ಪಬ್ಲಿಕ್ ಟಿವಿ `ವಿದ್ಯಾಮಂದಿರ’ – ಲಕ್ಕಿ ಡಿಪ್‌ನಲ್ಲಿ ಲ್ಯಾಪ್‌ಟಾಪ್‌, ಟ್ಯಾಬ್‌ ಗೆದ್ದ ಅದೃಷ್ಟವಂತರು ಇವರೇ…

Public TV
2 Min Read

ಬೆಂಗಳೂರು: `ಪಬ್ಲಿಕ್ ಟಿವಿ’ ಆಯೋಜಿಸಿರುವ 4ನೇ ಆವೃತ್ತಿಯ `ವಿದ್ಯಾಮಂದಿರ’ (Public TV Vidhya Mandira) ಶೈಕ್ಷಣಿಕ ಮೇಳಕ್ಕೆ ಇಂದು ಬೆಳಗ್ಗೆ ಅದ್ಧೂರಿ ಚಾಲನೆ ನೀಡಲಾಗಿದೆ. ವಿದ್ಯಾರ್ಥಿಗಳು ಮೇಳಕ್ಕೆ ಆಗಮಿಸುತ್ತಿದ್ದು ಮುಂದಿನ ಭವಿಷ್ಯಕ್ಕಾಗಿ ತಮ್ಮ ನೆಚ್ಚಿನ ಕಾಲೇಜುಗಳ ಬಗ್ಗೆ ಮಾಹಿತಿ ಪಡೆದುಕೊಳ್ತಿದ್ದಾರೆ. ಇದರೊಂದಿಗೆ ಬಂಪರ್ ಗಿಫ್ಟ್‌ಗಳನ್ನೂ ಬಾಚಿಕೊಂಡಿದ್ದಾರೆ.

ಹೌದು. ಜೀನಿ ಸ್ಲಿಮ್‌ ಪ್ರಾಯೋಜಕತ್ವದಲ್ಲಿ ಲಕ್ಕಿಡಿಪ್‌ ವಿನ್ನರ್‌ಗಳಿಗೆ ಪ್ರತಿ ಒಂದು ಗಂಟೆಗೆ ಒಂದು ಟ್ಯಾಬ್‌ ಮತ್ತು ಸಪ್ತಗಿರಿ ಎನ್‌ಪಿಎಸ್‌ ವಿಶ್ವವಿದ್ಯಾಲಯದ ಕಡೆಯಿಂದ ಲ್ಯಾಪ್‌ಟಾಪ್‌ಗಳನ್ನ ಬಹುಮಾನಗಳನ್ನಾಗಿ ಕೊಡಲಾಗುತ್ತಿದೆ. ಮೊದಲ ದಿನ ಸಪ್ತಗಿರಿ ಎನ್‌ಪಿಎಸ್‌ ವಿವಿಯು ಓರ್ವ ವಿದ್ಯಾರ್ಥಿನಿಗೆ ಲ್ಯಾಪ್‌ಟಾಪ್‌ ಬಹುಮಾನ ನೀಡಿದ್ರೆ, ಜೀನಿ ಸ್ಲಿಮ್‌ ಲಕ್ಕಿಡಿಪ್‌ನಲ್ಲಿ ಗೆದ್ದ ಇಬ್ಬರು ವಿದ್ಯಾರ್ಥಿಗಳಿಗೆ ಟ್ಯಾಬ್‌ಗಳನ್ನ ಬಹುಮಾನವಾಗಿ ನೀಡಿತು. ಶಿವಮೊಗ್ಗದ ವಿದ್ಯಾರ್ಥಿನಿ ಶ್ವೇತಾ ಲ್ಯಾಪ್‌ಟಾಪ್‌ ಬಹುಮಾನ ಬಾಚಿಕೊಂಡರೆ, ಸಂಭ್ರಮ, ಆದಿತ್ಯ ಶಂಕರ್‌ ಲಕ್ಕಿಡಿಪ್‌ನಲ್ಲಿ ಟ್ಯಾಬ್‌ ಪಡೆದ ಅದೃಷ್ಟವಂತರಾದ್ರು. ಬಹುಮಾನ ಪಡೆದು ಪಬ್ಲಿಕ್‌ ಟಿವಿಗೆ ಧನ್ಯವಾದ ಹೇಳಿದ್ರು.

ನಗರದ ಮಲ್ಲೇಶ್ವರಂನ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಪಿಜಿ ಕೋರ್ಸ್‌ಗಳ ಮೆಗಾ ಶೈಕ್ಷಣಿಕ ಮೇಳಕ್ಕೆ ‘ಪಬ್ಲಿಕ್‌ ಟಿವಿ’ ಮುಖ್ಯಸ್ಥರಾದ ಹೆಚ್‌.ಆರ್‌.ರಂಗನಾಥ್‌ (H.R.Ranganath) ಬೆಳಗ್ಗೆ ಚಾಲನೆ ಕೊಟ್ಟರು. ಟೇಪ್‌ ಕತ್ತರಿಸುವ ಮೂಲಕ ಮೇಳವನ್ನು ಉದ್ಘಾಟಿಸಲಾಯಿತು. ಮಲ್ಲೇಶ್ವರಂ ಶಾಸಕ ಡಾ. ಸಿ.ಎನ್.ಅಶ್ವಥ್‌ ನಾರಾಯಣ್‌ (Ashwath Narayan) ಅವರು ಸಾಥ್‌ ನೀಡಿದರು. ಪ್ರೆಸಿಡೆನ್ಸಿ ಯೂನಿವರ್ಸಿಟಿಯ ವಿಸಿ ಡಾ. ವಿದ್ಯಾಶಂಕರ್ ಶೆಟ್ಟಿ, ಈಸ್ಟ್‌ ವೆಸ್ಟ್‌ ಗ್ರೂಪ್‌ ಆಫ್‌ ಇನ್‌ಸ್ಟಿಟ್ಯೂಷನ್‌ನ ಮುಖ್ಯಸ್ಥರಾದ ರಶ್ಮಿ ರವಿಕಿರಣ್‌ ಉಪಸ್ಥಿತರಿದ್ದರು.

45ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು ಭಾಗಿ
45ಕ್ಕೂ ಹೆಚ್ಚು ಪ್ರಮುಖ ಶಿಕ್ಷಣ ಸಂಸ್ಥೆಗಳು ಒಂದೇ ಸೂರಿನಡಿ ಪಾಲ್ಗೊಂಡಿವೆ. ಉದ್ಘಾಟನೆ ಬಳಿಕ ಎಜುಕೇಷನ್‌ ಎಕ್ಸ್‌ಫೋದಲ್ಲಿ ಪಾಲ್ಗೊಂಡಿರುವ ವಿವಿಧ ಸ್ಟಾಲ್‌ಗಳಿಗೆ ಅತಿಥಿಗಳು ಭೇಟಿ ನೀಡಿದರು. ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ದೀಪ ಬೆಳಗುವ ಮೂಲಕ ವೇದಿಕೆ ಕಾರ್ಯಕ್ರಮ ಉದ್ಘಾಟಿಸಲಾಯಿತು.

ಇನ್ನೂ ಪಬ್ಲಿಕ್‌ ಟಿವಿಯ ಮೆಗಾ ಎಜುಕೇಷನ್‌ ಎಕ್ಸ್‌ಪೋಗೆ ಮೊದಲ ದಿನ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಿವಿಧ ಭಾಗಗಳಿಂದ ವಿದ್ಯಾರ್ಥಿಗಳು ಶೈಕ್ಷಣಿಕ ಮೇಳಕ್ಕೆ ಆಗಮಿಸುತ್ತಿದ್ದಾರೆ. ಪೋಷಕರ ಜೊತೆ ಮೇಳದಲ್ಲಿ ಪಾಲ್ಗೊಂಡು ಪಿಜಿ ಕೋರ್ಸ್‌ಗಳ ಬಗ್ಗೆ ಉಪಯುಕ್ತ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.

Share This Article