6 ತಿಂಗಳ ಹಿಂದೆ ಮಾಡ್ಕೊಂಡಿದ್ದ ವೀಡಿಯೋ ಈಗ ವೈರಲ್ ಮಾಡುತ್ತಿದ್ದಾರೆ: ಹುಬ್ಬಳ್ಳಿ ಲವ್ ಜಿಹಾದ್ ಸಂತ್ರಸ್ತೆ

1 Min Read

– ಕೆಲ ರಾಜಕೀಯ ನಾಯಕರು ಇದರ ರಾಜಕೀಯ ಲಾಭ ಪಡೆದುಕೊಳ್ಳುತ್ತಿದ್ದಾರೆ

ಹುಬ್ಬಳ್ಳಿ: ನನಗೆ ಬೆದರಿಕೆ ಹಾಕಿ ಆರು ತಿಂಗಳ ಹಿಂದೆ ಮುಫೀಸ್ ವಿಡಿಯೋ ಮಾಡಿಕೊಂಡಿದ್ದ. ಈಗ ಅವುಗಳನ್ನೇ ವೈರಲ್ ಮಾಡುತ್ತಿದ್ದಾನೆ. ಕೆಲ ರಾಜಕೀಯ ನಾಯಕರು ಇದರ ಲಾಭ ಪಡೆದುಕೊಳ್ಳುತ್ತಿದ್ದಾರೆ ಎಂದು ಹುಬ್ಬಳ್ಳಿ (Hubballi) ಲವ್ ಜಿಹಾದ್ (Love Jihad) ಸಂತ್ರಸ್ತೆ ಆರೋಪಿಸಿದ್ದಾರೆ.

ಈ ಕುರಿತು `ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ಜೈಲಿನಲ್ಲಿ ಇದ್ದುಕೊಂಡೇ ಆರೋಪಿ ಮುಫೀಸ್ ಮತ್ತು ಆತನ ಸ್ನೇಹಿತರಿಂದ ಪ್ರಕರಣ ತಿರುಚುವ ಷಡ್ಯಂತರ ನಡೆಯುತ್ತಿದೆ. ಎಫ್‌ಐಆರ್ ದಾಖಲಾದ ಬಳಿಕ ಹಳೇ ವೀಡಿಯೋ ಬಿಡುಗಡೆ ಮಾಡಿ ಪ್ರಕರಣ ತಿರುಚುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿ ಮುಫೀಸ್ ಮತ್ತು ಪ್ರತಿಷ್ಠಿತ ಅಲ್ ತಾಜ್ ಹೋಟೆಲ್ ಮಾಲೀಕನ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಅರುಣಾಚಲ ಸಿಎಂ ಪೆಮಾ ಖಂಡು ಕುಟುಂಬದ ವಿರುದ್ಧ ಸಿಬಿಐ ತನಿಖೆಗೆ ಸುಪ್ರೀಂ ಆದೇಶ

ನಾನು ನನ್ನ ಸ್ವ ಇಚ್ಛೆಯಿಂದಲೇ ಮುಫೀಸ್ ಜೊತೆಗೆ ಸಂಬಂಧ ಮುರಿದುಕೊಂಡಿದ್ದೇನೆ. ಆತನ ಜೊತೆಗೆ ಇದ್ದಾಗ ಬಲವಂತಾಗಿ ಇಸ್ಲಾಂ ಧರ್ಮದ ಆಚರಣೆ ಬಗ್ಗೆ ನನ್ನ ಮೇಲೆ ಒತ್ತಡ ಹಾಕುತ್ತಿದ್ದರು. ನನ್ನ ಬ್ರೈನ್‌ವಾಶ್ ಮಾಡಿ ಅವರು ಹೇಳಿದಂತೆ ಕೇಳುವ ಹಾಗೇ ಮಾಡಿದ್ದರು. ಇದರಿಂದ ನಾನು ಆತನ ಜೊತೆಗೆ ಬ್ರೇಕಪ್ ಮಾಡಿಕೊಂಡಿರುವೆ. ಹೀಗಾಗಿ ಆತನ ವಿರುದ್ಧ ದೂರು ದಾಖಲಿಸಿದ್ದೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಮತ್ತೆ ಸಿಎಂ ಆಗಿ ದಾವಣಗೆರೆಗೆ ಬರಲ್ಲ: ಭವಿಷ್ಯ ನುಡಿದ ಛಲವಾದಿ ನಾರಾಯಣಸ್ವಾಮಿ

Share This Article