ಪೀಣ್ಯ ಫ್ಲೈಓವರ್ ದುರಸ್ತಿಗೆ ಬಂದು 3 ತಿಂಗಳು ಕಳೆದ್ರೂ ಸರ್ಕಾರ ಮೌನ..!

Public TV
1 Min Read

– RTI ಮಾಹಿತಿಯಲ್ಲಿ ಹೈವೆ ಹೈಡ್ರಾಮ ಬಟಾಬಯಲು

ಬೆಂಗಳೂರು: ಪೀಣ್ಯ ಫ್ಲೈಓವರ್ ಕಳಪೆ ಕಾಮಗಾರಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಸ್ವತಃ ಸಿಎಂ ಇದು ಹೆವಿ ಲೋಡೆಡ್ ವಾಹನಗಳಿಗೆ ಸಂಚಾರಿ ಯೋಗ್ಯವಲ್ಲ, ಕಳಪೆ ಅಂದಿದ್ರು. ಭಾರತೀಯ ವಿಜ್ಞಾನ ಸಂಸ್ಥೆ ವರದಿ ಕೊಟ್ಟಿದೆ ಅಂತಾ ಶಾಸಕರು ಹೇಳಿದ್ರು. ಆದರೆ ಇನ್ನೂ ಹೆವಿಲೋಡೆಡ್ ವಾಹನಕ್ಕೆ ಅನುವು ಮಾಡಿಕೊಡ್ತಿಲ್ಲ. ಈ ಮಧ್ಯೆ ಇದಕ್ಕೊಂದು ಬಿಗ್ ಟ್ವಿಸ್ಟ್ ಸಿಕ್ಕಿದೆ.

ಹೌದು. ರಾಜ್ಯದ ಬಹುತೇಕ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಪೀಣ್ಯ ಶಿವಕುಮಾರ ಸ್ವಾಮೀಜಿ ಮೇಲ್ಸೆತುವೆ ಸುರಕ್ಷತೆ ಮತ್ತು ಗುಣಮಟ್ಟ ಪರಿಶೀಲನೆಗೆ ಯಾವುದೇ ತಜ್ಞರ ಸಮಿತಿಯನ್ನು ನೇಮಕ ಮಾಡಿಲ್ವಂತೆ. ಹೀಗಂತ ಸ್ವತಃ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಒಪ್ಪಿಕೊಂಡಿದೆ. ಈ ಹಿಂದೆ ಸದನದಲ್ಲಿ ಸಿಎಂ ಪಿಲ್ಲರ್ ಕೇಬಲ್ ದೋಷ ಇದೆ. ಭಾರೀ ವಾಹನ ಸಂಚಾರಕ್ಕೆ ರಸ್ತೆ ಯೋಗ್ಯವಲ್ಲ ಅಂತಾ ಭಾರತೀಯ ವಿಜ್ಞಾನ ಸಂಸ್ಥೆ ವರದಿ ನೀಡಿದೆ ಅಂದ್ರು.

ಈ ಬಗ್ಗೆ ತಜ್ಞರ ಸಮಿತಿ ಯಾವ ವರದಿ ಕೊಟ್ಟಿದೆ, ಈ ಫ್ಲೈಓವರ್ ನಲ್ಲಿ ದೋಷ ಏನು ಅಂತಾ ತಿಳಿದುಕೊಳ್ಳಲು ಕೆಆರ್ ಎಸ್ ಪಕ್ಷದ ಜೀವನ್ ಅನ್ನೋರು ಆರ್‍ಟಿ ಐ ಮಾಹಿತಿ ಕೇಳಿದ್ರು. ಆದರೆ ಇದಕ್ಕೆ ಉತ್ತರ ಕೊಟ್ಟಿರುವ ಎನ್‍ಎನ್ ಅಧಿಕಾರಿಗಳು ಯಾವ ತಜ್ಞರ ಕಮಿಟಿಯೂ ರಚನೆಯಾಗಿಲ್ಲ ಯಾವ ವರದಿಯ ಕೊಟ್ಟಿಲ್ಲ ಅಂತಾ ಶಾಕಿಂಗ್ ಉತ್ತರ ಕೊಟ್ಟಿದ್ದಾರೆ.

ಹಾಗಿದ್ರೆ ತಜ್ಞರ ವರದಿ ಇಲ್ಲದೇ ಮೇಲ್ಸೇತುವೆ ಬಂದ್ ಆಯ್ತಾ ಅಥವಾ ಉದ್ದೇಶಪೂರ್ವಕವಾಗಿ ಸಾರ್ವಜನಿಕರಿಗೆ ಮಾಹಿತಿ ನೀಡಲು ಎನ್ ಎಚ್ ಅಧಿಕಾರಿಗಳು ಮುಚ್ಚಿಹಾಕುತ್ತಿದ್ದಾರಾ ಅನ್ನೋ ಪ್ರಶ್ನೆ ಮೂಡಿದೆ. ಇನ್ನು ಕೂಡ ಹೆವಿಲೋಡೆಡ್ ವಾಹನಕ್ಕೆ ಪ್ರವೇಶ ಯಾವಾಗ ದುರಸ್ತಿ ಹೇಗೆ ಯಾವ ಮಾಹಿತಿಯೂ ಲಭ್ಯವಿಲ್ಲ. ಆದ್ರೇ ಸುಂಕ ಮಾತ್ರ ಪ್ಲೈಓವರ್‍ನಲ್ಲಿ ಹೋಗದ ವಾಹನಗಳಿಗೂ ತೆಗೆದುಕೊಳ್ತಾ ಇದ್ದಾರೆ ಅಂತಾ ಆರ್ ಟಿಐ ಮಾಹಿತಿ ತೆಗೆದುಕೊಂಡ ಜೀವನ್ ಕಿಡಿಕಾರಿದ್ದಾರೆ.

ಒಟ್ಟಿನಲ್ಲಿ ಕಳಪೆ ಕಾಮಗಾರಿ ಬಗ್ಗೆ ಗಂಭೀರ ಆರೋಪ ಇರೋದ್ರಿಂದ ಇದನ್ನು ಮುಚ್ಚಿ ಹಾಕೋದಕ್ಕೆ ಪ್ರಯತ್ನ ಪಡ್ತಾ ಇದ್ದಾರಾ ಅನ್ನೋ ಅನುಮಾನ ಈಗ ಮೂಡಿದೆ.

 

Share This Article
Leave a Comment

Leave a Reply

Your email address will not be published. Required fields are marked *