನೆ ಬೆಂಬಲ ಸಹ ವ್ಯಕ್ತವಾಗಿತ್ತು. ದೂರು ಆಧರಿಸಿ ಬೆಂಗಳೂರಿನಲ್ಲಿ ಮುಜಾಹೀದ್ ಖಾನ್ ಬಂಧಿಸಿ ಕಲಘಟಗಿ ಠಾಣೆಗೆ ಕರೆತರಲಾಗಿದೆ. ಇದನ್ನೂ ಓದಿ: Landslide In Karnataka: ಶಿರಾಡಿ ಘಾಟ್‌ನಲ್ಲಿ ಭೂಕುಸಿತ – ತಪ್ಪಿದ ಭಾರೀ ಅನಾಹುತ 

Share This Article