ಶಿವನಿಗೆ ಅರ್ಪಿಸಿದ ಒಂದೇ ನಿಂಬೆಹಣ್ಣು 35,000 ರೂ.ಗೆ ಹರಾಜು

Public TV
1 Min Read

ಚೆನೈ: ತಮಿಳುನಾಡಿನ (Tamil Nadu) ದೇವಸ್ಥಾನ ಒಂದರಲ್ಲಿ ಒಂದು ನಿಂಬೆ ಹಣ್ಣು 35,000 ರೂ.ಗೆ ಹರಾಜಾಗಿದೆ ಎಂದು ವರದಿಯಾಗಿದೆ.

ಶಿವಗಿರಿ ಗ್ರಾಮದ ಬಳಿ ಇರುವ ಪಜಪೂಸಯ್ಯನ ದೇವಸ್ಥಾನದಲ್ಲಿ ಮಹಾಶಿವರಾತ್ರಿ (Mahasivarathiri) ಉತ್ಸವದ ದಿನ ಶಿವನಿಗೆ ಅರ್ಪಿಸಿದ ನಿಂಬೆಹಣ್ಣು ಮತ್ತು ಹಣ್ಣುಗಳು ಸೇರಿದಂತೆ ಇತರ ವಸ್ತುಗಳನ್ನು ಹರಾಜು ಮಾಡಲಾಯಿತು. ಹರಾಜಿನಲ್ಲಿ ಸುಮಾರು 15 ಭಕ್ತರು ಭಾಗವಹಿಸಿದ್ದರು. ಈರೋಡ್‍ನ ಭಕ್ತರೊಬ್ಬರು ನಿಂಬೆ ಹಣ್ಣನ್ನು 35,000 ರೂ.ಗೆ ಹರಾಜಿನಲ್ಲಿ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಮೋದಿ ಗ್ಯಾರಂಟಿಗೆ ವಾರಂಟಿ ಇಲ್ಲ: ಟಿಎಂಸಿ ನಾಯಕ ಟೀಕೆ

ದೇವಸ್ಥಾನದ ಅರ್ಚಕರು ನಿಂಬೆಹಣ್ಣನ್ನು ದೇವರ ಮುಂದೆ ಇಟ್ಟು ಪೂಜೆ ಮಾಡಿ, ನೂರಾರು ಭಕ್ತರ ಸಮ್ಮುಖದಲ್ಲಿ ಹರಾಜಿನಲ್ಲಿ ಅತಿ ಹೆಚ್ಚು ಬಿಡ್ ಮಾಡಿದ ವ್ಯಕ್ತಿಗೆ ನೀಡಿದ್ದಾರೆ.

ನಿಂಬೆಹಣ್ಣನ್ನು ಪಡೆಯುವ ವ್ಯಕ್ತಿಗೆ ಆರೋಗ್ಯ ವೃದ್ಧಿಯಾಗಿ, ಮುಂಬರುವ ವರ್ಷಗಳಲ್ಲಿ ಸಂಪತ್ತು ಹೆಚ್ಚಾಗಲಿದೆ ಎಂಬ ನಂಬಿಕೆ ಇದೆ. ಇದನ್ನೂ ಓದಿ: ಅಕ್ರಮವಾಗಿ ನಿರ್ಮಾಣವಾಗಿದ್ದ ದರ್ಗಾ, ದೇಗುಲಗಳನ್ನು ಕೆಡವಿದ ಪೊಲೀಸರು!

Share This Article