ಕೊಡವರ ಸಂಸ್ಕೃತಿ ಉಳಿವಿಗಾಗಿ ಪಾದಯಾತ್ರೆ – ಫೆ.7ರಂದು ದಕ್ಷಿಣ ಕೊಡಗಿನ 5 ಶಾಲಾ ಕಾಲೇಜಿಗೆ ರಜೆ ಘೋಷಣೆ

Public TV
1 Min Read

ಮಡಿಕೇರಿ: ಕೊಡವರ ಸಂಸ್ಕೃತಿ (Kodava Culture) ಉಳಿವಿಗಾಗಿ ಕೊಡಗಿನಲ್ಲಿ ನಡೆಯುತ್ತಿರುವ ಕೊಡವಾಮೆ ಬಾಳೋ ಪಾದಯಾತ್ರೆಗೆ ಬೆಂಬಲಿಸಿ ಫೆ.7ರಂದು ದಕ್ಷಿಣ ಕೊಡಗಿನ 5 ಶಾಲಾ ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ.

ಕುಟ್ಟದಿಂದ ಮಡಿಕೇರಿವರೆಗೆ (Madikeri) ಆರಂಭವಾಗಿರುವ ಕೊಡವಾಮೆ ಬಾಳೊ ಪಾದಯಾತ್ರೆಯು ಮಡಿಕೇರಿಯಲ್ಲಿ ಸೇರುವ ಅಂತಿಮ ದಿನ ಅಂದರೆ ಫೆ.7ರಂದು ದಕ್ಷಿಣ ಕೊಡಗಿನ ಕೆಲವು ಪ್ರತಿಷ್ಠಿತ ಶಾಲಾ ಕಾಲೇಜುಗಳು ರಜೆ (Holiday) ಘೋಷಣೆ ಮಾಡಿದೆ. ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಶ್ರೀಮಂಗಲ-ಕುಮಟೂರುವಿನ ಜೆ.ಸಿ ಶಿಕ್ಷಣ ಸಂಸ್ಥೆ, ಟಿ. ಶೆಟ್ಟಿಗೇರಿ ರೂಟ್ಸ್ ಶಿಕ್ಷಣ ಸಂಸ್ಥೆ, ಪೊನ್ನಂಪೇಟೆಯ ಅಪ್ಪಚ್ಚಕವಿ ವಿದ್ಯಾಸಂಸ್ಥೆ, ಪೊನ್ನಂಪೇಟೆಯ ಸಾಯಿ ಶಂಕರ ವಿದ್ಯಾ ಸಂಸ್ಥೆ, ಗೋಣಿಕೊಪ್ಪದ ಕಾಪ್ಸ್ ವಿದ್ಯಾಸಂಸ್ಥೆ ರಜೆ ಘೋಷಣೆ ಮಾಡಿದೆ. ಇದನ್ನೂ ಓದಿ: Delhi Exit Poll | 27 ವರ್ಷದ ಬಳಿಕ ಬಿಜೆಪಿಗೆ ಅಧಿಕಾರ

ಕೊಡವ ಆಡಳಿತ ಮಂಡಳಿಯಲ್ಲಿರುವ ಶಾಲಾ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳು ಹಾಗೂ ಶಿಕ್ಷಕರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ರಜೆ ನೀಡಬೇಕೆಂದು ಆ ಶಾಲೆಗಳ ಮಕ್ಕಳ ಪೋಷಕರು ಆಡಳಿತ ಮಂಡಳಿಗೆ ಮನವಿ ಮಾಡಿದ್ದರು. ಈ ಮನವಿಗೆ ಮಾನ್ಯತೆ ನೀಡಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ರಜೆ ಘೋಷಣೆ ಮಾಡಿದೆ. ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ ಫೆ.8 ರಂದು ಭಾರತ- ಶ್ರೀಲಂಕಾ ಕ್ರಿಕೆಟ್‌ ಮ್ಯಾಚ್‌

Share This Article