ಮನೆಯ ಮುಂದೆ ಆಡುತ್ತಿದ್ದ ಎರಡೂವರೆ ವರ್ಷದ ಮಗುವನ್ನು ಅಪಹರಿಸಿದ ಮಹಿಳೆ

Public TV
1 Min Read

ಬೆಂಗಳೂರು: ಎರಡೂವರೆ ವರ್ಷದ ಹೆಣ್ಣು ಮಗುವನ್ನು ಮಾತನಾಡಿಸಿ ಮಹಿಳೆಯೊಬ್ಬಳು ಅಪಹರಿಸಿರುವ ಘಟನೆ ನಗರದ ಮಲ್ಲೇಶ್ವರಂ (Malleshwaram) ಪೈಪ್‌ಲೈನ್‌ನ ಮಕ್ಕಳ ಮಾರಮ್ಮ ದೇವಸ್ಥಾನದ ಬಳಿ ನಡೆದಿದೆ.

ಅಪಹರಣಕ್ಕೊಳಗಾದ ಮಗುವನ್ನು ದಿವ್ಯ ಭಾರತಿ ಹಾಗೂ ಲೋಕೇಶ್ ದಂಪತಿಯ ಪುತ್ರಿ ನವ್ಯ ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಇಡಿ ನೋಟಿಸ್‌ ನೀಡಿದೆ ಎಂದು ನಿಮ್ಗೆ ಹೇಳಿದ್ದು ಯಾರು? – ಸಿಎಂ

ಇಂದು (ನ.7) ಬೆಳಗ್ಗೆ 9:20ರ ಸುಮಾರಿಗೆ ಈ ಘಟನೆ ನಡೆದಿದೆ. ತಾಯಿ ಮೊದಲ ಮಗುವನ್ನು ಶಾಲೆಗೆ ಕಳಿಸಲು ರೆಡಿ ಮಾಡುತ್ತಿದ್ದರು. ಈ ವೇಳೆ ನವ್ಯ ಮನೆಯ ಹೊರಗೆ ಆಟವಾಡುತ್ತಿದ್ದಳು. ಮನೆ ಬಳಿ ಅಪರಿಚಿತ ಮಹಿಳೆಯೊಬ್ಬಳು ಬಂದು ಮಗುವನ್ನು ಮಾತನಾಡಿಸಿ ಕರೆದೊಯ್ದಿದ್ದಾಳೆ. ಮಗುವನ್ನು ಅಪಹರಿಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಸದ್ಯ ಪೊಲೀಸರು ಮಗುವಿಗಾಗಿ ಹುಡುಕಾಟ ನಡೆಸಿದ್ದು, ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ಆಧಾರ್ ಅಪ್‌ಡೇಟ್‌ಗಾಗಿ ಬ್ಯಾಂಕ್ ಹೆಸರಲ್ಲಿ ಲಿಂಕ್ – 18 ಲಕ್ಷ ರೂ. ವಂಚನೆ

Share This Article