Video Viral | ಅಮೆರಿಕ ನಿರ್ಮಿತ ಎಫ್‌-16 ಯುದ್ಧ ವಿಮಾನ ಪತನ – ಪೈಲಟ್‌ ಸಾವು

2 Min Read

ಅಂಕಾರ/ವಾಷಿಂಗ್ಟನ್:‌ ಟರ್ಕಿ ವಾಯುಪಡೆಗೆ (Turkish Air Force) ಸೇರಿದ, ಅಮೆರಿಕ ನಿರ್ಮಿತ F-16 ಯುದ್ಧವಿಮಾನ (F 16 Fighter Jet) ಪತನಗೊಂಡು ಓರ್ವ ಪೈಲಟ್‌ ಸಾವನ್ನಪ್ಪಿರುವ ಘಟನೆ ಟರ್ಕಿಯ ಬಲಿಕೇಸಿರ್‌ ನಗರದಲ್ಲಿ ನಡೆದಿದೆ. ಈ ತಡವಾಗಿ ಬೆಳಕಿಗೆ ಬಂದಿದೆ.

ಬಲಿಕೇಸಿರ್‌ ನಗರದ ಬುರ್ಸಾ-ಇಜ್ಮಿರ್ ಹೆದ್ದಾರಿಯ ಬಳಿ ಘಟನೆ ಸಂಭವಿಸಿದೆ. ದುರಂತದ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳೀಯ ಪೊಲೀಸರು ಆಂಬುಲೆನ್ಸ್‌ಗಳೊಂದಿಗೆ ಸ್ಥಳಕ್ಕೆ ದೌಡಾಯಿಸಿವೆ. ಇದನ್ನೂ ಓದಿ: ಅಮೆರಿಕದಲ್ಲಿ ಭಾರಿ ಹಿಮಪಾತ; 5,600 ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದು – ಶಾಲೆಗಳಿಗೆ ರಜೆ

ಘಟನೆಯ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ (Social Media) ಹರಿದಾಡುತ್ತಿದ್ದು, ವಿಮಾನದ ಅವಶೇಷಗಳು ರಸ್ತೆಯಲ್ಲಿ ಚದುರಿಕೊಂಡಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಗವರ್ನರ್‌ ಅಧಿಕೃತ ಹೇಳಿಕೆ
ಘಟನೆ ಬಳಿಕ ಟರ್ಕೀಶ್‌ ಗವರ್ನರ್ ಇಸ್ಮಾಯಿಲ್ ಉಸ್ತಾವೋಗ್ಲು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಬಲಿಕೇಸಿರ್‌ 9ನೇ ಮುಖ್ಯ ಜೆಟ್ ಬೇಸ್ ಕಮಾಂಡ್‌ನ ಸ್ಕ್ವಾಡ್ರನ್‌ಗೆ ಸೇರಿದ್ದ ನಮ್ಮ F-16 ವಿಮಾನ ಫೆ.23 ರಂದು ಪತನಗೊಂಡಿದೆ. ಅಂದು ನಸುಕಿನ 12:50 ರ ಸುಮಾರಿಗೆ ಮಿಷನ್ ಹಾರಾಟದ ಸಮಯದಲ್ಲಿ ಅಪಘಾತಕ್ಕೀಡಾಗಿದೆ. ಈ ವೇಳೆ ನಮ್ಮ ಓರ್ವ ಪೈಲಟ್‌ ಕೂಡ ಹುತಾತ್ಮರಾಗಿದ್ದಾರೆ. ನಮ್ಮ ಹುತಾತ್ಮರ ಮೇಲೆ ಕರುಣೆ ತೋರಲು ನಾನು ಅಲ್ಲಾಹನಲ್ಲಿ ಪ್ರಾರ್ಥಿಸುತ್ತೇನೆ ಎನ್ನುತ್ತಾ ಮೃತರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ. ಇದನ್ನೂ ಓದಿ: ನೇಪಾಳದಲ್ಲಿ ತ್ರಿಶೂಲಿ ನದಿಗೆ ಉರುಳಿದ ಬಸ್ – 18 ಮಂದಿ ಸಾವು

ಈ ಬಗ್ಗೆ ಟರ್ಕೀಶ್‌ ರಾಷ್ಟ್ರೀಯ ರಕ್ಷಣಾ ಸಚಿವಾಲಯ ಕೂಡ ಪ್ರತಿಕ್ರಿಯಿಸಿದ್ದು, 9ನೇ ಮುಖ್ಯ ಜೆಟ್ ಬೇಸ್ ಕಮಾಂಡ್‌ನ ಎಫ್-16 ವಿಮಾನವು ಸೋಮವಾರ ಬೆಳಗ್ಗೆ 12:56 ರಿಂದ ರೇಡಿಯೋ ಸಂಪರ್ಕ ಮತ್ತು ಟ್ರ್ಯಾಕಿಂಗ್ ಸಂಪರ್ಕ ಕಳೆದುಕೊಂಡಿತು. ತಕ್ಷಣವೇ ಶೋಧ ಕಾರ್ಯ ನಡೆಸಲಾಯಿತು. ಬಳಿಕ ವಿಮಾನ ಅಪಘಾತಕ್ಕೀಡಾಗಿರುವುದು ತಿಳಿದುಬಂದಿತು. ಘಟನೆಯಲ್ಲಿ ಓರ್ವ ಪೈಲಟ್‌ ಹುತಾತ್ಮರಾಗಿದ್ದಾರೆ. ತನಿಖೆಯ ನಂತರ ಅಪಘಾತಕ್ಕೆ ಕಾರಣ ಏನೆಂಬುದನ್ನು ನಿರ್ಧರಿಲಸಾಗುತ್ತದೆ ಎಂದು ಹೇಳಿದೆ.

ಘಟನೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಆದ್ರೆ ನಿಖರ ಕಾರಣ ಪತ್ತೆಹಚ್ಚಲು ತಾಂತ್ರಿಕ ತಂಡ ಕೆಲಸ ಮಾಡುತ್ತಿದೆ. ಇದನ್ನೂ ಓದಿ: ಕಣ್ಣು ಕಳೆದುಕೊಂಡ ಇಮ್ರಾನ್‌ ಖಾನ್‌ – ಸೆಂಟ್ರಲ್ ರೆಟಿನಲ್ ವೆಯಿನ್ ಅಕ್ಲೂಷನ್ ಯಾರಲ್ಲಿ ಕಾಣಿಸಿಕೊಳ್ಳುತ್ತೆ?

Share This Article