ಮಂಡ್ಯ: ಗಣೇಶ ಮೆರವಣಿಗೆ ಮೇಲೆ ಕಲ್ಲು ತೂರಿದ ಬಳಿಕ ಮದ್ದೂರು (Madduru) ಪಟ್ಟಣ ಉದ್ವಿಗ್ನಗೊಂಡು ಸಾಲು ಹೋರಾಟಕ್ಕೆ ಸಾಕ್ಷಿಯಾಗಿತ್ತು. ಸದ್ಯ ಸಹಜ ಸ್ಥಿತಿಗೆ ಮರಳಿರುವ ಮದ್ದೂರಿನಲ್ಲಿ ಪ್ರಗತಿಪರ ಸಂಘಟನೆಗಳ ಸದಸ್ಯರು ಸೌಹಾರ್ದ ನಡಿಗೆ ನಡೆಸಲು ತಯಾರಿ ನಡೆಸಿದ್ದರು. ಆದರೆ ಮುಸ್ಲಿಂ ಮುಖಂಡನೊಬ್ಬ (Muslim Leader) ಆಡಿದ ಮಾತು ಈಗ ಪ್ರಗತಿಪರರ ಹೋರಾಟಕ್ಕೆ ಬ್ರೇಕ್ ಹಾಕುವಂತೆ ಮಾಡಿದೆ.
ಸಹಜ ಸ್ಥಿತಿ ಮರಳಿರುವ ಮದ್ದೂರು ಪಟ್ಟಣದಲ್ಲಿ ಸೌಹಾರ್ದ ನಡಿಗೆ ನೆಪದಲ್ಲಿ ಸೆ.22 ಬೃಹತ್ ಪ್ರತಿಭಟನೆ ನಡೆಸಲು ಪ್ರಗತಿಪರರು ತೀರ್ಮಾನಿಸಿದ್ದಾರೆ. ಬಿಜೆಪಿ, ಹಿಂದೂಪರ ಸಂಘಟನೆಗಳಿಂದ ಪಟ್ಟಣದಲ್ಲಿ ಕೋಮು ಸಂಘರ್ಷ ನಡೆದಿದೆ. ಕೋಮು ಸಂಘರ್ಷ (Communal Clash) ನಡೆದ ಪಟ್ಟಣದಲ್ಲಿ ದ್ವೇಷ ಕಡಿಮೆ ಮಾಡಲು ಸೌಹಾರ್ದ ನಡಿಗೆ ಮಾಡುತ್ತೇವೆ ಎಂದು ಹೇಳಿದ್ದರು. ಅಷ್ಟೇ ಅಲ್ಲದೇ ಸೌಹಾರ್ದ ನಡಿಗೆ ಸಂಬಂಧ ಪೂರ್ವಭಾವಿ ಸಭೆ ಸಹ ನಡೆಸಿದ್ದರು. ಇದನ್ನೂ ಓದಿ: ಮದ್ದೂರು ಗಣೇಶ ಮೆರವಣಿಗೆಗೆ ಕಲ್ಲು ತೂರಿದ ಕೇಸ್ – ಪಾತ್ರವೇ ಇಲ್ಲದ ಪೊಲೀಸ್ ಅಧಿಕಾರಿ ವರ್ಗಾವಣೆ
ಈ ಸಭೆಯಲ್ಲಿ ಭಾಗವಹಿಸಿದ್ದ ಮುಸ್ಲಿಂ ಮುಖಂಡ ಆದಿಲ್ ಖಾನ್, ಪ್ರಗತಿಪರರ ಹೋರಾಟಕ್ಕೆ ನಾನೇ ಫಂಡಿಂಗ್ ಮಾಡುತ್ತೇನೆ. ಖರ್ಚು, ವೆಚ್ಚ ನಾನೇ ಭರಿಸುತ್ತೇನೆ ಎಂದಿದ್ದು ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಫಂಡಿಂಗ್ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಪ್ರಗತಿಪರರ ಹೋರಾಟಕ್ಕೆ ಪೊಲೀಸರೇ ಬ್ರೇಕ್ ಹಾಕಲು ನಿರ್ಧರಿಸಿದ್ದಾರೆ.
ಸಹಜ ಸ್ಥಿತಿಗೆ ಮರಳುತ್ತಿರುವ ಈ ವೇಳೆ ಈ ಕಾರ್ಯಕ್ರಮದಲ್ಲಿ ನಾಯಕರು ಮಾತನಾಡುವ ಹೇಳಿಕೆ ಮತ್ತೆ ಪ್ರಚೋದನೆಗೆ ಕಾರಣವಾಗಬಹುದು. ಈಗ ಅನುಮತಿ ಕೊಟ್ಟರೇ ಮತ್ತಷ್ಟು ಗಲಾಟೆಗೆ ಕಾರಣವಾಗಬಹುದು ಎಂಬುದನ್ನ ಅರಿತ ಮಂಡ್ಯ ಎಸ್‌ಪಿ (Mandya SP) ಅನುಮತಿ ನೀಡದಿರಲು ನಿರ್ಧರಿಸಿದ್ದಾರೆ.
ಇನ್ನೊಂದು ಕಡೆ ಈ ಪ್ರಗತಿಪರರ ಹೋರಾಟಕ್ಕೆ ಕರೆ ನೀಡಿದರು ನಮ್ಮ ಮದ್ದೂರು ತಾಲೂಕಿನವರೇ ಅಲ್ಲ. ಕಮ್ಯೂನಿಸ್ಟ್ ಪಕ್ಷದ ಹೋರಾಟ ಇದಾಗಿದ್ದು ಈ ಹೋರಾಟಗಳಿಗೆ ಯಾವುದೇ ಕಾರಣಕ್ಕೆ ಅನುಮತಿ ನೀಡಬಾರದು ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆ, ರೈತ ಸಂಘಟನೆಗಳು ದೂರು ನೀಡಿದೆ. ಆದಿಲ್ ಖಾನ್ ಪ್ರಚೋದನೆ ಮಾಡಿದ್ದು ಆತನನ್ನು ಕೂಡಲೇ ಬಂಧಿಸಬೇಕು ಎಂದು ಬಿಜೆಪಿ, ಹಿಂದೂಪರ ಸಂಘಟನೆಗಳು ಆಗ್ರಹಿಸಿವೆ.