ಮದುವೆ ಮಾಡಿಕೊಳ್ಳುವುದಾಗಿ ಹೇಳಿ ಪುರುಷರಿಗೆ ವಂಚಿಸುತ್ತಿದ್ದ ಮಹಿಳೆ ಅರೆಸ್ಟ್

By
1 Min Read

– ಲಕ್ಷಾಂತರ ರೂಪಾಯಿ ಹಣ ಪಡೆದು ಮೋಸ ಮಾಡ್ತಿದ್ದ ವಂಚಕಿ ಖಾಕಿ ಬಲೆಗೆ

ಚಿಕ್ಕಬಳ್ಳಾಪುರ: ಮದುವೆ ಮಾಡಿಕೊಳ್ಳುವುದಾಗಿ ಹೇಳಿ ಪುರುಷರಿಂದ ಲಕ್ಷಾಂತರ ಹಣ ಪಡೆದು ವಂಚಿಸುತ್ತಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು ಮೂಲದ ಕೋಮಲಾ ಬಂಧಿತ ಮಹಿಳೆ. ಆಕೆಯ ಗಂಡ ಸತ್ತು 7 ವರ್ಷಗಳು ಕಳೆದಿವೆ. ವಿಲಾಸಿ ಮೋಜು‌-ಮಸ್ತಿಯ ಜೀವನಕ್ಕಾಗಿ‌ ವಿವಾಹವಾಗುವುದಾಗಿ ನಂಬಿಸಿ ಹಲವು ಪುರುಷರ ಬಳಿ ಹಣ ಪಡೆದು ವಂಚನೆ ಮಾಡುತ್ತಿದ್ದ ಕಿಲಾಡಿ ಮಹಿಳೆಯನ್ನು ಚಿಕ್ಕಬಳ್ಳಾಪುರ ಸಿಇಎನ್ (ಸೆನ್) ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಮದುವೆಯಾಗುವುದಾಗಿ ನಂಬಿಸಿ ನರ್ಸ್‌ ಮೇಲೆ ಅತ್ಯಾಚಾರ – 59ರ ವ್ಯಕ್ತಿ ಬಂಧನ

ಕೋಮಲಾ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ನಗರದ ರಾಘವೇಂದ್ರ ಎಂಬವರನ್ನ ಮ್ಯಾಟ್ರಿಮೋನಿಯಲ್ ವೆಬ್‌ಸೈಟ್ ಮೂಲಕ ಪರಿಚಯ ಮಾಡಿಕೊಂಡು ಆತನಿಂದ 7.40 ಲಕ್ಷ ಪೀಕಿದ್ದಳು. ಹೀಗಾಗಿ ರಾಘವೇಂದ್ರ ದೂರಿನ ಮೇರೆಗೆ ಕೋಮಲಾಳನ್ನ ಬಂಧಿಸಿ ವಿಚಾರಣೆ ನಡೆಸಲಾಗಿದೆ.

ವಿಚಾರಣೆ ವೇಳೆ ಈಕೆ ಇದೇ ರೀತಿ ಗುಜರಾತ್‌‌ನಲ್ಲಿ ನೆಲೆಸಿರುವ ಕುಂದಾಪುರ ನಿವಾಸಿ ರಾಘವೇಂದ್ರ ಎಂಬವರಿಗೆ ಮೋಸ ಮಾಡಿರೋದು ಬೆಳಕಿಗೆ ಬಂದಿದೆ. ಜೊತೆಗೆ ಬೆಂಗಳೂರಿನ‌ ನಾಗರಾಜು ಎಂಬವರ ಬಳಿ ಯೂ 1.50 ಲಕ್ಷ ಪಡೆದು ಮೋಸ ಮಾಡಿರುವುದು ಗೊತ್ತಾಗಿದೆ. ಇದನ್ನೂ ಓದಿ: ದರೋಡೆಗೆ ಹೋಗಿ ನೇಪಾಳಿ ವಿದ್ಯಾರ್ಥಿನಿಗೆ ಗುಂಡಿಕ್ಕಿ ಕೊಂದ ಭಾರತೀಯ ಮೂಲದ ವ್ಯಕ್ತಿ

ಮೂರು ಪ್ರಕರಣಗಳಲ್ಲೂ ಆಯಾ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿದೆ. ಈಕೆ ಗಂಡ ಕೆಪಿಟಿಸಿಲ್ ನೌಕರನಾಗಿದ್ದ. 2017 ರಲ್ಲಿ ಮರಣ ಹೊಂದಿದ್ದಾರೆ. ಗಂಡ ಮೃತಪಟ್ಟಿರುವ ಕಾರಣ 6 ಕೋಟಿ ಪರಿಹಾರದ ಹಣಕ್ಕೆ ಟ್ಯಾಕ್ಸ್ ಕಟ್ಟಬೇಕು ಅಂತಾ ಹೇಳಿ ಹಣ ವಸೂಲಿ ಮಾಡುತ್ತಿದ್ದಳು. ಸದ್ಯ ಚಿಕ್ಕಬಳ್ಳಾಪುರ ಸೆನ್ ಪೊಲೀಸರು ಈಕೆಯನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Share This Article