ಹುಬ್ಬಳ್ಳಿಯಲ್ಲಿ ಕಾರು, ಲಾರಿ ಮಧ್ಯೆ ಭೀಕರ ಅಪಘಾತ – ಒಂದೇ ಕುಟುಂಬದ ಮೂವರು ದುರ್ಮರಣ

Public TV
1 Min Read

– ಮೂವರ ಸ್ಥಿತಿ ಗಂಭೀರ

ಹುಬ್ಬಳ್ಳಿ/ಕೊಪ್ಪಳ: ಓಮಿನಿ ಕಾರು (Omni Car) ಹಾಗೂ ಲಾರಿ (Lorry) ಮಧ್ಯೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದು, ಇನ್ನೂ ಮೂವರು ಗಂಭೀರ ಗಾಯಗೊಂಡಿರುವ ಘಟನೆ ಹುಬ್ಬಳ್ಳಿ (Hubballi) ತಾಲೂಕಿನ ಕಿರೆಸೂರು ಬಳಿ ನಡೆದಿದೆ.

ಶುಕ್ರವಾರ ರಾತ್ರಿ 10 ಗಂಟೆಯ ಸುಮಾರಿಗೆ ಘಟನೆ ನಡೆದಿದೆ. ಜಾಫರ್‌ಸಾಬ್ ಮಂಗಳೂರು (60), ಮಹ್ಮದ್ ಮುಸ್ತಫಾ ಮಂಗಳೂರು (36), ಶೋಹೆಬ್ ಮಂಗಳೂರು (6) ಮೃತ ದುರ್ದೈವಿಗಳು. ಮೃತರು ಕೊಪ್ಪಳ (Koppal) ತಾಲೂಕಿನ ಮಂಗಳಾಪುರ ಗ್ರಾಮದ ನಿವಾಸಿಗಳು. ಮೃತ ಜಾಫರ್‌ಸಾಬ್ ಕುಟುಂಬದವರ ಜೊತೆ ಪಾರ್ಶ್ವವಾಯು ಔಷಧಿ ತರಲು ಕಾರವಾರ ಜಿಲ್ಲೆಯ ಹಲಗಾ ಗ್ರಾಮಕ್ಕೆ ಹೋಗಿದ್ದರು. ಔಷಧಿ ಪಡೆದು ಮರಳಿ ಊರಿಗೆ ಬರುವ ಸಂದರ್ಭ ಘಟನೆ ಸಂಭವಿಸಿದೆ. ಇದನ್ನೂ ಓದಿ: ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟ ನಂತ್ರ ಹೈಕಮಾಂಡ್ ತೀರ್ಮಾನ ಏನು ಗೊತ್ತಿಲ್ಲ – ಸತೀಶ್ ಜಾರಕಿಹೋಳಿ

ಇನ್ನೂ ಘಟನೆಯಲ್ಲಿ ಮೂವರು ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಧಾರವಾಡ ಎಸ್‌ಡಿಎಂ ಆಸ್ಪತ್ರೆಗೆ ದಾಖಲಿಸಲಾಗಿದೆ. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಇದನ್ನೂ ಓದಿ: ಚಿಕ್ಕಪ್ಪನೊಂದಿಗೆ ಚಕ್ಕಂದ – ಮದ್ವೆಯಾಗಬೇಕು ಅಂದಿದ್ದಕ್ಕೆ ಯುವತಿಯನ್ನ ಕೊಂದೇಬಿಟ್ಟ

Share This Article