ಅನ್ನ ಹಾಕಿದ ಮನೆಯ ಋಣ ತೀರಿಸಲು ಪ್ರಯತ್ನಿಸಿದ ಶ್ವಾನ!

Public TV
1 Min Read

ಬೆಂಗಳೂರು: ನಗರದಲ್ಲಿ ಕಳ್ಳರು ಪೊಲೀಸರಿಗೆ ಹೆದರುತ್ತಾರೋ ಇಲ್ಲವೋ, ಆದರೆ ಬೀದಿ ನಾಯಿಗಳಿಗೆ ಹೆದರಲೇಬೇಕಾದ ಘಟನೆಯೊಂದು ನಗರದ ಹೊಸಗುಡ್ಡದ ಹಳ್ಳಿಯ ನೆಹರು ರಸ್ತೆಯಲ್ಲಿ ನಡೆದಿದೆ.

ರಸ್ತೆಯಲ್ಲಿ ತಡರಾತ್ರಿ ಒಬ್ಬಂಟಿಯಾಗಿ ಓಡಾಡುವ ಜನರನ್ನು ಟಾರ್ಗೆಟ್ ಮಾಡಿ ಮಾರಕಾಸ್ತ್ರಗಳಿಂದ ಅವರನ್ನು ಬೆದರಿಸಿ ಹಣ ದೋಚಲು ಯತ್ನಿಸಿದ್ದ ಕಳ್ಳನೊಬ್ಬನನ್ನು ಹಿಮ್ಮೆಟಿಸಲು ಬೀದಿ ನಾಯಿಯೊಂದು ಯಶಸ್ವಿಯಾಗಿದೆ.

ಖತರ್ನಾಕ್ ಕಳ್ಳನೊಬ್ಬ ಕೈಯಲ್ಲಿ ಮಚ್ಚು ಹಿಡಿದು ಹೊಸಗುಡ್ಡದಹಳ್ಳಿಯ ನೆಹರು ನಗರಕ್ಕೆ ಎಂಟ್ರಿ ಕೊಟ್ಟಿದ್ದ. ಈತನನ್ನು ನೋಡಿದ್ದೆ ತಡ ನಾಯಿ ಜೋರಾಗಿ ಬೊಗಳಲು ಆರಂಭ ಮಾಡಿದೆ. ಆದರೆ ಕೈಯಲ್ಲಿ ಆಯುಧ ಇದ್ದ ಕಾರಣ ನಾಯಿಯನ್ನು ಓಡಿಸಲು ಯತ್ನಿಸಿದ ಕಿಡಿಗೇಡಿ ರಣಧೀರನಂತೆ ಪೋಸ್ ಕೊಟ್ಟಿದ್ದಾನೆ. ಆದರೆ ನಾಯಿ ಸತತವಾಗಿ ಬೊಗಳಲು ಆರಂಭಿಸಿದ ಕಾರಣ ಕಳ್ಳ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾನೆ.

ನಾಯಿ ನಿರಂತರವಾಗಿ ಬೊಗಳಲು ಆರಂಭಿಸಿದ ಕಾರಣ ಸ್ಥಳೀಯರು ಮನೆಯ ಲೈಟ್ ಆನ್ ಮಾಡಿ ಹೊರ ಬರಲು ಪ್ರಯತ್ನಿಸಿದ್ದು, ಇದನ್ನು ಕಂಡ ಕಳ್ಳ ಸಿಕ್ಕಿ ಬೀಳುವ ಭಯದಿಂದ ಓಡಲು ಆರಂಭಿಸಿದ್ದಾನೆ. ನಾಯಿಯೂ ಕೂಡ ಆತನನ್ನು ಬೆನ್ನಟ್ಟಿ ಆ ರಸ್ತೆಯಿಂದಲೇ ಓಡಿಸಿದೆ. ಈ ದೃಶ್ಯಗಳು ಸ್ಥಳದಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ರಸ್ತೆಯ ಒಂದೆರಡು ಮನೆಗಳ ತುತ್ತು ಅನ್ನ ತಿಂದಿರುವ ನಾಯಿ ಕಳ್ಳನನ್ನು ಓಡಿಸಿ ಋಣ ತೀರಿಸಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *