ಪರಸಂಗದ ಸರಸಕ್ಕೆ ಅಡ್ಡಿಯಾದನೆಂದು ಗಂಡನನ್ನೇ ಮುಗಿಸಿದ ಖತರ್ನಾಕ್ ಪತ್ನಿ

Public TV
2 Min Read
– ಮರ್ಡರ್ ಮಾಡಿಸಿ ಗಂಡ ಕಾಣಿಸುತ್ತಿಲ್ಲ ಅಂತ ಪೊಲೀಸರಿಗೆ ಕಂಪ್ಲೇಂಟ್
– ಪೊಲೀಸರ ತನಿಖೆಯಲ್ಲಿ ಬಯಲಾಯ್ತು ಅಲಮೇಲಮ್ಮನ ಆಟ

ಚಿಕ್ಕಬಳ್ಳಾಪುರ: ಗಂಡ ಹಾಗೂ ಮೂವರು ಮಕ್ಕಳಿದ್ರೂ, ಇಲ್ಲೊಬ್ಬ ವಿವಾಹಿತ ಮಹಿಳೆ ಪರಪುರುಷನೊಂದಿಗೆ ಅನೈತಿಕ ಸಂಬಂಧ ಬೆಳೆಸಿದ್ದಳು. ಆದ್ರೆ ತನ್ನ ಅನೈತಿಕ ಸಂಬಂಧಕ್ಕೆ ಗಂಡನೇ ಅಡ್ಡಿಯಾಗಿದ್ದನೆಂದು ಭಾವಿಸಿ, ಪ್ರಿಯಕರನ (Lover) ಕೈಯಲ್ಲಿ ಗಂಡನನ್ನೇ ಕೊಲೆ ಮಾಡಿಸಿದ್ದಾಳೆ.

ಗಂಡನನ್ನು ಕೊಂದು, ಹೂತುಹಾಕಿ, ಏನೂ ಗೊತ್ತಿಲ್ಲದಂತೆ ಪೊಲೀಸ್ ಠಾಣೆಗೆ ಹೋಗಿ `ಸ್ವಾಮಿ ನನ್ನ ಗಂಡ ಕಾಣಿಸುತ್ತಿಲ್ಲ ಹುಡುಕಿಕೊಡಿ’ ಎಂದು ಸುಳ್ಳು ಕಂಪ್ಲೇಂಟ್ (Police Complaint) ಕೊಟ್ಟಿದ್ದಾಳೆ. ಕೊನೆಗೆ ನೌಟಂಕಿ ರಾಣಿಯ ಆಸಲಿಯತ್ತನ್ನ ಚಿಕ್ಕಬಳ್ಳಾಪುರ ಜಿಲ್ಲೆಯ ಚೇಳೂರು ಪೊಲೀಸರು (Chelur Police Station) ಬಯಲು ಮಾಡಿದ್ದಾರೆ. ಇದನ್ನೂ ಓದಿ: ಗುಜರಾತ್ ವಿಧಾನಸಭೆ ಚುನಾವಣೆ – ಅಬ್ಬರದ ಪ್ರಚಾರಕ್ಕೆ ತೆರೆ

ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆ ಬಾಗೇಪಲ್ಲಿ ತಾಲೂಕಿನ ಪೋಲನಾಯಕನಪಲ್ಲಿ ನಿವಾಸಿ ನರಸಿಂಹಪ್ಪ ಕೊಲೆಯಾದ ವ್ಯಕ್ತಿ. ಅಲಮೇಲಮ್ಮ ಕೊಲೆ ಮಾಡಿಸಿದ ಪತ್ನಿ.

ಅಲಮೇಲಮ್ಮ – ನರಸಿಂಹಪ್ಪ ದಂಪತಿಗೆ ಮೂವರು ಮಕ್ಕಳು (ಇಬ್ಬರು ಹೆಣ್ಣು, ಓರ್ವ ಗಂಡು ಮಗ) ಇದ್ದಾರೆ. ಇಬ್ಬರು ಕೂಲಿ ಮಾಡಿಕೊಂಡು, ನೆಮ್ಮದಿಯ ಜೀವನ ನಡೆಸುತ್ತಿದ್ದರು. ಆದರೆ ನವೆಂಬರ್ 24ರಂದು ಈಕೆಯ ಗಂಡ ನರಸಿಂಹಪ್ಪ ಅಂಗಡಿಗೆ ಹೋಗಿ ಬರ್ತೀನಿ ಅಂತ ಹೋರಟವನೇ 5 ದಿನಗಳಾದ್ರೂ ಮನೆಗೆ ವಾಪಸ್ ಬರಲಿಲ್ಲ. ಇದರಿಂದ ಆತಂಕಗೊಂಡ ಅಲಮೇಲು ನೇರವಾಗಿ ಚೇಳೂರು ಪೊಲೀಸ್ ಠಾಣೆಗೆ ಹೋಗಿ ನವೆಂಬರ್ 29 ರಂದು ಗಂಡ ಮಿಸ್ಸಿಂಗ್ ದೂರು ನೀಡಿದ್ದಳು.

ದೂರಿನ ಆಧಾರದ ಮೇಲೆ ಕೇಸ್ ದಾಖಲಿಸಿ, ತನಿಖೆ ನಡೆಸಿದ್ದ ಪೊಲೀಸರು ಹೆಂಡತಿ ಅಲಮೇಲಮ್ಮನ ಮೇಲೆ ಅನುಮಾನ ಪಟ್ಟಿದ್ದರು. ಬಳಿಕ ಠಾಣೆಗೆ ಕರೆತಂದು ವಿಚಾರಣೆ ಮಾಡಿದಾಗ ಸತ್ಯ ಬಾಯ್ಬಿಟ್ಟಿದ್ದಾಳೆ. ಇದನ್ನೂ ಓದಿ: ಯಾವುದೇ ವ್ಯಕ್ತಿಯನ್ನು ವೈಯಕ್ತಿಕವಾಗಿ ಟಾರ್ಗೆಟ್ ಮಾಡಲ್ಲ – ರಾವಣ ಹೇಳಿಕೆಗೆ ಖರ್ಗೆ ಸ್ಪಷ್ಟನೆ

ಅಲಮೇಲಮ್ಮನ ಅಸಲಿ ಆಟ ಏನು?
ಹೌದು.. ಅಲಮೇಲಮ್ಮನಿಗೆ ಪೋಲನಾಯಕನಪಲ್ಲಿ ಗ್ರಾಮದ ವೆಂಕಟೇಶ ಎನ್ನುವವನೊಂದಿಗೆ ಅನೈತಿಕ ಸಂಬಂಧವಿತ್ತು. ಇದೇ ವಿಚಾರಕ್ಕೆ ಮನೆಯಲ್ಲಿ ಆಗಾಗ್ಗೆ ಗಲಾಟೆ ನಡೆಯುತ್ತಿತ್ತು. ಇದರಿಂದ ರೊಚ್ಚಿಗೆದ್ದ ಅಲಮೇಲು ತನ್ನ ಗಂಡನ ಕಥೆ ಮುಗಿಸುವಂತೆ ಹೇಳಿದ್ದಾಳೆ. ನಂತರ ಪಕ್ಕಾ ಸ್ಕೆಚ್ ಹಾಕಿದ ವೆಂಕಟೇಶ ಸ್ನೇಹಿತ ಶ್ರೀನಾಥ್ ಜೊತೆಗೂಡಿ ನರಸಿಂಹಪ್ಪನಿಗೆ ಮದ್ಯ ಕುಡಿಸಲು ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾನೆ. ಮದ್ಯ ಕುಡಿಸಿ ಅಲ್ಲೇ ಕತ್ತು ಹಿಸುಕಿ ಕೊಂದು, ಪೊದೆಯೊಂದರಲ್ಲಿ ಶವವನ್ನ ಹೂತುಹಾಕಿದ್ದಾರೆ ಎಂಬ ಸತ್ಯವನ್ನ ಅಲಮೇಲು ತನಿಖೆ ವೇಳೆ ಬಾಯ್ಬಿಟ್ಟಿದ್ದಾಳೆ. ಇದನ್ನೂ ಓದಿ: ಏಲಿಯನ್ ಅಟ್ಯಾಕ್, ಸೋಲರ್ ಸುನಾಮಿ – ವಿಶ್ವದ ಅಂತ್ಯದ ಬಗ್ಗೆ ಬಾಬಾ ವಂಗಾ ಭವಿಷ್ಯವಾಣಿ

ಸದ್ಯ ಶವ ಹೊರತೆಗೆಸಿರುವ ಪೊಲೀಸರು ಕಿಲಾಡಿ ಪತ್ನಿ ಅಲಮೇಲಮ್ಮ, ಪ್ರಿಯಕರ ವೆಂಕಟೇಶ್ ಹಾಗೂ ಕೊಲೆಗೆ ಸಾಥ್ ನೀಡಿದ ಸ್ನೇಹಿತ ಶ್ರೀನಾಥ್‌ನನ್ನ ಬಂಧಿಸಿ ಜೈಲಿಗಟ್ಟಿದ್ದಾರೆ. ಆದರೆ ತಮ್ಮದಲ್ಲದ ತಪ್ಪಿಗೆ ಮೂವರು ಮಕ್ಕಳು ಅನಾಥರಾಗುವಂತಾಗಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *